Breaking News

ಕವನ : ಹಳ್ತು ನೆನ್ಪು

Advt_Headding_Middle
Advt_Headding_Middle

ನಮ್ಮ ಕುಲದೇವ್ರು ಶ್ರೀ ತಿರುಪತಿ ವೆಂಕಟರಮಣ||
ಒಳ್ಳ ಕೆಲ್ಸ ಮಾಡಿಕೆ ಮುಂದೆ ನಾವು ಮಾಡ್ವೆ ಅವ್ಕೆ ನಮನ||
ಆಗ ಆದೆ ನಾವು ಮಾಡ್ದ ಎಲ್ಲಾ ಕೆಲ್ಸಗ ಸುಗಮ…

ನಂಬಿದವ್ಕೆ ಇಂಬು ಕೊಟ್ಟವೆ ಧರ್ಮದೆವ್ವ , ಉಪದೆವ್ವಗ||
ಮೂರು ವರ್ಷಕ್ಕೊಮ್ಮೆ ಉರ್ಗೋಕು ಇವುಕೆ ಕೋಲದ ವಾಲಗ||
ನಂಬದೆ ಇರ್ದುಲೆ ಇವರ ಕಾರ್ಣಿಕನ ನೋಡ್ದ ನಮ್ಮ ಜನoಗ..

ಬಲೀಂದ್ರ ಮರ ಹಾಕುತ್ತಿದ್ದೋ ನಡು ಮನೆಲಿ||
ಎಲ್ಲವೂ ಸೇರಿ ಸಿಂಗಾರ ಮಾಡ್ತಿದ್ದೋ ಭರ್ಜರಿಲಿ||
ಕೂ..ಹಾಕಿಕೆ ಕಾಯೊತ್ತಿದ್ದೋ ಮಕ್ಕ ಮೊರಿಗ ಕಾತುರಲಿ…

ಮುಡಿಪು,ಕಾರ್ತಿಂಗಳ ಪೂಜೆ ಮಾಡುವೆ ಆದಿ ಮನೇಲಿ||
ಪಾಷಾನಮೂರ್ತಿ,ಗೋ ಪೂಜೆ ಮಾಡ್ವೆ ಅವರವರ ಮನೆಲಿ||
ಅವ್ಲೆಕ್ಕಿ ಹಾಕುವ ಕ್ರಮ ಉಟ್ಟು ಸದ್ಯ ಕಾಲ ಆದವುಕ್ಕೆ ಮೃತರ ಮನೆಲಿ..

ಹಂದಿ,ಕೋಳಿ,ಅಪ್ಪದಿಟ್ಟು,ಇಡ್ಲಿ ಬಾಳೆ ಎಲೆನ ಒಂದು ಕಡೆಲಿ||
ಹಬ್ಬದ ವಿಶೇಷ ಕಾಯಲ್ ಬಾಳೆಹಣ್ಣ್ ಇನ್ನೊಂದು ಕೊಡಿಲಿ||
ಇದರ ಜಾಸ್ತಿ ತಿಂದ ಮಕ್ಕ ಶಾಲೆಗೆ ಹೋಗದೆ ಒಳ್ದ ಅಜೀರ್ಣಲಿ..

ಮಳ್ಗಾಲದ ದಿನ ಹಾಕುತ್ತಿದ್ದೊ ನೊಕ್ಕುಳು ಗಾಳ||
ಮನೆಗೆ ತಕಂಡ್ ಹೋತಿದ್ದೊ ಮೀನ್ ತುಂಬಿದ ಸಂಗೀಸ್ ಚೀಲ||
ಹುಳಿ ಮೆಣ್ಸು ಕಡ್ದ್ ಇಸಿ ಕಾಯತ್ತಿತ್ ಅಮ್ಮ ಶೀಲ..

ಅಪ್ರೂಪಲಿ ಸಿಗ್ತಿತ್ ಅಣ್ಬು, ಪತ್ರೊಡೆ ಮಳ್ಗಾಲಲಿ||
ಹಲ್ಸನಹಣ್,ಕಣಲೆ ಇಲ್ಲದೆ ಕಳ್ದ ಮಳ್ಗಾಲನೇ ಇರಿಕಿಲೆ ಆ ಕಾಲಲಿ||
ಸುಟ್ಟ ಬೀಜ,ಕಾಯಿಬೆಲ್ಲ ತಿಂದ ನೆನ್ಪು ಮಾತ್ರ ಉಟ್ಟು ಈಗ ಮನ್ಸಲಿ..

