ಬದುಕು

Advt_Headding_Middle
Advt_Headding_Middle

✍️ *ಲಕ್ಷ್ಮಿ ಜಿ.ಕೆ.*

ನಂಬಿದ್ದ ನಂಬಿಕೆ ದೇವರದಾಗ……
ಮನದಲ್ಲಿದ್ದ ಒಂದಷ್ಟು ಭಾವನೆಗಳು ಪದಗಳ ರೂಪ ಪಡೆದವು….
ಹೇಳಿದ ಮಾತುಗಳು ಹಾಗೆ ಉಳಿಯಲಿಲ್ಲ,
ಕಾಗದದ ದೋಣಿಯ ಹಾಗೆ ಅಸ್ತಿತ್ವ ಕಳೆದುಕೊಂಡವು.

ಮೊದಲು ಕಲ್ಲು, ಎಲ್ಲಾ ಕಲ್ಲಿನ ಹಾಗೆ ಸಮಾನತೆ…..
ಎಲ್ಲರ ಹಾಗೆ ಇದ್ದು ಹೊಸತರ ಅನುಭವ ಬೇಡವೆನ್ನಿಸಿತು.
ಉಳಿಯ ಪೆಟ್ಟಿಗೆ ಜೊತೆಗಾರರು , ಪುಡಿ ಪುಡಿಯಾದರು.

ಆದರೆ ಈ ಕಲ್ಲು ಪ್ರತಿಪೆಟ್ಟಿಗೂ ಎದೆಯೊಡ್ಡಿತ್ತು.
ಪರಿಣಾಮ ಈಗ ಸುಂದರ ಶಿಲೆ.
ಕಲ್ಲು ಎನ್ನುತ್ತಿದ್ದ ಮಂದಿ ಈಗ ,
ಹೃದಯದಲ್ಲಿ ಸ್ಥಾನ ಕೊಟ್ಟಿದ್ದಾರೆ.
ಎಲ್ಲವೂ ಸುಮ್ಮನೆ ಬರುವುದಿಲ್ಲ.
ಬದುಕು ಸಾಗರ, ವೇದನೆ ಗಳಿದ್ದರೆ ಸಾಧನೆ,
ಈಜಾಬೇಕು, ಬೇಕಾದರೆ ವಿರುದ್ಧವಾಗಿಯೇ….
ದಡ ಸೇರಬೇಕು,ಕರ್ಮದಫಲ ಉಣ್ಣಲು.

✍️ *ಲಕ್ಷ್ಮಿ ಜಿ.ಕೆ.*
ಕೆ.ಎಸ್.ಎಸ್. ಕಾಲೇಜು, ಸುಬ್ರಹ್ಮಣ್ಯ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.