ಕೊರೊನಾ ಲಾಕ್ ಡೌನ್ ನಿಂದ ಅಂಗಡಿಗಳಿಗೆ ವ್ಯಾಪಾರವಿಲ್ಲದೆ ನಷ್ಟ ಹಿನ್ನೆಲೆ

Advt_Headding_Middle
Advt_Headding_Middle

 

 

ಅಂಗಡಿಯವರಿಗೆ ಒಂದು ತಿಂಗಳ ಬಾಡಿಗೆ ಮನ್ನಾ ಮಾಡಿದ ಕಟ್ಟಡ ಮಾಲಕ ಕಾಮಧೇನು ಮಾಧವ ಗೌಡ

ಕೊರೊನಾ ವೈರಸ್ ನ್ನು ತಡೆಗಟ್ಟಲು ಸರ್ಕಾರವು ಕೈಗೊಂಡ ಲಾಕ್ ಡೌನ್ ಅವಧಿಯಲ್ಲಿ ತನ್ನ ಮೂರು ಬಿಲ್ಡಿಂಗ್ ನಲ್ಲಿ ಬಾಡಿಗೆಯಲ್ಲಿ ವ್ಯವಹಾರ ನಡೆಸುತ್ತಿರುವ ಅಂಗಡಿ ಮಾಲಕರಿಗೆ ಒಂದು ತಿಂಗಳ ಬಾಡಿಗೆ ಹಣವನ್ನು ಬೆಳ್ಳಾರೆಯ ಉದ್ಯಮಿ ಕಾಮಧೇನು ಮಾಧವ ಗೌಡರು ಮನ್ನಾ ಮಾಡಿದ್ದಾರೆ.

ಉದ್ಯಮಿ ಹಾಗೂ ಕಾಮಧೇನು ಗ್ರೂಪ್ಸ್ ಮಾಲಕರಾಗಿರುವ ಮಾಧವ ಗೌಡರು ಕೃಷಿ ಹಾಗೂ ವಾಣಿಜ್ಯೋದ್ಯಮಗಳಲ್ಲಿ ತೊಡಗಿಕೊಂಡಿರುವ ಬೆಳ್ಳಾರೆಯ ಕಾಮಧೇನು ಟವರ್ಸ್ ಮತ್ತು ಕಲ್ಪವೃಕ್ಷ ಆರ್ಕೇಡ್ ಹಾಗೂ ನಿಂತಿಕಲ್ಲಿನ ಧರ್ಮಶ್ರೀ ಆರ್ಕೇಡ್ ನಲ್ಲಿ ಬಾಡಿಗೆದಾರರಾಗಿ ಅಂಗಡಿ ಪಡೆದುಕೊಂಡು ವ್ಯವಹಾರ ಮಾಡುತ್ತಿರುವ ಬಾಡಿಗೆದಾರರಿಗೆ ಆಗಿರುವ ತೊಂದರೆಗಳನ್ನು ಮನಗಂಡು ಒಂದು ತಿಂಗಳ ಬಾಡಿಗೆಯನ್ನು ಮನ್ನಾ ಮಾಡಿರುವುದಾಗಿ ಮಾಧವ ಗೌಡರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.