ವಿವಾಹ ವಾರ್ಷಿಕೋತ್ಸವದ ದಿನ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಫೇಸ್ ಬುಕ್ ಪೋಸ್ಟ್

Advt_Headding_Middle
Advt_Headding_Middle

 

ವಿವಾಹ ದಿನ ಪತ್ನಿಯೊಂದಿಗೆ ಕಳೆಯಲಾರದ ಅನಿವಾರ್ಯತೆ, ಡಾಟಿಯವರ ಕುರಿತು ಮೆಚ್ಚುಗೆಯ ಮಾತು

 

ಕೇಂದ್ರ ಸಚಿವ , ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ವಿವಾಹ ವಾರ್ಷಿಕೋತ್ಸವದ ದಿನ ಇಂದಾಗಿದ್ದು, ಈ ಕುರಿತಾಗಿ ಅವರು ತನ್ನ ಫೇಸ್ ಬುಕ್ ಪೇಜ್ ನಲ್ಲಿ ಹಾಕಿದ ಪೋಸ್ಟ್ ಗಮನ ಸೆಳೆಯುತ್ತಿದೆ.

ಫೇಸ್ ಬುಕ್ ಪೋಸ್ಟ್ ನ ಪೂರ್ಣ ರೂಪ ಇಂತಿದೆ :

” ಮೊನ್ನೆ ಮೊನ್ನೆ ನಾನು ದಾಟಿ ಜೊತೆ ಸಪ್ತಪದಿ ತುಳಿದ ಹಾಗಿದೆ. 39 ವರ್ಷ ಗತಿಸಿದ್ದು ಗೊತ್ತೇ ಆಗಲಿಲ್ಲ. ಈ ನಾಲ್ಕು ದಶಕಗಳಲ್ಲಿ ಕೃಷ್ಣಾ-ಕಾವೇರಿಯಲ್ಲಿ ಎಷ್ಟೆಲ್ಲ ನೀರು ಹರಿದುಹೋಗಿದೆ. ಜಗತ್ತು ಏನೆಲ್ಲ ಬದಲಾವಣೆ ಕಂಡಿದೆ. ಆದರೆ ನಮ್ಮ ದಾಟಿ. ಊಹುಂ. ದೇವರಗುಂಡದ ನಮ್ಮ ಮನೆಯ ಹೊಸಿಲು ತುಳಿದು ಬಂದಾಗ ಎಷ್ಟು ಲವಲವಿಕೆಯಿಂದ ಇದ್ದಳೋ ಇಂದಿಗೂ ಹಾಗೇ ಇದ್ದಾಳೆ. ಅದೇ ತಾಳ್ಮೆ ಅದೇ ಆತ್ಮೀಯತೆ, ಅದೇ ಸಮಾಧಾನ. ಕಷ್ಟ-ಸುಖ, ಏಳು-ಬಿಳಿನ ಪಯಣದಲ್ಲಿ ಜೊತೆಗಾತಿ.
ಒಂದೂವರೆ ತಿಂಗಳಿನಿಂದ ದೆಹಲಿಯಲ್ಲೇ ಇದ್ದೇನೆ. ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶವು ಕೊರೊನೊ ಮಹಾಮಾರಿ ವಿರುದ್ಧ ಹೊರಾಡುತ್ತಿದೆ. ಪ್ರಧಾನಿಯವರು ಸಚಿವರಾದ ನಮಗೆಲ್ಲ ಮಹತ್ವದ ಜವಾಬ್ಧಾರಿಯನ್ನು ವಹಿಸಿದ್ದಾರೆ.
ಇಂತಹ ಸಂದರ್ಭದಲ್ಲಿ ದೇಶದ ಯಾವದೇ ಭಾಗದಲ್ಲಿ ಜೀವರಕ್ಷಕ ಔಷಧಗಳು ಕೊರತೆಯಾಗಬಾರದು. ಹಾಗೆಯೇ ರೈತರ ಕೃಷಿ ಚಟುವಟಿಕೆಗೆ ರಸಗೊಬ್ಬರದ ಕೊರತೆ ಆಗಬಾರದು. ದೇವರ ದಯೆ, ಗುರುಹಿರಿಯರ ಆಶೀರ್ವಾದದಿಂದ ಎಲ್ಲವೂ ಸುಸೂತ್ರವಾಗಿ ನಡೆದಿವೆ. ದೆಹಲಿಯಲ್ಲಿದ್ದೇ ಈ ಎಲ್ಲ ಕಾರ್ಯಗಳನ್ನು ನಿರ್ವಹಿಸುವುದು ಅಗತ್ಯವಾಗಿದೆ.
ಹಾಗಾಗಿ ಈ ಸಲ ವಿವಾಹ ದಿನವನ್ನು ಕುಟುಂಬದೊಟ್ಟಿಗೆ ಕಳೆಯಲು ಆಗಲಿಲ್ಲ. ಕಳೆದ ವಾರ (ಏಪ್ರಿಲ್ 26) ದಾಟಿಯ ಹುಟ್ಟುಹಬ್ಬ ಇತ್ತು. ಅದಕ್ಕೂ ಬರಲಾಗಲಿಲ್ಲ.
ನಮ್ಮ ಕಾರ್ಯಕರ್ತ ಮಿತ್ರರನ್ನೂ ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ವಾರದ ಕೊನೆಯಲ್ಲಿ ಏನಿಲ್ಲವೆಂದರೂ ಇನ್ನೂರು ಮುನ್ನೂರು ಸ್ನೇಹಿತರ ಭೇಟಿಯಾಗುತ್ತಿತ್ತು. ನನ್ನ ಮೆಸೇಜ್ ಬಾಕ್ಸಿನಲ್ಲಿ ಅವರು ಕಳುಹಿಸಿದ ವಿವಾಹ ವಾರ್ಷಿಕೋತ್ಸವ ಶುಭಾಶಯಗಳು ತುಂಬಿ ಹೋಗಿವೆ. ಮಿತ್ರರೆ ನಿಮ್ಮ ಶುಭಹಾರೈಕೆಗೆ ಚಿರ-ಋಣಿ.
ಕ್ಷೇತ್ರದಲ್ಲಿ ನೀವೆಲ್ಲ ತುಂಬಾನೇ ಸಮರ್ಪಣೆಯಿಂದ ಕೊರೊನಾ ಸಂತ್ರಸ್ತರಿಗೆ ಅನ್ನ ದಾಸೋಹ ನಡೆಸಿದ್ದೀರಿ. ಅವರ ಕಷ್ಟ ಕಾಲದಲ್ಲಿ ಆಸರೆಯಾಗಿದ್ದೀರಿ. ದೇವರು ಮೆಚ್ಚುವಂತಹ ಪುಣ್ಯದ ಕೆಲಸ ಮಾಡುತ್ತಿದ್ದೀರಿ. ನಿಮಗೆ ದೇವರು ಒಳ್ಳೆಯದು ಮಾಡಲಿ. ಎಲ್ಲರಿಗೂ ಶುಭವಾಗಲಿ.”

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.