ಲಾಕ್ ಡೌನ್ ದಿನಗಳು… ಸಮಯದ ಸದುಪಯೋಗಕ್ಕೆ ಸಿಕ್ಕ ಅವಕಾಶ

Advt_Headding_Middle

✍️ ಅಪೂರ್ವ ಕೊಲ್ಯ

ರೆಕ್ಕೆ ಬಲಿತ ಪಕ್ಷಿಗಳೆಂದೂ ಗೂಡಲ್ಲಿ ಕುಳಿತಿರಲು ಸಾಧ್ಯವಿಲ್ಲ. ಅಂತೆಯೇ ನಾವು ಕೂಡಾ ಹೊರಗಿನ ಪ್ರಪಂಚದ ಅರಿವು ಬಂದಾಗ ಮನೆಯೊಳಗೆ ಕೂರುವ ಮನಸ್ಸಿಲ್ಲ. ಸ್ವಚ್ಛಂಧವಾಗಿ ಹಾರಾಡಬೇಕೆಂದು ಮನಸ್ಸು ತವಕಿಸುತ್ತದೆ. ಇದೆಲ್ಲದಕ್ಕೂ ಫುಲ್ ಸ್ಟಾಪ್ ಇಟ್ಟಿದ್ದು ಲಾಕ್ಡೌನ್.

ಸದಾ ಪ್ರಯಾಣವನ್ನು ಇಷ್ಟ ಪಡುತ್ತಿದ್ದ ನನಗಂತೂ ಮೊದಲ ಒಂದಷ್ಟು ದಿನ ಬಂಧಿಸಿ ಇಟ್ಟಂತ ಅನುಭವವಾದುದು ಸುಳ್ಳಲ್ಲ.‌ ಆದರೆ ಯಾವಾಗ ಇದು ಇನ್ನಷ್ಟು ದಿನ ಮುಂದುವರಿಯುವ ವಿಚಾರ ತಿಳಿಯಿತೋ ಮನಸ್ಸು ಅದಕ್ಕೆ ಹೊಂದಿಕೊಳ್ಳಲಾರಂಭಿಸಿತ್ತು. ಇದು ನಿಜವಾಗಿಯೂ ಒಂದು ಸುವರ್ಣ ಅವಕಾಶದಂತಾಯಿತು.. ನಿಜ!

ಒಂದಷ್ಟು ಸಮಯ ಮನೆಯವರೊಂದಿಗೆ ಕಾಲ ಕಳೆಯಲು ಅವಕಾಶ ಸಿಕ್ಕಿದಂತಾಯಿತು. ಎಲ್ಲರೂ ಜೊತೆ ಸೇರಿ ಕೆಲಸ ಮಾಡೋದು, ಜೊತೆ ಸೇರಿ ಊಟ ಮಾಡೋದು ಸಂತೋಷ ನೀಡಿತು. ಮಕ್ಕಳು ಜೊತೆಗಿದ್ದರೆ ಸಮಯ ಕಳೆಯುದೇ ಗೊತ್ತಾಗೋದಿಲ್ಲ. ಅಕ್ಕನ ಮಗುವಿನ ತುಂಟಾಟಗಳು ನೋಡುತ್ತಾ, ಅವನೊಂದಿಗೆ ಮತ್ತೆ ಮಗುವಾಗಿ ಆಟ ಆಡಲು ದೊರಕಿದ ಈ ಸಮಯ ಅವಿಸ್ಮರಣೀಯ. ಅಮ್ಮ ಮಾಡಿದ ಅಡುಗೆ ತಿಂದು ಗೊತ್ತಿದ್ದ ನನಗೆ ಒಂದಷ್ಟು ಹೊಸ ರುಚಿಗಳನ್ನು ಕಲಿಯುವ ಹಾಗೂ ಕೈಯಾರೆ ಮಾಡಿ ಬಳಸುವ ಅವಕಾಶ ದೊರಕಿತು.

ಅಷ್ಟೇ ಅಲ್ಲದೆ ಹೂವಿನ ಗಿಡಗಳನ್ನು ನೆಟ್ಟು, ಅವುಗಳ ಬೆಳವಣಿಗೆಯನ್ನು ನೋಡುತ್ತಾ ,ಅವುಗಳ ಸೌಂದರ್ಯ ವನ್ನು ಆಸ್ವಾದಿಸುವ ಅವಕಾಶ ದೊರಕಿತು. ನಾನು ಒಂದಷ್ಟು ಸಮಯವನ್ನು ಸಾಹಿತ್ಯ ವಾಟ್ಸಾಪ್ ಗುಂಪಿನಲ್ಲಿ ಬರುವ ಕವನಗಳು , ಕಥೆಗಳು ಲೇಖನಗಳನ್ನು ಓದಲು ಮೀಸಲಿಟ್ಟಿದ್ದೆ. ಒಂದಷ್ಟು ಕವನಗಳನ್ನು , ಲೇಖನಗಳನ್ನು ಬರೆಯಲು ಅವಕಾಶ, ಸಮಯ ಎಲ್ಲವೂ ದೊರಕಿತು.

ಎಲ್ಲದಕ್ಕಿಂತ ಹೆಚ್ಚಾಗಿ ನನ್ನನ್ನು ನಾನು ಅರಿತುಕೊಳ್ಳಲು ,ನನ್ನವರನ್ನು ಅರಿತುಕೊಳ್ಳಲು ಈ ಲಾಕ್ ಡೌನ್ ಅವಕಾಶ ಮಾಡಿಕೊಟ್ಟಿತು. ಗಿರಿಮನೆ ಶ್ಯಾಮ್ ರಾವ್ ಅವರ ಕೃತಿಗಳು, ಯುವ ಕವಿಗಳ ಕವನ , ಕಥಾ ಸಂಕಲಗಳನ್ನು ಓದುವ ಅವಕಾಶ ದೊರಕಿತು. ಹೊಸ ಹವ್ಯಾಸಗಳನ್ನು ಬೆಳೆಸಿಕೊಳ್ಳಲು‌ ಇದೊಂದು ಉತ್ತಮ ಸಮಯವಾಗಿತ್ತು.‌ ಕೊರೋನದ ಭಯ ಒಂದಷ್ಟು ಹೊಸ ಆಲೋಚನೆಗಳಿಗೆ , ಹೊಸ ಬದುಕಿನ ಶೈಲಿಯನ್ನು ಅಳವಡಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತು.

✍️ ಅಪೂರ್ವ ಕೊಲ್ಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.