ಹಂದಿ ಬೀಳ್ಸಿಕೆ ನಾವ್ ಕಟ್ಟುತ್ತಿದ್ದೊ ಬೆಡಿ||
ಬಿದ್ದ ಹಂದಿನ ಸರಿ ಮಾಡಿಕೆ ಅತಿದ್ದೊ ಎಲ್ಲವೂ ರೆಡಿ||
ಪೊಲೀಸ್ ಗೆ ಗೊತ್ತಾಗಿ ಒಮ್ಮೊಮ್ಮೆ ಆಗ್ತಿತ್ ಅಜ್ಜಿಗೆ ಬೆಡಿ..

ಆಗ ಕಾಡಿಗೆ ಹೋತಿದ್ದೊ ಬಾರಿ ಕುಶಾಲಲಿ||
ಕೆಂಪ, ಪಾಂಜ, ಬರಿಕ ಹೊಡ್ದು ತಾತಿದ್ದೊ ಸುಲಾಭಲಿ||
ಹಿಂಗೆ ಎಲ್ಲವು ಗಮ್ಮತ್ ಮಾಡ್ಕಂಡ್ ಇರ್ತಿದ್ದೊ ನೆಮ್ಮದಿಲಿ..

ಸಾಲೆಗೆ ಹೋಕನ ಹೆದ್ರಿಸ್ತಿದ್ದೊ ಕೊರಗ, ಆಟಿ ಕಳಂಜಗ||
ಮನೆ ಮನೆಗೆ ಬರ್ತಿದ್ದೊ ಬಸವ, ಕುರುಕುರು ಮಾಮಗ||
ಮುಂದೆ ಇದರೆಲ್ಲ ನೋಡುವ ಭಾಗ್ಯ ಸಿಕ್ಕುದೆ ಸ್ವಲ್ಪ ಅನುಮಾನಗ..

ಭತ್ತ,ಬಾಳೆ,ಗೆಣ್ಸ್ ನಾವು ಬೆಳ್ಸುವ ಕೆಲವು ತಿಂಬ ಬೆಳೆಗ||
ಬೀಜ, ಚಾಳೆ, ಅಡಿಕೆ, ಮೆಣಸು ನಮ್ಮ ವಾಣಿಜ್ಯ ಬೆಳೆಗ||
ಕೋಳಿ,ಹಂದಿ,ನಾಯಿ,ದನ ನಮ್ಮ ಸಾಕು ಪ್ರಾಣಿಗ..

ಆಟಿ ಅಮವಾಸ್ಯೆ,ಕೆಡ್ಡಸ, ಬಿಸು ಗೌಡ್ರ ಕೆಲವು ಹಬ್ಬಗ||
ಆಚರಿಸದೆ ಇರ್ದುಲೆ ದಸರ, ದೀಪಾವಳಿ,ಚತುರ್ಥಿ,ಪಂಚಮಿ,ಅಷ್ಟಮಿನ ಈ ಗೌಡ್ರುಗ||
ಮಾದರಿ ಆಗಿ ಒಳ ಎಲ್ಲೋವ್ಕು ಈ ಒಕ್ಕಲಿಗ ಗೌಡ ಜನಾoಗ..

ರೊಟ್ಟಿ, ಪುಂಡಿ, ನೀರ್ದೋಸೆ, ಕಲ್ತಪ್ಪ ನಮ್ಮ ಕೆಲವು ತಿಂಡಿಗ||
ಅಪ್ಪದಿಟ್ಟು,ದೋಸೆ,ಇಡ್ಲಿ ಇವೆಲ್ಲಾ ನಮ್ಮ ಹುಳಿ ಹಿಟ್ಟುಗ||
ಒಮ್ಮೆಯಾರ್ ಇದರ ತಿನದವು ಇದ್ದರೆ ಅವು ದೊಡ್ಡ ದಡ್ಡoಗ..

ಚೆನ್ನಮಣೆ,ಲಗೋರಿ ನಮ್ಮ ಎಲ್ಲರ ಕೆಲವು ಆಟಗ||
ಕೋಳಿಕಟ್ಟ, ಕಾಯಿಕುಟ್ಟುದು ಮಾತ್ರ ದೊಡ್ಡವರ ಜೂಜಾಟಗ||
ಈ ಆಟಗಳ ಹೆಸ್ರು ಹೇಳ್ರೆ ಈಗನ ಮಕ್ಕಳಿಗೆ ಆಗದಿರಿಕಿಲೆ ಸೋಜಿಗ..

ಶ್ರೀಕಾಂತ್ ಪೂಂಬಾಡಿ
ಮಡಪ್ಪಾಡಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.