ನಿಂತಿಕಲ್ಲು: ತೀಯ ಸಮಾಜದ ವತಿಯಿಂದ ಕಿಟ್ ವಿತರಣೆ

Advt_Headding_Middle
Advt_Headding_Middle

 

ಕೊರೊನ ಮಹಾಮಾರಿ ಯಿಂದ ತತ್ತರಿಸುತ್ತಿರುವ ಸಮಾಜಕ್ಕೆ ಒಂದು ಆಸರೆ ಎಂಬ ನೆಲೆಯಲ್ಲಿ ಎಣ್ಮೂರು, ನಿಂತಿಕಲ್ಲು ತೀಯ ಸಮಾಜ ಸೇವಾ ಸಮಿತಿ ವತಿಯಿಂದ ಸಮುದಾಯದ ಅರ್ಹ 45 ಮನೆಗಳಿಗೆ ಕಿಟ್ ವಿತರಿಸಲಾಯಿತು. ಅಧ್ಯಕ್ಷ ಲೋಕೇಶ್ ಬೆಳ್ಳಿಗೆ, ಗೌರವ ಅಧ್ಯಕ್ಷ ಕೊರಗಪ್ಪ ಕಲ್ಲೇರಿ, ಕೋಶಾಧಿಕಾರಿ ಚಂದ್ರಶೇಖರ ಕಲ್ಲೇರಿ, ಕಾರ್ಯದರ್ಶಿ ರವಿವರ್ಮ ಅಲೆಕ್ಕಾಡಿ, ಸಂಘಟನಾ ಕಾರ್ಯದರ್ಶಿ ಗಂಗಾಧರ ಮುಪ್ಪೇರಿಯಾ, ಮಹಿಳಾ ಅಧ್ಯಕ್ಷೆ ಲೀಲಾವತಿ ಅಲೆಕ್ಕಾಡಿ, ಸದಸ್ಯರಾದ ರವಿಪ್ರಕಾಶ್ ಮುಪ್ಪೇರ್ಯ,
ಹಿರಿಯರಾದ ಬಾಬು ಕಲ್ಲೇರಿ, ಅಪ್ಪಕುಂಞಿ ಬಾಳಿಲ, ರಾಜೇಂದ್ರ ಪ್ರಸಾದ್ ಬಾಳಿಲ ಸಹಕರಿಸಿದರು. ಪಂಜ ಭಾಗದ ಕೊಡಗೈ ದಾನಿ ಮನು ಪಂಜ, ಕವಿ ರಕ್ಷಿತ್ ಮಂಚಿಕಟ್ಟೆ ಸಹಕರಿಸಿದರು. 20 ಕಿಟ್ ಗಳ ಮೊತ್ತವನ್ನು ಮನು ಪಂಜ ನೀಡಿದರು. 5 ಕಿಟ್ ಗಳ ಮೊತ್ತವನ್ನು ಪುತ್ತೂರು ಮಾತೃ ಸಂಸ್ಥೆ ವತಿಯಿಂದ ನೀಡಿದರೆ 3 ಕಿಟ್ ಕೊರಗಪ್ಪ ಕಲ್ಲೇರಿ, 2 ಕಿಟ್ ನಾರಾಯಣ ಸಾಲ್ಮರ ಪುತ್ತೂರು, 2ಕಿಟ್ ಬಾಬು ಕಲ್ಲೇರಿ, 2ಕಿಟ್ ಅಪ್ಪಕುಂಞಿ ಬಾಳಿಲ, 2ಕಿಟ್ ಶಶಿಧರ ಬೆಳ್ಳಾರೆ, 1ಕಿಟ್ ಲೋಕೇಶ್ ಬೆಳ್ಳಿಗೆ, 1ಕಿಟ್ ರವಿವರ್ಮಾ ಅಲೆಕಾಡಿ, 1ಕಿಟ್ ಸುವರ್ಣ ಚಂದ್ರಿಕಾ ಬೆಳ್ಳಾರೆ, 1ಕಿಟ್ ರಾಜೇಂದ್ರ ಪ್ರಸಾದ್ ಬಾಳಿಲ ನೀಡಿ ತಮ್ಮ ಉದಾರತೆಯನ್ನು ತೋರಿಸಿದ್ದಾರೆ. ಸಿಂಗಾರಿ ಮೇಳದ ಸದಸ್ಯರಾದ ರಘುರಾಮ ಕೆ, ದಿವಾಕರ ಎಂ. ತೀಯ ಸಮಿತಿ ಸದಸ್ಯರಾದ ಗಣೇಶ್, ಭವಿತ್, ಪುರುಶೋಥಮ ಮೊದಲಾದವರು ಸಹಕಾರ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.