Breaking News

ಜಟ್ಟಿಪಳ್ಳ, ಕಾನತ್ತಿಲದಲ್ಲಿ ಗಾಳಿಮಳೆಗೆ ಮನೆಗಳಿಗೆ ಹಾನಿ

Advt_Headding_Middle
Advt_Headding_Middle

ಮೇ. 3ರಂದು ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಜಟ್ಟಿ ಪಳ್ಳ ಕಾನತ್ತಿಲ ಭಾಗಗಳಲ್ಲಿ ಹಲವು ಮನೆಗಳಿಗೆ ಅಪಾರ ಹಾನಿಯಾಗಿದೆ.

ಕಾನತ್ತಿಲ ನಿವಾಸಿ ಸುಬ್ರಹ್ಮಣ್ಯ ಭಟ್ ಎಂಬವರ ಮನೆಯ ಮಾಡಿಗೆ ಬನ್ಪು ಮತ್ತು ಮಾವಿನ ಮರದ ಬೃಹತ್ ಗೆಲ್ಲುಗಳು ಮುರಿದು ಬಿದ್ದು ಮೇಲ್ಛಾವಣಿ ಹಾನಿಗೊಂಡಿದೆ.

ಜಟ್ಟಿ ಪಳ್ಳ ದಲ್ಲಿ ಅಮ್ಮಿ ಎಂಬವರ ಮನೆಯ ಶೀಟ್ ಹಾರಿ ಹೋಗಿದ್ದು, ಮಳೆ ನೀರು ಮನೆಯೊಳಗೆ ಬಂದು ಮನೆ ವಸ್ತುಗಳೆಲ್ಲ ಒದ್ದೆಯಾಗಿವೆ.


ಜಟ್ಟಿ ಪಳ್ಳ ಲೀಲಾವತಿ ಎಂಬವರ ಮನೆಯ ಮೇಲೆ ಮರ ಗೆಲ್ಲು ಮುರಿದು ಬಿದ್ದು ತೀವ್ರ ಹಾನಿಯಾಗಿದೆ.
ಮಾಧವ ಜಟ್ಟಿ ಪಳ್ಳ ಎಂಬವರ ಮನೆಯ ಮೇಲೆ ಅಡಿಕೆ ಮರ ಮುರಿದು ಬಿದ್ದು ಹಂಚು ಮಾಡು ಮುರಿದಿದೆ.
ಅಲ್ಲಲ್ಲಿ ವಿದ್ಯುತ್ ತಂತಿಗಳಿಗೆ ಗೆಲ್ಲುಗಳು ಮುರಿದು ಬಿದ್ದು ಕತ್ತಲಾವರಿಸಿದೆ.


ಸ್ಥಳೀಯ ನಗರ ಪಂಚಾಯತ್ ಸದಸ್ಯರಾದ ಶ್ರೀಮತಿ ಸರೋಜಿನಿ ಪೆಲ್ತಡ್ಕ ಮತ್ತು ವಾಣಿಶ್ರೀ ಅವರು ರಾತ್ರಿಯೇ ಎಲ್ಲಾ ಕಡೆ ಭೇಟಿ ನೀಡಿ ಹಾನಿಯನ್ನು ವೀಕ್ಷಿಸಿ ಪರಿಹಾರ ಕಾರ್ಯಕ್ಕೆ ಅಧಿಕಾರಿ ವರ್ಗವನ್ನು ಸಂಪರ್ಕಿಸಿದ್ದಾರೆ. ಸ್ಥಳೀಯ ಯುವಕರು ಅಲ್ಲಲ್ಲಿ ತಾತ್ಕಾಲಿಕ ದುರಸ್ತಿ ಕಾರ್ಯದಲ್ಲಿ ಕೈಜೋಡಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.