ಲಾಕ್‌ಡೌನ್ ತೆರವುಗೊಳಿಸಿದ ತೀರ್ಮಾನ ಸರಿಯಲ್ಲ: ಡಿ.ಎಂ.ಶಾರಿಕ್

Advt_Headding_Middle
Advt_Headding_Middle

ಕೊರೋನಾ ಸಂಪೂರ್ಣ ನಿವಾರಣೆ ಯಾಗದೇ ಲಾಕ್‌ಡೌನ್ ತೆರವುಗೊಳಿಸಿದ್ದು, ಸರಿಯಾದ ತೀರ್ಮಾನವಲ್ಲ. ಇದರಿಂದ ಕಾಯಿಲೆ ಹರಡುವ ಸಂಭವ ಹೆಚ್ಚಾಗುವ ಸಾಧ್ಯತೆ ಇದೆ. ಮೊದಲು ಇದ್ದಂತೆ 7ರಿಂದ 12 ಗಂಟೆ ತನಕ ರಿಲ್ಯಾಕ್ಸೇಶನ್ ಮಾಡಿದ್ದಲ್ಲಿ ಇದನ್ನು ಸಂಪೂರ್ಣವಾಗಿ ಅಲ್ಲದಿದ್ದರೂ ಭಾಗಶಃ ಕಡಿಮೆಯಾಗುತ್ತಿತ್ತು.
ಆದರೆ ಈಗ ಮಳೆಗಾಲ ಪ್ರಾರಂಭವಾಗುತ್ತದೆ. ಕೊರೋನಾ ವೈರಸ್ ಬಿಸಿಲಿನ ತಾಪಕ್ಕೆ ನಾಶವಾಗುತ್ತದೆ ಎಂಬುವುದು ಎಲ್ಲರಿಗೂ ತಿಳಿದರುವ ವಿಚಾರವಾಗಿದೆ.
ಲಾಕ್‌ಡೌನ್ ಸಿಸ್ಟಮ್ ಇನ್ನು 2ತಿಂಗಳ ವರೆಗೆ ವಿಸ್ತರಣೆಯಾಗಬೇಕಾಗಿತ್ತು.
ಈಗಿನ ಕ್ರಮದಂತೆ ಪ್ರದೇಶದ ಜನರು ಇನ್ನೊಂದು ಪ್ರದೇಶಕ್ಕೆ ವಲಸೆ ಹೋಗುವಗಾಗ ಸಮಸ್ಯೆ ಉಲ್ಭಣವಾಗುವ ಸಂಭವವಿದೆ. ಅಲ್ಲದೇ ವಲಸೆ ಕಾರ್ಮಿಕರನ್ನು ಈ ಮೊದಲೇ ಎಪ್ರಿಲ್ ಮೊದಲ ವಾರದಲ್ಲಿಯೇ ಅವರವರ ಊರುಗಳಿಗೆ ಕಳುಹಿಸಬುದಾಗಿತ್ತು. ಇಲ್ಲಿ ಕೂಡಾ ಆಡಳಿತ ವಿಫಲಗೊಂಡಿದೆ.
ಈ ಹಿಂದೆ 1989ರಲ್ಲಿ ಸ್ಪಾನಿಷಷ್ಯೂ ಎಂಬ ಸಾಂಕ್ರಾಮಿಕ ಕಾಯಿಲೆಬಂದಿತ್ತು. ಆಗ ಅದಕ್ಕೆ ಔಷಧಿಯನ್ನು ಸಂಶೋಧಿಸಲು 2ವರ್ಷಗಳಷ್ಟು ಧೀರ್ಘ ಸಮಯ ತಗಲಿತ್ತು.
ಈ ಅವಧಿಯಲ್ಲಿ ಲಕ್ಷಾಂತರ ಜನ ಮೃತಪಟ್ಟಿದ್ದಾರೆ.
ಆದರೆ ಸೋಫ್ ನೀರಿನಿಂದ ವೈರಸ್ ನಾಶವಾಗುತ್ತದೆಂದು ತಿಳಿಸಿರುತ್ತಾರೆ. ಅಥವಾ ಲಸಿಕೆಯನ್ನು ತಯಾರು ಮಾಡಲು ಪ್ರಪಂಚದ ರಾಷ್ಟ್ರಗಳು, ವಿಜ್ಞಾನ ತಂತ್ರಜ್ಞಾನಗಳಲ್ಲಿ ಬಹಳಷ್ಟು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ವಿಫಲವಾಗಿರುವುದು ದೊಡ್ಡ ದುರಂತ.
ಆದರಿಂದ ಕಾಯಿಲೆ ಹರಡದಂತೆ ಮನೆಯಲ್ಲಿಯೇ ಇದ್ದು ಅಗತ್ಯವಿದ್ದಲ್ಲಿ ಮಾತ್ರ ಮನೆಯಿಂದ ಹೊರಗಡೆ ಹೋಗಿ.

ಡಿ.ಎಂ.ಶಾರಿಕ್

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.