ಕೋವಿಡ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಸುಳ್ಯದ ಇನ್ನಿಬ್ಬರು ದಾದಿಯರು

Advt_Headding_Middle
Advt_Headding_Middle

ಮಂಗಳೂರಿನಲ್ಲಿ ಕೊರೊನಾ ವಾರಿಯರ್‍ಸ್‌ಗಳಾಗಿದ್ದಾರೆ ಐವರು ಯುವತಿಯರು

ಕೊರೊನಾ ಪ್ರಕರಣದ ಹಿನ್ನಲೆಯಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯನ್ನು ಒಂದು ತಿಂಗಳ ಹಿಂದೆ ಕೋವಿಡ್ ಆಸ್ಪತ್ರೆಯನ್ನಾಗಿ ಮಾರ್ಪಾಡು ಮಾಡಲಾಗಿದ್ದು, ಈ ವಿಭಾಗದಲ್ಲಿ ಸುಳ್ಯದ ಐವರು ದಾದಿಯರು ಸೇವೆ ಸಲ್ಲಿಸುತ್ತಿದ್ದಾರೆ.


ಈ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್‌ಗಳಾಗಿ ಸೇವೆ ಸಲ್ಲಿಸುತ್ತಿರುವ ಅಕ್ಷತಾ ಪೆರುಮುಂಡ, ಮಲ್ಲಿಕಾ ಮಡಪ್ಪಾಡಿ, ಮಧುಶ್ರೀ ಬಾಳುಗೋಡು ಅವರ ಕುರಿತಾದ ವಿಶೇಷ ವರದಿ ನಿನ್ನೆ ಸುದ್ದಿ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿತ್ತು.

ಆ ಬಳಿಕ ಇದೇ ಆಸ್ಪತ್ರೆಯಲ್ಲಿ ಇನ್ನಿಬ್ಬರು ಸುಳ್ಯದವರು ಸೇವೆ ಸಲ್ಲಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸುಳ್ಯ ಶಾಂತಿನಗರದ ರೇವತಿ ಹಾಗೂ ಅಡ್ಕಾರು ಬೊಳುಬೈಲಿನ ಶ್ವೇತಾ ಅವರು ಕೂಡಾ ಕೋವಿಡ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್‌ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶಾಂತಿನಗರದ ಸುಬ್ಬ ನಾಯ್ಕ – ಕುಸುಮಾ ದಂಪತಿಯ ಪುತ್ರಿಯಾಗಿರುವ ರೇವತಿ ಈ ದಂಪತಿಯ ಐವರು ಮಕ್ಕಳ ಪೈಕಿ ಮೂರನೆಯವರು. ಶಾಂತಿನಗರದ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಬಳಿಕ ಸುಳ್ಯ ಜೂನಿಯರ್ ಕಾಲೇಜಿನಲ್ಲಿ ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣ ಪಡೆದರು. ಬಳಿಕ ಉಡುಪಿಯ ಸೌಖ್ಯ ನರ್ಸಿಂಗ್ ವಿದ್ಯಾಸಂಸ್ಥೆಯಲ್ಲಿ ನರ್ಸಿಂಗ್ ಶಿಕ್ಷಣ ಪಡೆದು ಕೆಎಂಸಿ ಮೂಲಕ ವೆನ್ಲಾಕ್‌ಗೆ ನಿಯುಕ್ತಿಗೊಂಡು ೫ ವರ್ಷದಿಂದ ಅಲ್ಲಿ ಸ್ಟಾಫ್ ನರ್ಸ್ ಆಗಿದ್ದಾರೆ. ಐಸಿಯು ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ರೇವತಿ

“ಮೊದಮೊದಲು ಕೋವಿಡ್ ರೋಗಿಗಳ ವಿಭಾಗದಲ್ಲಿ ಕೆಲಸ ಮಾಡಲು ಭಯ ಅನಿಸ್ತಾ ಇತ್ತು. ಆದರೆ ಈಗ ಖುಷಿ ಆಗ್ತಿದೆ. ಯಾವುದೇ ಟೆನ್ಷನ್ ಇಲ್ಲ. ಅಪ್ಪ ಅಮ್ಮ ಕೂಡಾ ಸಪೋರ್ಟ್ ಮಾಡುತ್ತಿದ್ದಾರೆ” ಎನ್ನುತ್ತಾರೆ ರೇವತಿ.

ಶ್ವೇತಾ

ಶ್ವೇತಾರವರು ಅಡ್ಕಾರು ಬೊಳುಬೈಲಿನ ದಿ. ಬಾಬು- ಉಷಾ ದಂಪತಿಯ ಪುತ್ರಿ. ಶಾಂತಿನಗರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಸುಳ್ಯ ಜೂನಿಯರ್ ಕಾಲೇಜಿನಲ್ಲಿ ಪಡೆದರು. ನರ್ಸಿಂಗ್ ಶಿಕ್ಷಣದ ಬಳಿಕ ಕೆಎಂಸಿ ಮೂಲಕ ವೆನ್ಲಾಕ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ನಿಯುಕ್ತಿಗೊಂಡು ೫ ವರ್ಷದಿಂದ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
“ಕೆಲಸದ ಬಗ್ಗೆ ಯಾವುದೇ ಭಯ ಇಲ್ಲ. ಎಲ್ಲಾ ಸುರಕ್ಷೆಗಳೊಂದಿಗೆ ನಮಗೆ ಇಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತಿದೆ ಎನ್ನುತ್ತಾರೆ” ಶ್ವೇತಾ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.