Breaking News

ಗೂನಡ್ಕ ಭಾರಿ ಗಾಳಿ-ಮಳೆ , ದರ್ಖಾಸ್ತು ಪರಿಸರದಲ್ಲಿ ಸುಮಾರು 13ಕ್ಕೂ ಹೆಚ್ಚು ಮನೆಗಳಿಗೆ ಹಾನಿ

Advt_Headding_Middle
Advt_Headding_Middle


ಮೇ 5ರಂದು ಸಂಜೆ 4ಗಂಟೆಗೆ ಬೀಸಿದ ಭಾರೀ ಗಾಳಿ ಮಳೆಯಿಂದಾಗಿ ಸಂಪಾಜೆ ಗ್ರಾಮದ ಗೂನಡ್ಕ ದರ್ಖಾಸ್ತು ಪರಿಸರದಲ್ಲಿ ಸುಮಾರು 13ಕ್ಕೂ ಹೆಚ್ಚು ಮನೆಗಳು ಹಾನಿಗೊಂಡಿದೆ. ಹಲವು ಮನೆಗಳಿಗೆ ಮರದ ಕೊಂಬೆಗಳು ಮುರಿದು ಬಿದ್ದು ಹಾನಿಯಾಗಿದ್ದರೆ ಕೆಲವು ಮನೆಗಳ ಮೇಲ್ಛಾವಣಿ ಭಾರಿ ಗಾಳಿಯಿಂದಾಗಿ ಸಂಪೂರ್ಣವಾಗಿ ಹಾರಿಹೋಗಿರುತ್ತದೆ.

ಈ ಸಂದರ್ಭದಲ್ಲಿ ಹಾನಿಗೊಳಗಾದ ಮನೆಗಳಲ್ಲಿ ಜನರು ಇದ್ದರೂ ಪುಣ್ಯವಶಾತ್ ಯಾವುದೇ ಪ್ರಾಣಾಪಾಯವಾಗದೆ ಪಾರಾಗಿದ್ದಾರೆ.
ದರ್ಖಾಸ್ತು ನಿವಾಸಿ ಮಹಮ್ಮದ್ ರವರ ಮನೆಯ ಸುಮಾರು ಹತ್ತಕ್ಕೂ ಹೆಚ್ಚು ಶೀಟುಗಳು ಹಾರಿ ಹೋಗಿದ್ದು, ಬಶೀರ್ ಎಂಬವರ ಮನೆಯ ಸುಮಾರು ಅರ್ಧದಷ್ಟು ಭಾಗದ ಮೇಲ್ಛಾವಣಿಯ ಶೀಟುಗಳು ಗ ಹಾರಿಹೋಗಿರುತ್ತದೆ.


ವಾಹಿದ್ ಎಂಬವರ ಮನೆಯ ಹಿಂಭಾಗಕ್ಕೆ ಮರದ ಕೊಂಬೆಯೊಂದು ಮುರಿದು ಬಿದ್ದು ಹಾನಿಯಾಗಿದೆ . ಲತೀಫ್ ಸಖಾಫಿ ಗೂನಡ್ಕ ಇವರ ಮನೆಯ ಬದಿಯಲ್ಲಿದ್ದ ಮಾವಿನ ಮರದ ಬೃಹತ್ ಕೊಂಬೆ ಗಾಳಿಗೆ ಮುರಿದು ಮನೆಯ ತಾರಸಿ ಮೇಲೆ ಬಂದು ಬಿದ್ದಿರುವ ಕಾರಣ ಶೌಚಾಲಯ ಹಾನಿಗೊಂಡಿದೆ.


