ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಿ – ಧನಾತ್ಮಕ ಚಿಂತನೆಯೊಂದಿಗೆ ಬೆಳೆಸಿ

Advt_Headding_Middle
Advt_Headding_Middle

ಕೊರೊನ ಮಹಾ ಮಾರಿಯಿಂದ ಇಂದು ದೇಶವೇ ಲಾಕ್ ಡೌನ್ ಅನ್ನು ಎದುರಿಸುತ್ತಿದೆ. ಮತೊಮ್ಮೆ ಮನೆ ಮಂದಿ ಎಲ್ಲಾ ಒಟ್ಟಿಗೆ ಸೇರಿ ಸಮಯ ಕಳೆಯುವ ಸಂದರ್ಭ ಒದಗಿ ಬಂದಿದೆ.
ಈ ಸಂದರ್ಭದಲ್ಲಿ ನಾವು ನಮ್ಮ ಮಕ್ಕಳ ಬಗ್ಗೆ ಒಂದಿಷ್ಟು ಕಾಳಜಿ ವಹಿಸುವುದು ಮುಖ್ಯವಾಗಿದೆ. ಮನೆಯಲ್ಲಿ ಮಕ್ಕಳೊಂದಿಗೆ ಆಟ ಪಾಠಗಳೊಂದಿಗೆ ಮಕ್ಕಳ ದಿನಚರಿಯ ಬಗ್ಗೆ ಕಾಳಜಿ ವಹಿಸಬೇಕು. ಜೀವನದ ಆಗು ಹೋಗುಗಳ ಬಗ್ಗೆ ತಿಳಿ ಹೇಳಬೇಕು. ನಮ್ಮ ಮನೆ, ಪರಿಸರ ಮತ್ತು ಸಮಾಜದಲ್ಲಿ ನಡೆಯುವ ವಿಚಾರಗಳ ಬಗ್ಗೆ ಮೆಲುಕು ಹಾಕುವ ಮಕ್ಕಳು ಪೋಷಕರ ಹಾದಿಯನ್ನು ಅನುಸರಿಸುತ್ತಾರೆ. ಹಿರಿಯ ರೊಂದಿಗೆ ಗೌರವದಿಂದ ನಡೆದು ಕೊಳ್ಳುವುದು, ದಿನನಿತ್ಯ ಒಂದೊಂದು ಒಳ್ಳೆಯ ವಿಚಾರಗಳ ಬಗ್ಗೆ ತಿಳಿದುಕೊಳ್ಳುವುದು, ಹೆಚ್ಚಾಗಿ ಪುಸ್ತಕಗಳನ್ನು ಓದುವುದು, ವೀರ ಪುರುಷರ ಆತ್ಮ ಕಥನ, ಮಹಾಭಾರತ, ರಾಮಾಯಣ, ನೀತಿ ಕಥೆಗಳು, ದೇವರ ನಾಮ, ಮತ್ತು ಬರೆಯುವ ಹವ್ಯಾಸ… ಹೀಗೆ ಹಲವಾರು ಚಟುವಟಿಕೆಗಳಿಂದ ಮನಸಿಗೆ ಗೆಲುವು ತುಂಬಬೇಕು.
ಶಾಲೆಯಲ್ಲಿ ಮಕ್ಕಳು ಇತರ ಮಕ್ಕಳೊಂದಿಗೆ ಆಟ ಪಾಠಗಳಲ್ಲಿ ನಲಿದಾಡತ್ತಿದ್ದರು.. ಈಗ ನಾಲ್ಕು ಗೋಡೆಗಳ ಮಧ್ಯೆ ಬಂದಿಯಾಗಿದ್ದಾರೆ… ಮೊಬೈಲ್ ಇಲ್ಲವೇ ಟಿವಿಗಳಿಗೆ ದಾಸರಾಗುತ್ತಿದ್ದಾರೆ… ಇವುಗಳಿನಿಂದ ಮಾನಸಿಕ ಖಿನ್ನತೆಗೆ ಒಳಗಾಗುವ ಸಂಭವ ಹೆಚ್ಚು..(ದೊಡ್ಡವರಿಗೆ ಕೂಡ.)ಆದುದರಿಂದ ಮನೆ ಮಂದಿಎಲ್ಲಾ ಒಟ್ಟು ಸೇರಿ ಉಭಯ ಕುಶಲೋಪರಿ ಹಂಚಿಕೊಂಡು ಪ್ರತಿಯೋರ್ವರ ಮನಸಿಗೆ ಪ್ರೋತ್ಸಾಹ ತುಂಬುವ ಪ್ರಯತ್ನ ಸಾಗಬೇಕು…..
ಉತ್ತಮ ವಿಚಾರಗಳು ನಮ್ಮ ಮನಸಿಗೆ ಬಂದಾಗ ಮಾತ್ರ ನಮ್ಮಲಿ ಸಂಸ್ಕಾರಯುತ ಆಲೋಚನೆಗಳು ಬರುತ್ತವೆ.. ಋಣತ್ಮಕ ವಿಚಾರಗಳು ಮನಸ್ಸನ್ನು ಘಾಸಿ ಮಾಡುತ್ತವೆ.

 

ದಿವ್ಯಾ ಸುಜನ್ ಗುಡ್ಡೆಮನೆ
ಶ್ರೀ ದುರ್ಗಾ ಕಂಪ್ಯೂಟರ್ ಗುತ್ತಿಗಾರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.