Breaking News

ಲಾಕ್‌ಡೌನ್ ಅವಧಿಯಲ್ಲಿ ಯಕ್ಷಗಾನದ ಪದ್ಯ ಬರೆದು ಹಾಡಿದ ಭವ್ಯಶ್ರೀ ಕುಲ್ಕುಂದ : ವೀಡಿಯೋ ವೈರಲ್

Advt_Headding_Middle
Advt_Headding_Middle

ಲಾಕ್‌ಡೌನ್ ಅವಧಿಯಲ್ಲಿ ಮನೆಯಲ್ಲಿದ್ದ ಯಕ್ಷಗಾನ ಭಾಗವತೆ ಶ್ರೀಮತಿ ಭವ್ಯಶ್ರೀ ಕುಲ್ಕುಂದ ಯಕ್ಷಗಾನ ಪದ್ಯವನ್ನು ರಚಿಸಿ ಹಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.


ಖ್ಯಾತ ಭಾಗವತೆಯಾಗಿರುವ ಭವ್ಯಶ್ರೀಯವರು ಲಾಕ್‌ಡೌನ್ ಅವಧಿಯಲ್ಲಿ ಯಕ್ಷಗಾನ ಪ್ರದರ್ಶನಗಳಿಲ್ಲದೆ ಮನೆಯಲ್ಲೇ ಇದ್ದರು. ಈ ವೇಳೆ ಯಕ್ಷಗಾನ ಪದ್ಯವನ್ನು ರಚಿಸಿ ಹಾಡಿದ್ದಾರೆ.
ವಿಶೇಷವೆಂದರೆ ಮಂಗಳೂರಿನಲ್ಲಿ ಹಾಡಿದ ಇವರ ಹಾಡಿಗೆ ಚೆನ್ನೈಯಿಂದ ವಿಕ್ರಂ ಮಯ್ಯ ಮದ್ದಳೆ ನುಡಿಸಿದ್ದಾರೆ. ಆಧುನಿಕ ತಂತ್ರಜ್ಞಾನದ ಮೂಲಕ ಸಿದ್ಧಗೊಂಡ ಈ ಹಾಡು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

 

//ಸಾಂಗತ್ಯ//
ಹರಸೆಮ್ಮ ಜಗನ್ಮಾತೆ ದುರಿತನಿವಾರಿಣಿ |
ಕರುಣಾವಾರಿಧಿ ಸಲಹೆಮ್ಮ||
ಮೊರೆಹೊಕ್ಕವರಕಾಯ್ವ
ವರದೆಪರಾಶಕ್ತಿ|
ನಿರತವೂ ಪೊರೆಯೆಂಬೆವಮ್ಮಾ||೧||
ವೀಣಾಪುಸ್ತಕಪಾಣಿ
ಗಾನವಿಶಾರದೆ |
ದೀನೋದ್ಧಾರಿಣಿ ಸರ್ವೇಶ್ವರಿಯೇ ||
ದಾನವಾಂತಕಿ ಲೋಕ
ಮಾನ್ಯಳೆ ಜಗದಂಬೆ|
ಸಾನುರಾಗದಿ ರಕ್ಷಿಸೆಮ್ಮಾ||೩||
ವರದಾತೆ ಶುಭಪ್ರದೆ
ಪರಮಮಂಗಲೆಬೊಮ್ಮ -|
ನರಸಿ ಶಾರದೆ ಸರಸತಿಯೇ ||
ಪರಮಪಾವನವಾದ
ವರಕಟೀಲಿನ ಪುಣ್ಯ-|
ಧರೆಯಲಿ ನಿಂದಿಹ ದುರ್ಗೆ||೪ ||
ಮನುಕುಲಕ್ಕೊದಗಿದ
ಘನವ್ಯಾಧಿಯಂ ನೀನು |
ಕ್ಷಣಮಾತ್ರ ದಲಿಪರಿ ಹರಿಸು||
ಪ್ರಣವ ಸ್ವರೂಪಿಣಿ
ವಿನುತೆ ಶಾಂಭವಿ ದೇವಿ|
ಜನನಿಯೆ ಪಾಪವಿದೂರೆ/||೫||

-ಭವ್ಯಶ್ರೀ ಕುಲ್ಕುಂದ


ಮಧುಮಾಧವಿ ಏಕ

ಶರಣೆಂಬೆ ಗಣಪತಿ ಗೌರಿಯ ಕಂದ|ಕರಿಮುಖ ವಂದಿಪೆನಾದರದಿಂದ |ನಿರುಪಮ ನಿರ್ಮಲ ಸದ್ಗುಣ ಸಾಂದ್ರ| ಸುರಮುನಿ ಸೇವಿತ ಸದಮಲ ಚಂದ್ರ||೧||

ಮೋದಕ ಕಬ್ಬು ಹೋಳಿಗೆ ಲಡ್ಡು ಮೆಲುವ|
ಮೋದದ ಮೂರ್ತಿ ಭಕ್ತರಿಗೆತಾನೊಲಿವ| ನಾದಲೋಲನು ಸಾಮಗಾನಕೆ ನಲಿವ|ಸಾದರದಲಿ ಸ್ತುತಿ ಗೈವರ ಪೊರೆವ ||೨||

ಮೆರೆವ ಚಾಮರಕರ್ಣ ಸುರುಚಿರಾನನವು |
ಪರಮ ಪಾಶಾಂಕುಶ ಹಸ್ತದೊಳಿಹವು|ನಿರಿಯುಡುಗೆಯು ಸ್ವರ್ಣದುಡಿದಾರ ವಿಹುದು |
ಕಿರುಗೆಜ್ಜೆಗಳದನಿ ಕಿನಿರೆನ್ನುತಿಹುದು||೩||

ಮೊದಲ ಪೂಜೆಯಗೊಂಬ ವಿಘ್ನನಾ ಶಕನೇ |
ಒದಗಿಸು ಸಿದ್ಧಿ ಬುದ್ಧಿಯನೆಲ್ಲ ನೀನೇ |ಮದವೂರ ಪುರವಾಸ ಲೋಕವಂದಿತನೆ|
ಮುದದಿಂದ ಪೊರೆ ನಮ್ಮ ಹೇಗಣಾಧಿಪನೆ ||೪||

– ಭವ್ಯಶ್ರೀ ಕುಲ್ಕುಂದ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.