ಬಳ್ಪ: ಬೆಂಗಳೂರಿನಿಂದ ಬಂದ ವ್ಯಕ್ತಿ ಮತ್ತು ಮನೆಯವರಿಗೆ ಕ್ವಾರಂಟೈನ್

Advt_Headding_Middle
Advt_Headding_Middle


ಬೆಂಗಳೂರಿನಲ್ಲಿ ಉದ್ಯೋಗದಲ್ಲಿ ವ್ಯಕ್ತಿಯೋರ್ವ ತನ್ನ ಊರಾದ ಬಳ್ಪಕ್ಕೆ ಮೇ. 4 ರಂದು ಬಂದಿದ್ದು, ಬಳಿಕ ಆತ ತಿರುಗಾಡುತ್ತಿದ್ದ ವಿಷಯ ಆಶಾ ಕಾರ್ಯಕರ್ತೆ, ಆರೋಗ್ಯ ಸಹಾಯಕಿಗೆ ಗೊತ್ತಾಗಿ ಆ ವ್ಯಕ್ತಿಗೆ ಸೀಲ್ ಹಾಕಿದ ಘಟನೆ ನಡೆದಿದೆ.
ಮೇ. 4 ರಂದು ಬೆಂಗಳೂರಿನಿಂದ ಬಂದ ವ್ಯಕ್ತಿ ಮೇ. 5 ರಂದು ನಡುಗಲ್ಲು, ಗುತ್ತಿಗಾರು ಕಡೆಗೆ ತಿರುಗಾಡಿದನೆಂದು ಆಶಾ ಕಾರ್ಯಕರ್ತೆಗೆ ಮಾಹಿತಿ ಹೋಗಿ ಅವರು ಆರೋಗ್ಯ ಕಾರ್ಯಕರ್ತೆಯೊಂದಿಗೆ ಬೆಂಗಳೂರಿನಿಂದ ಬಂದ ವ್ಯಕ್ತಿಯ ಮನೆಗೆ ಹೋದಾಗ ಅಲ್ಲಿ ಆತನಿರಲಿಲ್ಲವೆನ್ನಲಾಗಿದೆ. ಬಳಿಕ ಆ ವ್ಯಕ್ತಿಯನ್ನು ಬಳ್ಪ ಆರೋಗ್ಯ ಕೇಂದ್ರಕ್ಕೆ ಬರಹೇಳಿ ಮನೆಯವರನ್ನು 14 ದಿವಸ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಲಾಯಿತು. ನಂತರ ಆ ವ್ಯಕ್ತಿ ಬಳ್ಪ ಆರೋಗ್ಯ ಕೇಂದ್ರಕ್ಕೆ ಬಂದು ಕೈಗೆ ಸೀಲ್ ಹಾಕಿಸಿಕೊಂಡು ಹೋದರೆನ್ನಲಾಗಿದೆ. ಈ ಸಂದರ್ಭದಲ್ಲಿ ಬಳ್ಪ ಗ್ರಾ.ಪಂ. ಪಿ.ಡಿ.ಓ, ಕಾರ್ಯದರ್ಶಿ ಉಪಸ್ಥಿತರಿದ್ದರೆಂದು ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.