ಮುಗೇರಿನಲ್ಲಿ ಕಾಡುಕೋಣ ಕಾಟ : ಅರಣ್ಯ ಇಲಾಖೆ ಕಾರ್ಯಾಚರಣೆ

Advt_Headding_Middle
Advt_Headding_Middle

 

ಕನಕಮಜಲು ಗ್ರಾಮದ ಮುಗೇರಿನಲ್ಲಿ ಕೃಷಿ ತೋಟಕ್ಕೆ ಬಂದ ಕಾಡುಕೋಣ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರನಿಗೆ ಹಾಯ್ದು ಹಾಗೂ ವಿಷಯ ತಿಳಿದು ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ ಘಟನೆ ವರದಿಯಾಗಿದೆ.

ಮೇ.4ರಂದು ಮುಗೇರು ಪ್ರಭಾಕರ್ ರಾವ್ ಎಂಬವರ ತೋಟದಲ್ಲಿ ಕಾಡುಕೋಣ ಕಂಡು ಬಂತು.‌ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸತೀಶ್ ಎಂಬವರು ಇದನ್ನು ನೋಡಿ ಓಡುತ್ತಿದ್ದಂತೆ ಅವರ ಹಿಂಬದಿಯಾಗಿ ಬಂದ ಕಾಡುಕೋಣ ಸತೀಶ್ ರಿಗೆ ಹಾಯ್ದು ಮುಂದಕ್ಕೆ ಹೋಯಿತು. ಗಾಯಗೊಂಡ ಸತೀಶರು ಅಲ್ಲಿಂದ ಎದ್ದು ಪ್ರಭಾಕರರ ಮನೆಗೆ ಬಂದು ವಿಷಯ ತಿಳಿಸಿದರು. ಬಳಿಕ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಯಿತು.

ವಿಷಯ ತಿಳಿದ ಪುತ್ತೂರು ಅರಣ್ಯ ಇಲಾಖೆಯವರು ಫಾರೆಸ್ಟರ್ ಯೋಗೀಶ್ ರ ನೇತೃತ್ವದಲ್ಲಿ ಮರುದಿನ ಮುಗೇರಿಗೆ ಬಂದು ಪರಿಶೀಲನೆ ನಡೆಸಿದರೆಂದು ತಿಳಿದು ಬಂದಿದೆ. ಆ ದಿನವೂ ಕಾಡುಕೋಣ ತೋಟಕ್ಕೆ ಬಂದಿತ್ತೆಂದು ಮಾಹಿತಿ ಮೇರೆಗೆ ಸತತ 2 ದಿನಗಳ ಕಾಲ ಅರಣ್ಯ ಇಲಾಖೆ ಸಿಬ್ಬಂದಿಗಳು ಆ ಭಾಗದಲ್ಲಿ ಕಾರ್ಯಾಚರಣೆ ಯಲ್ಲಿ ತೊಡಗಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.