Breaking News

ಚೊಕ್ಕಾಡಿ: ಬೈಕ್ ಸ್ಕಿಡ್ ಸವಾರ ಗಂಭೀರ – ಆಸ್ಪತ್ರೆಗೆ ದಾಖಲು

Advt_Headding_Middle
Advt_Headding_Middle

ಅಮರಮುಡ್ನೂರು ಗ್ರಾಮದ ಪದವು ನಿವಾಸಿ ನಾರಾಯಣ ಪೂಜಾರಿ ಯವರು ಬೈಕ್ ಸ್ಕಿಡ್ ಆಗಿ ಬಿದ್ದು ಗಾಯಗೊಂಡ ಘಟನೆ ಎ.28 ರಂದು ವರದಿಯಾಗಿದೆ.
ಪದವಿನಲ್ಲಿರುವ ಕ್ವಾಟ್ರಸ್ ಬಳಿ ವಾಸವಿರುವ ನಾರಾಯಣ ಪೂಜಾರಿಯವರು ತನ್ನ ಬೈಕಿನಲ್ಲಿ ಬಟ್ಟೆ ಒಗೆಯಲೆಂದು ಪಕ್ಕದ ಹೊಳೆಗೆ ಹೋಗುತ್ತಿರುವ ಸಂದರ್ಭದಲ್ಲಿ ಚಿಲ್ಪಾರು ಎಂಬಲ್ಲಿ ಎದುರಿನಿಂದ ಬರುತ್ತಿದ್ದ ಲಾರಿಗೆ ಸೈಡ್ ಕೊಡುವ ವೇಳೆಯಲ್ಲಿ ಬೈಕ್ ಸ್ಕಿಡ್ ಆಗಿ ರಸ್ತೆಗೆ ಎಸೆಯಲ್ಪಟ್ಟರು. ತಲೆಯ ಭಾಗಕ್ಕೆ ತೀವ್ರ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಇದೀಗ ಅವರು ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಈ ಹಿಂದೆ ಪಾರ್ಥ ಸಾರಥಿ ವ್ಯಾನಿನಲ್ಲಿ ಕಂಡಕ್ಟರ್ ಆಗಿದ್ದರು. ನಂತರ ಕುಕ್ಕುಜಡ್ಕದಲ್ಲಿರುವ ಶ್ರೀನಿಧಿ ಶಾಮಿಯಾನ ಇವರಲ್ಲಿ ಕೆಲಸ ಮಾಡುತ್ತಿದ್ದರೆಂದು ತಿಳಿದು ಬಂದಿದೆ.

ಚಿಕಿತ್ಸೆಯ ನೆರವಿಗೆ ಚೊಕ್ಕಾಡಿ ವಿ.ಹೆಚ್. ಪಿ.ಮತ್ತು ಭಜರಂಗದಳ ಘಟಕದಿಂದ ಮನವಿ

ಬೈಕ್ ಸ್ಕಿಡ್ ಆಗಿ ತಲೆಗೆ ಗಂಭೀರ ಗಾಯಗೊಂಡು ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾರಾಯಣ ಪೂಜಾರಿ ಯವರ ದಿನದ ಚಿಕಿತ್ಸೆಗೆ ರೂ.10,000 ದಷ್ಟು ವೆಚ್ಚ ತಗಲುತ್ತಿದ್ದು ಇವರು ಕಡು ಬಡವರಾಗಿರುವುದರಿಂದ ಅಷ್ಟೊಂದು ಮೊತ್ತವನ್ನು ಭರಿಸಲು ಅಶಕ್ತರಾಗಿರುತ್ತಾರೆ. ಇದನ್ನು ಮನಗಂಡ ಚೊಕ್ಕಾಡಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಘಟಕದಿಂದ ನೆರವಿನ ಧನ ಸಹಾಯಕ್ಕೆ ಮನವಿ ಮಾಡಿರುತ್ತಾರೆ.
ಧನ ಸಹಾಯ ನೀಡಲಿಚ್ಚಿಸುವವರು..
9743916327
7259100092(*Google pay)
9972143788
ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ವಿನಂತಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.