Breaking News

ರೈತರ ಬೆಳೆ ಸಾಲಕ್ಕೆ ರೂಪಿಸಿದ ಹೊಸ ನಿಯಮಗಳನ್ನು ಹಿಂದೆ ಪಡೆಯುವಂತೆ ರಾಜಾರಾಂ ಭಟ್ ಬೆಟ್ಟ ಆಗ್ರಹ

Advt_Headding_Middle
Advt_Headding_Middle

ರಾಜ್ಯದ ಸಹಕಾರಿ ಸಂಘಗಳಲ್ಲಿ ಕಳೆದ ವರ್ಷ ಪಡೆದ ಶೂನ್ಯ ಬಡ್ಡಿ ದರದ ಬೆಳೆ ಸಾಲಕ್ಕೆ ಸಂಬಂಧಪಟ್ಟಂತೆ ಸರ್ಕಾರ ಕಳುಹಿಸಿದ ಹೊಸ ನಿಯಮಾವಳಿಗಳನ್ನು ತಕ್ಷಣ ಹಿಂಪಡೆದು ಕಳೆದವರ್ಷ ಸಾಲ ನೀಡುವಾಗ ಇದ್ದ ನಿಯಮಗಳಂತೇ ಈ ಸಾಲಿನಲ್ಲಿ ನವೀಕರಿಸುವಂತೆ ಸರ್ಕಾರ ಆದೇಶ ಹೊರಡಿಸಬೇಕೆಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಾಜಾರಾಮ್ ಭಟ್ ಬೆಟ್ಟ ಒತ್ತಾಯಿಸಿದ್ದಾರೆ.

ಈ ಬಗ್ಗೆ ಸಹಕಾರ ಸಚಿವರಿಗೆ ಮನವಿ ಯನ್ನು ಸಲ್ಲಿಸಿರುವ ಅವರು ಸಾಲ ನೀಡುವಾಗ ಶೂನ್ಯ ಬಡ್ಡಿ ದರದಲ್ಲಿ ನೀಡಿ ಮರುಪಾವತಿ ಸಂದರ್ಭದಲ್ಲಿ ಬಡ್ಡಿ ಪಾವತಿಸುವಂತೆ ಆದೇಶಿಸುವುದು ರೈತರ ಹಿತಕ್ಕೆ ಮಾರಕ ಮತ್ತು ರೈತ ಪರ ಎಂದು ಹೇಳಿಕೊಳ್ಳುವ ಸರ್ಕಾರದ ನೀತಿಗಳು ರೈತರ ಪರವಾಗಿ ಇರಬೇಕು ವಿನಹ ರೈತ ವಿರೋಧಿಯಾಗಿರಬಾ ಬಾರದು ಎಂದು ತಿಳಿಸಿದ್ದಾರೆ.
2019-20ರಲ್ಲಿ ಸಾಲ ನೀಡುವಾಗ ರೂ. ಮೂರು ಲಕ್ಷ ದ ತನಕ ಎಲ್ಲಾ ರೈತರಿಗೂ ಶೂನ್ಯ ಬಡ್ಡಿ ದರ ದಲ್ಲಿ ಸಾಲ ನೀಡಲಾಗಿದ್ದು, ಹೊಸ ನಿಯಮಾವಳಿ ಯಂತೆ ಒಂದು ಕುಟುಂಬದ ಒಬ್ಬರಿಗೆ ಮಾತ್ರ ಶೂನ್ಯ ಬಡ್ಡಿ ದರ ಅನ್ವಯವಾಗಲಿದ್ದು ಉಳಿದವರು ಶೇಕಡಾ7ಬಡ್ಡಿ ದರವನ್ನು ಪಾವತಿಸಬೇಕಾಗುತ್ತದೆ ಮತ್ತು ಆದಾಯ ತೆರಿಗೆ ಪಾವತಿಸುವ ಮತ್ತು ಪಿಂಚಣಿ ಪಡೆಯುವ ರೈತರನ್ನು ಈ ಸೌಲಭ್ಯದಿಂದ ಹೊರಗಿಡಲಾಗಿದೆ ಇದೂ ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.