ವೈನ್ ಶಾಪ್ ಓಪನ್ ಪವರ್ : ರಸ್ತೆ ಬದಿ ಬಿದ್ದ ಯುವಕ

Advt_Headding_Middle
Advt_Headding_Middle

 

ಕೊರೊನಾ ಹಿನ್ನಲೆಯಲ್ಲಿ ಒಂದೂವರೆ ತಿಂಗಳಿನಿಂದ ಮುಚ್ಚಲ್ಪಟ್ಟಿದ್ದ ವೈನ್ ಶಾಪ್ ಗಳು ಇಂದು ಓಪನ್ ಆಗಿದ್ದು, ಸುಳ್ಯದಲ್ಲಿ ಯುವಕನೊಬ್ಬ ಫುಲ್ ಅಮಲೇರಿಸಿ ಬೈಕ್ ಸಮೇತ ರಸ್ತೆ ಬದಿಗೆ ಬಿದ್ದ ದೃಶ್ಯ ಕಂಡು ಬಂದಿದೆ.

ಅಮಲು ಸೇವಿಸಿ ಬೈಕ್ ಚಲಾಯಿಸಿದ ಈತ ಸುಳ್ಯ ಚೆನ್ನಕೇಶವ ದೇವಸ್ಥಾನದ ಒಳ ರಸ್ತೆಯಲ್ಲಿ ಬೈಕ್ ಚಲಾಯಿಸಿದ್ದಾನೆ. ನಿಯಂತ್ರಣ ತಪ್ಪಿ ಕಂಪೌಂಡೊಂದಕ್ಕೆ ಗುದ್ದಿ ಬೈಕ್ ಸಮೇತ ರಸ್ತೆ ಬದಿಗೆ ಬಿದ್ದಿದ್ದು, ಮುಖ, ಕೈಗಳಲ್ಲಿ ತರಚಿದ ಗಾಯಗಳಾಗಿವೆ. ಯುವಕ ರಸ್ತೆ ಬದಿ ಬಿದ್ದಿರುವುದನ್ನು ಆ ರಸ್ತೆಯಲ್ಲಿ ಬಂದ ಯುವಕರಿಬ್ಬರು ಬೈಕ್ ಅಪಘಾತ ವಾಗಿರಬಹುದೆಂದು ಭಾವಿಸಿ ಹೋಗಿ ಎತ್ತಲು ನೋಡಿದಾಗ ರಸ್ತೆ ಬದಿ ಬಿದ್ದಾತ ಎಬ್ಬಿಸಲು ಹೋದವರಿಗೆ ಬೈದನೆಂದು ಬಳಿಕ ಎಬ್ಬಿಸಲು ಹೋದವರು ಅಲ್ಲಿಂದ ಹೋದರೆನ್ನಲಾಗಿದೆ.


ಬಿದ್ದ ಯುವಕನ ಪಕ್ಕದಲ್ಲಿದ್ದ ಬ್ಯಾಗ್ ನಲ್ಲಿ ಮದ್ಯದ ಬಾಟಲಿ ಇತ್ತು. ವೈನ್ ಶಾಪ್ ನಿಂದ ಮದ್ಯ ಖರೀದೀಸಿ ಬೇರೆಡೆ ಅದನ್ನು ಕುಡಿದು ಬೈಕ್ ಚಲಾಯಿಸಿಕೊಡು ಬರುವಾಗ ನಿಯಂತ್ರಣ ತಪ್ಪಿ ಈ ಘಟನೆ ನಡೆದಿರಬೇಕೆಂದು ಊಹಿಸಲಾಗಿದೆ. ಆ ಯುವಕನನ್ನು ಸ್ಥಳೀಯರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಬೈಕ್ ಪೋಲೀಸರ ವಶಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.