Breaking News

ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ, ವಿಶ್ವ ಮಲೇರಿಯಾ ದಿನ- ರೋಗ ತಡೆಗೆ ಜನ ಜಾಗೃತಿ ಅಗತ್ಯ : ಶಾಸಕ ಎಸ್. ಅಂಗಾರ- ಸೊಳ್ಳೆ ಉತ್ಪತ್ತಿಗೆ ನೀರು ನಿಲ್ಲದಂತೆ ಎಚ್ಚರ ವಹಿಸಿ: ಎ.ಸಿ. ಡಾ.ಯತೀಶ್ ಉಳ್ಳಾಲ್

Advt_Headding_Middle
Advt_Headding_Middle

ಡೆಂಗ್ಯೂ, ಮಲೇರಿಯಾ, ಚಿಕುನ್‌ಗುನ್ಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡದಂತೆ ಪ್ರಾರಂಭದಲ್ಲೇ ಜಾಗೃತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಸಂಘ- ಸಂಸ್ಥೆಗಳ ಸಭೆ ಕರೆದು ಮುನ್ನೆಚ್ಚೆರಿಕೆ ಕ್ರಮಗಳ ಬಗ್ಗೆ ಜನ ಜಾಗೃತಿ ಮೂಡಿಸುವಂತೆ ಶಾಸಕ ಅಂಗಾರ ಅವರು ತಾಲೂಕು ಆಡಳಿತಕ್ಕೆ ಸೂಚಿಸಿದ್ದಾರೆ.

ದ.ಕ.ಜಿ.ಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಚೇರಿ ಇದರ ಆಶ್ರಯದಲ್ಲಿ ತಾ.ಪಂ.ಸಭಾಂಗಣದಲ್ಲಿ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಹಾಗೂ ವಿಶ್ವ ಮಲೇರಿಯಾ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾ.ಪಂ.ಮಟ್ಟದಲ್ಲಿ ಫಾಗಿಂಗ್ ಯಂತ್ರ ಬಳಸಿ ಸೊಳ್ಳೆ ನಾಶಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ನ.ಪಂ.ವ್ಯಾಪ್ತಿಯಲ್ಲಿ ನೀರು ನಿಂತ ಸ್ಥಳಗಳನ್ನು ಗುರುತಿಸಿ ತತ್‌ಕ್ಷಣ ಫಾಗಿಂಗ್ ಮಾಡುವಂತೆ ನ.ಪಂ.ಮುಖ್ಯಾಧಿಕಾರಿ ಅವರಿಗೆ ಅಂಗಾರ ಅವರು ಸೂಚನೆ ನೀಡಿದರು.

ನಗರದ ಚರಂಡಿ ಸ್ವಚ್ಚತೆಯ ಬಗ್ಗೆ ಪ್ರಶ್ನಿಸಿದ ಶಾಸಕರು ಮಳೆಗಾಲದ ಮೊದಲೇ ಎಚ್ಚರ ವಹಿಸುವಂತೆ ಸೂಚಿಸಿದರು. ಈ ಬಗ್ಗೆ ಸಹಾಯಕ ಆಯುಕ್ತರು ಕೂಡ ತಕ್ಷಣ ಕ್ರಮ ಕೈಗೊಳ್ಳುವಂತೆ ನ.ಪಂ. ಮುಖ್ಯಾಧಿಕಾರಿಗೆ ಸೂಚಿಸಿದರು.

ಪುತ್ತೂರು ಉಪವಿಭಾಗ ಸಹಾಯಕ ಆಯಕ್ತ ಡಾ|ಯತೀಶ್ ಉಳ್ಳಾಲ್ ಮಾತನಾಡಿ, ನಗರ ಹಾಗೂ ಗ್ರಾ.ಪಂ.ವ್ಯಾಪ್ತಿಯಲ್ಲಿ ಗ್ಯಾರೇಜ್, ಟಯರ್ ಶಾಪ್‌ಗಳನ್ನು ಗುರುತಿಸಿ ನೀರು ನಿಲ್ಲದ ಹಾಗೆ ಎಚ್ಚರ ವಹಿಸುವಂತೆ ನೋಟಿಸ್ ನೀಡಬೇಕು. ತಪ್ಪಿದಲ್ಲಿ ದಂಡ ವಿಧಿಸುವಂತೆ ಹೇಳಿದ ಅವರು, ಕೆಲ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸೇರಿಸಿ ಘಟಕ ರಚಿಸಿ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಜಿಲ್ಲೆಗೆ ಮಾದರಿ
ದ.ಕ.ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ|ನವೀನ್‌ಚಂದ್ರ ಮಾತನಾಡಿ, ಸುಳ್ಯ ತಾಲೂಕಿನಲ್ಲಿ ಕಳೆದ ವರ್ಷ ಒಂದೇ ಒಂದು ಪ್ರಕರಣ ಪತ್ತೆ ಆಗಿರಲಿಲ್ಲ. ಈ ಮೂಲಕ ತಾಲೂಕು ಇಡೀ ಜಿಲ್ಲೆಗೆ ಮಾದರಿ ಆಗಿತ್ತು ಎಂದರು.
ಡೆಂಗ್ಯೂ ಬಗ್ಗೆ ಎಚ್ಚರ ವಹಿಸಬೇಕು. ತೋಟ ಸೇರಿದಂತೆ ಕೃಷಿ ಆ`ರಿತ ಪ್ರದೇಶಗಳಲ್ಲಿ ಲಾರ್ವಾ ನಾಶಕ್ಕೆ ಕೈಗೊಳ್ಳಬೇಕಾದ ಕ್ರಮ ಹಾಗೂ ಎಚ್ಚರ ವಹಿಸಬೇಕಾದ ವಿಧಾನಗಳ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು ಎಂದು ಡಾ|ನವೀನ್ ಚಂದ್ರ ಹೇಳಿದರು.

ತಾಲೂಕು ಆರೋಗ್ಯಧಿಕಾರಿ ಡಾ|ಸುಬ್ರಹ್ಮಣ್ಯ ಮಾತನಾಡಿ, ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪಿಡಿಓ, ಗ್ರಾಮ ಲೆಕ್ಕಾಧಿಕಾರಿಗಳ ಸಹಕಾರ ಬೇಕು ಎಂದು ಮನವಿ ಮಾಡಿದರು.

ವೇದಿಕೆಯಲ್ಲಿ ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ, ತಾ.ಪಂ.ಇಓ ಭವಾನಿಶಂಕರ, ಜಿ.ಪಂ.ಸದಸ್ಯರಾದ ಹರೀಶ್ ಕಂಜಿಪಿಲಿ, ಪುಷ್ಪಾವತಿ ಬಾಳಿಲ, ಆಶಾ ತಿಮ್ಮಪ್ಪ, ತಾ.ಪಂ.ಉಪಾಧ್ಯಕ್ಷೆ ಶುಭದಾ ಎಸ್ ರೈ, ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.