Breaking News

ಲಾಕ್ ಡೌನ್ ದಿನಗಳು : ಹಳೆಯ ಅನುಭವಗಳ ಮೆಲುಕು, ಹೊಸ ಹವ್ಯಾಸಗಳ ಕಲಿಕೆ

Advt_Headding_Middle
Advt_Headding_Middle

✍️ ಕವಿತಾ ಉಮೇಶ್ ಸುಳ್ಳಿ

ನನ್ನ ಜೀವನದಲ್ಲಿ ಮೊದಲ ಬಾರಿಗೆ ಒಂದು ಅದ್ಭುತ ಸಮಯವಕಾಶವನ್ನು ಅನುಭವಿಸುವ ಅವಕಾಶ ಸಿಕ್ಕಿರುವುದು ,ಈ ಲಾಕ್ ಡೌನ್ ಸಮಯದಲ್ಲಿ. ಜೀವನದಲ್ಲಿ ಯಾವುದೇ ಗುರಿಯಿಲ್ಲದೆ, ಮನಸ್ಸಿನಲ್ಲಿ ಯಾವುದೇ ಚಿಂತೆಯಿಲ್ಲದೆ ಕಳೆದ ದಿನಗಳು ಅದ್ಭುತ ಹಾಗೂ ಅವಿಸ್ಮರಣೀಯ.

ಮನೆಯವರೆಲ್ಲಾ ಒಂದಾಗಿ ಸೇರಿ ಕೆಲಸ ನಿರ್ವಹಿಸಿಕೊಂಡು, ಒಟ್ಟಾಗಿ ಕುಳಿತು ಊಟ ಮಾಡಿ, ಅಕ್ಕಪಕ್ಕದವರೊಂದಿಗೆ ಚೆನ್ನಾಗಿ ಮಾತನಾಡಿಸಿಕೊಂಡು ತುಂಬಾ ಸಂತೋಷವಾಗಿ ದಿನವನ್ನು ಕಳೆದೆ. ಹಾಗೆಯೇ ನನ್ನ ಮಗನೊಂದಿಗೆ ಹೆಚ್ಚು ಸಮಯವನ್ನು ಕಳೆಯಲು ಅವಕಾಶ ಸಿಕ್ಕಿದಂತಾಯಿತು. ಚಿಕ್ಕವರಿದ್ದಾಗ ಮಾಡಿದ ಹಲಸಿನ ಹಪ್ಪಳವನ್ನು ಮಾಡಲು ಸಮಯ ಸಿಕ್ಕಿತು. ಹಾಗೂ ಈ ಸಮಯದಲ್ಲಿ ಸ್ವಲ್ಪ ಗಿಡಗಳನ್ನು ಬೆಳೆದು ಅವುಗಳ ಬೆಳವಣಿಗೆ ನೋಡಿ ತುಂಬಾ ಸಂತೋಷವಾಯಿತು. ಹಾಗೆಯೇ ಎ.ಆರ್ ಮಣಿಕಾಂತ್, ರಾಬಿನ್ ಶರ್ಮಾ ಮುಂತಾದ ಲೇಖಕರ ಕೃತಿಯನ್ನು ಓದುವ ಸದಾವಕಾಶ ದೊರಕಿತು. ಹಾಗೆಯೇ ಬೇರೆ ಬೇರೆ ರೀತಿಯ ಅಡುಗೆಗಳನ್ನು ಕಲಿಯಲು ಅವಕಾಶ ಸಿಕ್ಕಿತು.

ಜೀವನದಲ್ಲಿ ಏನೆಲ್ಲಾ ಹೊಸ ಹೊಸ ರೀತಿಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕೆಂದು ಅಂದುಕೊಂಡಿದ್ದೇನೋ ಅದೆಲ್ಲವನ್ನೂ ಈ ಲಾಕ್ ಡೌನ್ ಸಮಯದಲ್ಲಿ ಕಲಿಯಲು ಅವಕಾಶ ಸಿಕ್ಕಂತಾಯಿತು.

✍️ ಕವಿತಾ ಉಮೇಶ್ ಸುಳ್ಳಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.