Breaking News

ಜಯನಗರ:ಗಾಳಿ ಮಳೆಗೆ ಮನೆಗೆ ಮರ ಬಿದ್ದು ಅಪಾರ ಹಾನಿ

Advt_Headding_Middle
Advt_Headding_Middle

ಸುಳ್ಯ ಪರಿಸರದಲ್ಲಿ ನಿನ್ನೆ ಸುರಿದ ಭಾರಿ ಗಾಳಿ ಮಳೆಗೆ ಜಯನಗರ ಪ್ರದೇಶದಲ್ಲಿ ಅಪಾರ ಹಾನಿ ಸಂಭವಿಸಿದೆ.
ಜಯನಗರ ನಿವಾಸಿ ನಾರಾಯಣ ಮಣಿಯಾಣಿ ಎಂಬವರ ಮನೆಗೆ ಭಾರಿ ಗಾತ್ರದ ತೆಂಗಿನ ಮರ ಬಿದ್ದಿದೆ. ಪರಿಣಾಮವಾಗಿ ಮಾಡಿನ ಪಕ್ಕಾಸು,ಹಂಚು ಹುಡಿಯಾಗಿದೆ.ಗೋಡೆಗೆ ಕೂಡ ಹಾನಿಯಾಗಿದ್ದು,ಅಪಾರ ನಷ್ಟ ಸಂಭವಿಸಿದೆ.
ಜಯನಗರದ ಕೃಷ್ಣ ಮಣಿಯಾಣಿ ಎಂಬವರ ಮನೆಗೆ ವಿದ್ಯುತ್ ಕಂಬ ತುಂಡಾಗಿ ಬಿದ್ದು ಹಾನಿ ಸಂಭವಿಸಿದೆ.ಮನೆಯ ಪಕ್ಕಾಸು ಮುರಿದು ಹಂಚುಗಳು ಹುಡಿಯಾಗಿದೆ.ಎರಡೂ ಕಡೆ ತೆಂಗಿನ ಮರ ಮತ್ತು ವಿದ್ಯುತ್ ಕಂಬ ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.

ಶಾಸಕ ಅಂಗಾರ ಭೇಟಿ

ಹಾನಿಯಾದ ಮನೆಗಳಿಗೆ ಶಾಸಕ ಎಸ್.ಅಂಗಾರ,ನಗರ ಪಂಚಾಯತ್ ಸದಸ್ಯರುಗಳಾದ ಶಿಲ್ಪಾ ಸುದೇವ್, ವಿನಯಕುಮಾರ್ ಕಂದಡ್ಕ ಹಾಗೂ ಗ್ರಾಮ ಲೆಕ್ಕಾಧಿಕಾರಿ ತಿಪ್ಪೇಶಪ್ಪ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.