ಕೊರೊನ ವೈರಸ್ ನ್ನು ನಿರ್ಲಕ್ಷ್ಯ ಮಾಡಬೇಡಿ

Advt_Headding_Middle
Advt_Headding_Middle


ದೇಶಾದ್ಯಂತ ಕೊರೊನ ಎಂಬ ಮಹಾಮಾರಿ ಯು ವ್ಯಾಪಿಸಿದೆ. ಇದರ ಪರಿಣಾಮವಾಗಿ ಮುಂದಿನ ಜೀವನದ ಬಗ್ಗೆ ಚಿಂತಾಜನಕವಾಗಿದೆ. ಈ ಸಂದರ್ಭದಲ್ಲಿ ಶಿಕ್ಷಣವು ವಿದ್ಯಾರ್ಥಿಗಳ ಜೀವನದಲ್ಲಿ ಪ್ರಮುಖವಾಗಿದೆ. ಶಾಲಾ- ಕಾಲೇಜು ಗಳಿಗೆ ರಜೆಯಿದ್ದು ಪರೀಕ್ಷೆ ಯಾವಾಗ ಏನು ಅಂತ ಚಿಂತಿಸುವ ಪರಿಸ್ಥಿತಿಯಾಗಿದೆ. ವಿದ್ಯಾರ್ಥಿಗಳು ರಜೆಯ ಈ ಸಂದರ್ಭದಲ್ಲಿ ಸಮಯವನ್ನು ದುರುಪಯೋಗ ಮಾಡದೆ ಓದಿನ ಕಡೆಗೆ ಹೆಚ್ಚಿನ ಗಮನ ವಹಿಸಬೇಕು.
ದಿನೇ ದಿನೇ ಕೊರೊನ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಲಾಕ್ ಡೌನ್ ಸಡಿಲಿಕೆಯಾದ ಈ ಸಮಯದಲ್ಲಿ ಕೋವಿಡ್-19 ನ್ನು ನಿರ್ಲಕ್ಷ್ಯ ಮಾಡಿ ಅನವಶ್ಯಕವಾಗಿ ತಿರುಗಾಟವನ್ನು ಮಾಡಬೇಡಿ.
ಹೊರಗಡೆ ಹೋಗುವಾಗ ಮಾಸ್ಕ್ ನ್ನು ಕಡ್ಡಾಯವಾಗಿ ಧರಿಸಿ ಸಾಮಾಜಿಕ ಅಂತರ ವನ್ನು ಪಾಲಿಸೋಣ. ಜನರ ಒಳಿತಿಗಾಗಿ ಶ್ರಮಿಸುತ್ತಿರುವ ಸರ್ವರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ. ಮನೆಯಲ್ಲಿಯೇ ಇದ್ದು ಜಾಗೃತರಾಗೋಣ.
“ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ”

 

🖍 ಮಾನಸ . ಎಂ.ಕಲ್ಮಡ್ಕ
ದ್ವಿತೀಯ. ಬಿ.ಎ
ಡಾ.ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ .ಪೆರುವಾಜೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.