ಲಾಕ್ ಡೌನ್ ದಿನಗಳು… ಸಂತೋಷದ ಕ್ಷಣ ಹವ್ಯಾಸದಲ್ಲಿತ್ತು

Advt_Headding_Middle
Advt_Headding_Middle

 

 

✍️ ಪೂರ್ಣಿಮಾ ಚೊಕ್ಕಾಡಿ, ಪಂಜ

ಮಾರ್ಚ್ 23ರಿಂದ ಈ ದಿನದವರೆಗೆ ನಾನು ಪಂಜರದ ಪಕ್ಷಿಯೆಂದೆನಿಸಲಿಲ್ಲ, ಶಾಲೆಗೆ 15 ರಿಂದ 20 ದಿನ ಮೊದಲು ರಜೆ ಸಿಕ್ಕಿತು, 2 ತಿಂಗಳ ಬೇಸಿಗೆ ರಜೆಯ ಜೊತೆಗೆ ಶಾಲಾ ಕೆಲಸ ಮಾಡುತ್ತಿದ್ದವು.

ಶಾಲಾ ಕೆಲಸದಲ್ಲಿದಾಗ ಅಯ್ಯೋ ಒಂದು ಚೂರು ಸಮಯ ಸಿಕ್ಕರೆ ಸಾಕು ಏನಾದರೂ ಡ್ರಾಯಿಂಗ್ ಕ್ರಾಪ್ಟ್ ,ಲೇಖನ ,ಇತರ ಹೊಸತನ ಮಾಡಬಹುದು ಅನಿಸಿತು. ಈ ಸಮಯದಲ್ಲಿ ಆ ಎಲ್ಲಾ ಕಾರ್ಯಗಳಿಗೆ ಅವಕಾಶ ಸಿಕ್ಕಿದಂತಾಯಿತು. ಅತೀ ಹೆಚ್ಚು ಡ್ರಾಯಿಂಗ್ ನಲ್ಲಿ ಸಂತೋಷ ದ ಕಾಲ ಕಳೆದೆ, ಯಾವಾಗಲೂ ಹಳ್ಳಿಯಲ್ಲಿ ಎಷ್ಟು ಕೆಲಸ ಮಾಡಿದರೂ ಸಾಕೆನಿಸದು, ಆದರೂ ಈ ಸಮಯದಲ್ಲಿ ದಿನನಿತ್ಯದ ಕೆಲಸ ಜೊತೆಗೆ ಅಪ್ಪಮ್ಮ ಜೊತೆ ಕೃಷಿ ಇತರ ಚಟುವಟಿಕೆ, ಅಡುಗೆಗೆ ಸಹಾಯ, ಹೊಸ ತಿಂಡಿ ತಿನಿಸುಗಳ ಬಗ್ಗೆ ಮಾಡುವುದನ್ನು ಕಲಿತೆ. ಹಾಗೆ ಶಾಲಾ ಕೆಲಸ ಕಾರ್ಯಗಳನ್ನು ಮನೆಯಲ್ಲೇ ಮಾಡಿ ಸಮಯ ಕಳೆದೆ, ಜೊತೆಗೆ ವರ್ಕ್ ಟೆನ್ಶನ್ ಇಂದ ಸ್ನೇಹಿತ, ಸಂಬಂಧಿಕರ ಜೊತೆಗೆ ಮಾತುಕತೆ ಕಡಿಮೆಯೆನಿಸಿತು. ಮಾತನಾಡಲು ಅವಕಾಶ ಸಿಕ್ಕಿ ನಿರಾಳವೆನಿಸಿತು, ತಂಗಿ ನಾನು, ಸಂಜೆಯ ಹೊತ್ತಲ್ಲಿ ಸೂರ್ಯ ನ ಸೌಂದರ್ಯವನ್ನು ನೋಡಿ ಆನಂದಿಸುತ್ತಿದ್ದವು. ದಿನಗಳು ಕಳೆದರೂ ಮನಸ್ಸಿನಲ್ಲಿ ಕೊರೋನಾ ಭಯವಿದ್ದರು ತುಸು ನೆಮ್ಮದಿಯ ಜೀವನದ ದಾರಿಗೆ ಹೆಜ್ಜೆ ಇಟ್ಟಿತು.

✍️ ಪೂರ್ಣಿಮಾ ಚೊಕ್ಕಾಡಿ, ಪಂಜ

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.