ಅಬೂಬಕ್ಕರ್ ಮುಸ್ಲಿಯಾರ್, ವಾಸು ಬೆಳ್ಚಪ್ಪಾಡ, ಮಧುಸೂದನ್, ಗೋಪಾಲ ಗೂನಡ್ಕ, ನವೀನ್ ಜಿ ಜಿ, ರಫೀಕ್ ದರ್ಖಾಸ್ತು, ಅಬ್ದುಲ್ಲಾ ದರ್ಖಾಸ್ತು, ಅಬ್ದುಲ್ಲಾ ಸಿಎಂ, ಮಹಮ್ಮದ ಪಾಂಡಿ, ಅಬ್ಬಾಸ್ ಗೂನಡ್ಕ ರವರ ನ್ಯಾಯಬೆಲೆ ಅಂಗಡಿ ಇರುವ ಕಟ್ಟಡದ ಮೇಲ್ಭಾಗದ ಶೀಟುಗಳು ಗಾಳಿಯ ರಭಸಕ್ಕೆ ಹಾನಿಗೊಂಡಿದೆ.
ಮುಖ್ಯರಸ್ತೆಯಲ್ಲಿರುವ ಗೂನಡ್ಕ ಅಂಚೆಕಚೇರಿಯ ಮೇಲ್ಛಾವಣಿಯ ಶೀಟುಗಳು ಗಾಳಿಗೆ ಹಾರಿ ಗೋಡೆಗಳು ಬಿರುಕು ಬಿಟ್ಟಿರುತ್ತದೆ.

ಕುಂಞಿ ಭೇಟಿ – ಯುವಕರಿಂದ ದುರಸ್ತಿ
ವಿಷಯ ತಿಳಿದ ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ ಸ್ಥಳಕ್ಕೆ ಭೇಟಿ ನೀಡಿ ಕೂಡಲೇ ತಹಸೀಲ್ದಾರರಿಗೆ ದೂರವಾಣಿಯ ಮೂಲಕ ಮಾಹಿತಿಯನ್ನು ತಿಳಿಸಿದರು. ಸ್ಥಳಕ್ಕೆ ಇಂದು ಬೆಳಿಗ್ಗೆ ಭೇಟಿ ನೀಡಿದ ಸಂಪಾಜೆ ಗ್ರಾಮ ಲೆಕ್ಕಾಧಿಕಾರಿ ಪರಿಶೀಲನೆ ನಡೆಸಿದರು.
ಘಟನೆಗೆ ಸಂಬಂಧಿಸಿದಂತೆ ಗೂನಡ್ಕ ಪರಿಸರದ ಯುವಕರ ತಂಡವು ಮತ್ತು ಎಸ್ ವೈ ಎಸ್ ಎಸ್ಎಸ್ಎಫ್ ಇದರ ತುರ್ತು ಘಟಕ ಸಮಿತಿ ವತಿಯಿಂದ ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್ ಗೂನಡ್ಕ ಇದರ ಅಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ ರವರ ನಿರ್ದೇಶನದ ಮೇರೆಗೆ ದಾನಿಗಳ ಸಹಕಾರದಿಂದ ಹಾನಿಗೊಂಡ ಮನೆಗಳಿಗೆ ತಾತ್ಕಾಲಿಕ ಶೀಟ್ ಗಳನ್ನು ಹಾಕಿ ಸಹಕರಿಸಿದ್ದಾರೆ.
ಪರಿಸರದ ಸುಮಾರು ನಾಲ್ಕು ವಿದ್ಯುತ್ ಕಂಬಗಳು ಮುರಿದು ಬಿದ್ದು ಊರಿನವರ ಮತ್ತು ಸಂಘಟನೆಯ ಯುವಕರ ಸಹಕಾರದಿಂದ ವಿದ್ಯುತ್ ಕಂಬದ ಮೇಲೆ ಬಿದ್ದ ಮರಗಳನ್ನು ತೆರವುಗೊಳಿಸಲಾಗಿದೆ. ಘಟನಾಸ್ಥಳಕ್ಕೆ ಗ್ರಾಮ ಪಂಚಾಯತಿ ಸದಸ್ಯ ಅಬುಸಾಲಿ, ಗೂನಡ್ಕ ಜುಮಾ ಮಸ್ಜಿದ್ ಅಧ್ಯಕ್ಷ ಹಾಜಿ ಉಮ್ಮರ್
ಭೇಟಿ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.