Breaking News

ಕೊರೊನಾ ವಿರುದ್ಧ ಜಾಗೃತಿ ಮೂಡಿಸುತ್ತಿರುವ ಪೆರುವಾಜೆಯ ಯುವಕ- ಸೈಕಲಲ್ಲಿ ಪ್ರಯಾಣ – ಬಸ್ ನಿಲ್ದಾಣಗಳಲ್ಲಿ ಪೋಸ್ಟರ್

Advt_Headding_Middle
Advt_Headding_Middle

ಪ್ರಪಂಚದಾದ್ಯಂತ ಹರಡಿ ತೀವ್ರ ಭಯ ಭೀತಿಯ ವಾತಾವರಣ ಮೂಡಿಸಿರುವ ಕೊರೊನಾ ವೈರಸ್‌ನ ವಿರುದ್ಧ ಇಡೀ ಸರಕಾರ, ಆಶಾ ಕಾರ್ಯಕರ್ತೆಯರು, ಪೋಲೀಸರು ಹಲವು ಇಲಾಖೆಗಳು ಜನಜಾಗೃತಿ ಅಭಿಯಾನ ನಡೆಸುತ್ತಿದ್ದರೆ, ಬೆಳ್ಳಾರೆ ಪೆರುವಾಜೆಯ ಸುಶಿಕ್ಷಿತ ಯುವಕರೊಬ್ಬರು ತನ್ನ ಸೈಕಲ್‌ನಲ್ಲಿ ತಾಲೂಕಿಡೀ ತಿರುಗಾಡಿ ಬಸ್ ನಿಲ್ದಾಣಗಳಲ್ಲಿ ಕೊರೊನಾ ವಿರುದ್ಧದ ಜಾಗೃತಿಯ ಸಂದೇಶವುಳ್ಳ ಪೋಸ್ಟರ್‌ಗಳನ್ನು ಅಂಟಿಸುತ್ತಾ ತನ್ನದೇ ರೀತಿಯಲ್ಲಿ ಜನಜಾಗೃತಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ಯುವಕನ ಉತ್ಸಾಹಕ್ಕೆ ಪೆರುವಾಜೆಯ ಮುಕ್ಕೂರಿನ ನೇಸರ ಯುವಕ ಮಂಡಲ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕುಂಡಡ್ಕ ಮುಕ್ಕೂರು ಇವರು ನೀರೆರೆದಿದೆ. ಪೋಸ್ಟರ್ ಅಚ್ಚು ಹಾಕಿಸಿ ಕೊಟ್ಟು ಪ್ರೋತ್ಸಾಹಿಸಿದೆ.
ಬೆಳ್ಳಾರೆಯಲ್ಲಿ ರಿಕ್ಷಾ ಚಾಲಕರಾಗಿರುವ ಪೆರುವಾಜೆಯ ವೆಂಕಟ್ರಮಣ ಭಟ್‌ರವರ ಪುತ್ರ ಕಿಶನ್ ಈ ಜನಜಾಗೃತಿ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಯುವಕ. ಎಕೊನಾಮಿಕ್ಸ್‌ನಲ್ಲಿ ಎಂ.ಎ. ಮಾಡಿರುವ ಕಿಶನ್ ಈಗ ಮಂಗಳೂರಿನ ಎಂ.ವಿ. ಶೆಟ್ಟಿ ಕಾಲೇಜಿನಲ್ಲಿ ಬಿ.ಎಡ್. ಓದುತ್ತಿದ್ದಾರೆ.

 


ಕಾಲೇಜಿಗೆ ರಜೆಯಾಗಿರುವುದರಿಂದ ಮನೆಯಲ್ಲೆ ಇರುವ ಕಿಶನ್‌ರ ತಲೆಯಲ್ಲಿ `ತಾನೂ ಕೊರೊನಾ ಕುರಿತ ಜನಜಾಗೃತಿಗೆ ಯಾಕೆ ಹೊರಡಬಾರದು?’ ಎಂಬ ಆಲೋಚನೆ ಆರಂಭವಾದ ತಡ, ಹೈಸ್ಕೂಲ್ ಓದುವಾಗ ಸರಕಾರ ತನಗೆ ನೀಡಿದ್ದ ಸೈಕಲ್ನು ಸಿದ್ಧಗೊಳಿಸಿ ಸವಾರಿ ಹೊರಟೇಬಿಟ್ಟರು. ನೇಸರ ಯುವಕ ಮಂಡಲ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳು ಜತೆಯಾದವು. ಅವರು ಮುದ್ರಿಸಿಕೊಟ್ಟ ಕೊರೊನಾ ಜಾಗೃತಿಯ ಸಂದೇಶದ ಬರಹವುಳ್ಳ ಪೋಸ್ಟರನ್ನು ಪ್ರತಿಯೊಂದು ಬಸ್ ನಿಲ್ದಾಣಗಳಲ್ಲೂ ಅಂಟಿಸುತ್ತಾ ಬಂದರು. ಇಂದು ಸುಳ್ಯ ಮುಖ್ಯ ಬಸ್ ನಿಲ್ದಾಣ, ಶ್ರೀರಾಂ ಪೇಟೆಯ ಬಸ್ ನಿಲ್ದಾಣಗಳಲ್ಲಿ ಅಂಟಿಸುತ್ತಿರುವಾಗ ‘ಸುದ್ದಿ’ಯ ಕಣ್ಣಿಗೆ ಬಿದ್ದರು.
“ಕೊರೊನಾ ಎಂಬ ಮಹಾಮಾರಿಯನ್ನು ಈ ದೇಶದಿಂದ ಓಡಿಸಬೇಕಾಗಿದೆ. ಅದಕ್ಕಾಗಿ ಎಲ್ಲರೂ ಜಾಗೃತಿ ಅಳವಡಿಸಿಕೊಳ್ಳಬೇಕಾಗಿದೆ. ಅದಕ್ಕಾಗಿ ನಾನು ಮೇ.1ರಿಂದ ತೊಡಗಿ ಬೆಳ್ಳಾರೆ, ಸವಣೂರು, ಕೆಯ್ಯೂರು, ಕೋಟೆ ಮುಂಡುಗಾರು, ಕಿಲಂಗೋಡಿ, ಆಲಂಗಾರು, ಸುಳ್ಯ ಮೊದಲಾದ ಬಸ್ ನಿಲ್ದಾಣಗಳಲ್ಲಿ ಭಿತ್ತಿ ಪತ್ರಗಳನ್ನು ಅಂಟಿಸಿದ್ದೇನೆ.
ದಾರಿಯಲ್ಲಿ ಸಿಗುವ ಎಲ್ಲ ಬಸ್ ನಿಲ್ದಾಣಗಳಲ್ಲೂ ಅಂಟಿಸುತ್ತೇನೆ” ಎನ್ನುವ ಕಿಶನ್ “ಈಗ ಲಾಕ್ ಡೌನ್ ಇದ್ದರೂ ಕೂಡಾ ಜನರನ್ನು ಸಾರ್ವಜನಿಕವಾಗಿ ಮುಕ್ತವಾಗಿ ಓಡಾಡಲು ಬಿಟ್ಟಿದ್ದಾರೆ. ಹಾಗಿದ್ದರೆ ಲಾಕ್ ಡೌನ್ ಯಾಕೆ ಬೇಕು?” ಎಂದು ಬೇಸರ ವ್ಯಕ್ತ ಪಡಿಸುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.