ಹ್ಯಾಂಗೆ ಮರೆಯಲೇ ತವರ

Advt_Headding_Middle
Advt_Headding_Middle

 

ತವರು ತವರೆಂದು ಅತಿಯಾಗಿ ಹೇಳಬ್ಯಾಡ/
ತವರೇನು ನಿನಗಾ ಸ್ಥಿರವಲ್ಲ/ ಅಕ್ಕಯ್ಯ
ಗಂಡನ ಮನಿಯೇ ಬಲು ಶ್ರೇಷ್ಟ.//ತವರು//

ತವರಲ್ಲಿ ತಂಪುಂಟು,ತಾಯಿಗೆ
ನೆನಪುಂಟು/
ಅಣ್ಣ ತಮದೀರಾ ಸೊಗಸುಂಟು/ಈಮನಕೆ
ನಾ ಹ್ಯಾಂಗೆ ಮರೆಯಲಿ ತವರನ್ನ//ತವರು//

ತವರಲ್ಲಿಮಾವಿತ್ತು; ತುಳುವ ಹಲಸಿತ್ತು,
ಬೇವಿನ ಎಲೆಯು ಘಮ್ಮೆಂದು/
ಕರೆದರೆ
ಬಾಯಲ್ಲಿ ಜೊಲ್ಲು ಜಿನುಗಿತ್ತು.//ತವರು//

ಹಟ್ಟಿಯ ತುಂಬಾ ಗೋವಿನ ಅಂಬಾ/
ತಟ್ಟೆಯ ತುಂಬಾ ಕೆನೆಮೊಸರು/ತುಂಬಿತ್ತು.
ತೋಟದ ತುಂಬಾ ಹಸಿರಿತ್ತು.//ತವರು//

ಆಡಿದ್ದೆ ,ಹಾಡಿದ್ದೆ,ಎದ್ದಿದ್ದೆ,ಬಿದ್ದಿದ್ದೆ
ಬಣ್ಣ ಬಣ್ಣದ ಕನಸ ಕಂಡಿದ್ದೆ./ನಾನವ್ವ
ಬಾಲ್ಯದ ಸವಿನೆನಪ ಮೆದ್ದಿದ್ದೆ.//ತವರು//

ಇಂದು ನಿನ್ನೆಯದಲ್ಲ;ಹೇಳಿ ಮುಗಿಯುವುದಿಲ್ಲ,
ತವರೂರ ಬಾಂಧವ್ಯ ಬಲುಗಟ್ಟಿ
ಯಾವಾಗಲು
ನೆನೆದಾರೆ ತಂಪು ಮನ ಮುಟ್ಟಿ//ತವರು//

ಹೋಗಿ ಬರುವಾಗೆಲ್ಲ ತುಂಬುವರು ಮಡಿಲು.
ಕೊಟ್ಟ ಉಡುಗೊರೆಗೆ ಬೆಲೆಯೆಷ್ಟು/ಕೇಳಿದರೆ,
ಅಪ್ಪ ಅಮ್ಮನ ಮಡಿಲಾ ಸುಖವೆಷ್ಟು?//ತವರು//

ಹೋದಲ್ಲಿ ,ಬಂದಲ್ಲಿ ,ನಿಂತಲ್ಲಿ ಕೂತಲ್ಲಿ
ಎಲ್ಲೆಲ್ಲಿ ನನಗೆ ತವರವರು/ನೆನಪೇ
ಮುದವಿತ್ತು ಮನಕೇ ಸಲಹ್ಯಾವ
//ತವರು//

ತವರವರ ನೆನೆದರೆ ಮನಸ್ಸು ಮಲ್ಲಿಗೆಯಾಯ್ತು./
ಮಾವಿನ ಹುಳಿಯೂ ಸಿಹಿಯಾಯ್ತು./ತುಟಿಯಲ್ಲಿ
ಮಂದಹಾಸವು ಮೆಲ್ಲ ಮಿನುಗಿತ್ತು.//ತವರು//

 

ಸಾನು ಉಬರಡ್ಕ.

ಸಂಧ್ಯಾ ಕುಮಾರ್ ಉಬರಡ್ಕ
ಸಹಶಿಕ್ಷಕರು.ಸರಕಾರಿ ಪ್ರೌಢಶಾಲೆ ದುಗ್ಗಲಡ್ಕ.

W/O.ಈಶ್ ಕುಮಾರ್ ಉಬರಡ್ಕ
“ದುರ್ಗಾನಿವಾಸ”
ಉಬರಡ್ಕ-ಮಿತ್ತೂರು ಗ್ರಾಮ ಮತ್ತು ಅಂಚೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.