ಆಸ್ತಿ ತಕರಾರು : ಪೆರಾಜೆಯಲ್ಲಿ ಯುವಕನ ಕೊಲೆ

Advt_Headding_Middle
Advt_Headding_Middle

ಪಾನಮತ್ತನಾಗಿದ್ದ ಮೈದುನನಿಗೆ ಕಡಿದ ಅತ್ತಿಗೆ ಮತ್ತು ಆಕೆಯ ಮಗ

ಸ್ಥಳದಲ್ಲೇ ಮೃತ್ಯು : ಇಬ್ಬರು ಪೊಲೀಸ್ ವಶ

ಆಸ್ತಿ ತಕರಾರು : ಪೆರಾಜೆಯಲ್ಲಿ ಯುವಕನ ಕೊಲೆ
ಪಾನಮತ್ತನಾಗಿದ್ದ ಮೈದುನನಿಗೆ ಕಡಿದ ಅತ್ತಿಗೆ ಮತ್ತು ಆಕೆಯ ಮಗ

ಸ್ಥಳದಲ್ಲೇ ಮೃತ್ಯು : ಇಬ್ಬರು ಪೊಲೀಸ್ ವಶ

ಆಸ್ತಿ ತಕರಾರಿನ ಹಿನ್ನಲೆಯಲ್ಲಿ ಅತ್ತಿಗೆ ಹಾಗೂ ಮೈದುನನ ನಡುವೆ ಚಕಮಕಿ ನಡೆದು ಪಾನಮತ್ತನಾಗಿದ್ದ ಮೈದುನನ್ನು ಅತ್ತಿಗೆ ಹಾಗೂ ಆಕೆಯ ಮಗ ಸೇರಿ ಕತ್ತಿಯಿಂದ ಕಡಿದ ಹಾಗೂ ಮೈದುನ ಸ್ಥಳದಲ್ಲೇ ಮೃತಪಟ್ಟ ಘಟನೆಯೊಂದು ಪೆರಾಜೆಯಲ್ಲಿ ನಡೆದಿದೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಾಗಿದ್ದು, ಕತ್ತಿಯಿಂದ ಕಡಿದ ಅತ್ತಿಗೆ ಮತ್ತು ಆಕೆಯ ಪುತ್ರನನ್ನು ಮಡಿಕೇರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೆರಾಜೆ ಗ್ರಾಮದ ಪೀಚೆ ಎಂಬಲ್ಲಿ ನಿನ್ನೆ ಮಧ್ಯರಾತ್ರಿ 12ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಪೀಚೆ ಮನೆಯ ಶ್ರೀಮತಿ ತಾರಿಣಿ ಹಾಗೂ ಉತ್ತರಕುಮಾರ ಎಂಬವರ ಜಾಗ ಅಕ್ಕಪಕ್ಕದಲ್ಲಿದ್ದು, ಸಂಬಂಧದಲ್ಲಿ ಇವರು ಅತ್ತಿಗೆ ಮತ್ತು ಮೈದುನ. ಇವರೊಳಗೆ ಆಸ್ತಿ ತಕರಾರು ಇತ್ತು. ನಿನ್ನೆ 12 ರ ಸುಮಾರಿಗೆ ಸ್ನೇಹಿತರೊಬ್ಬರ ಮನೆಗೆ ಹೋಗಿ ಬಂದ ಉತ್ತರಕುಮಾರ ಮನೆಯ ಪಕ್ಕದ ರಸ್ತೆಯಲ್ಲಿ ತನ್ನ ಬೈಕ್ ನಿಲ್ಲಿಸಿ ಬೈಕನ್ನು ರೇಸ್ ಮಾಡುತ್ತಿದ್ದರೆಂದೂ ಈ ಶಬ್ದ ತಾರಿಣಿಯವರ ಮನೆಗೆ ಕೇಳಿ ಅವರು ಮತ್ತು ಅವರ ಮಗ ಹೊರಗೆ ಬಂದು ಉತ್ತರ ಕುಮಾರರಿಗೆ ಬೈದರೆನ್ನಲಾಗಿದೆ. ತನಗೆ ಬೈಯುವುದನ್ನು ತಿಳಿದ ಉತ್ತರ ಅವರಿಗೂ ಬೈಯುತ್ತ ಅವರ ಮನೆಯತ್ತ ಹೋದರೆಂದೂ ಉತ್ತರ ಮನೆಯತ್ತ ಬರುವುದನ್ನು ಕಂಡು ತಾರಿಣಿ ಮತ್ತು ಆಕೆಯ ಪುತ್ರ ಧರಣೀಧರ ಉತ್ತರಕುಮಾರರಿಗೆ ಕತ್ತಿಯಿಂದ ಕಡಿದರು. ತಾರಿಣಿಯವರ ಮನೆಗೆ ಹೋಗುವ ರಸ್ತೆಯಲ್ಲಿ ಈ ಘಟನೆ ನಡೆದು ಗಾಯಗೊಂಡ ಉತ್ತರ ಜಾರಿ ಅಲ್ಲೇ ಪಕ್ಕದಲ್ಲಿರುವ ತೋಟಕ್ಕೆ ಬಿದ್ದರು. ಬಿದ್ದಲ್ಲಿಗೆ ಪುನಃ ತಾರಿಣಿ ಮತ್ತು ಅವರ ಮಗ ಹೋಗಿ ಕತ್ತಿಯಿಂದ ಕೊಚ್ಚಿದರೆಂದು ತಿಳಿದು ಬಂದಿದೆ. ಸುಮಾರು 32 ಕ್ಕೂ ಹೆಚ್ಚು ಬಾರಿ ಉತ್ತರರಿಗೆ ಕತ್ತಿಯಿಂದ ಕಡಿದಿದ್ದಾರೆಂದು ಹೇಳಲಾಗಿದೆ.

ಇಂದು ಬೆಳಿಗ್ಗೆ ಮಡಿಕೇರಿಯಿಂದ ಪೊಲೀಸ್ ಅಧಿಕಾರಿಗಳು ಆಗಮಿಸಿ ತನಿಖೆ ಆರಂಭಿಸಿದ್ದಾರೆ. ತಾರಿಣಿ ಮತ್ತು ಧರಣೀಧರ ಅವರನ್ನು ವಶಕ್ಕೆ ಪಡೆದಿದ್ದಾರೆ.

ಆಸ್ತಿ ವೈಷಮ್ಯ

ಪೀಚೆ ಮನೆಯ ದಿ.ಸಣ್ಣಯ್ಯ ಮತ್ತು ದಿ.ಮುದ್ದಯ್ಯ ಸಹೋದರರು. ಸಣ್ಣಯ್ಯ ಗೌಡರ ಪುತ್ರ ದಿ.ಕೇಶವ, ಇವರ ಪತ್ನಿ ತಾರಿಣಿ. ಮುದ್ದಯ್ಯರವರ ಪುತ್ರ ಉತ್ತರಕುಮಾರ. ಆಸ್ತಿ ವಿಂಗಡಣೆಗೆ ಸಂಬಂಧಿಸಿ ತಾರಿಣಿ ಹಾಗೂ ಉತ್ತರಕುಮಾರರ ಮಧ್ಯೆ ವಿವಾದವಿತ್ತು. ಅವರ ಮಧ್ಯೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಕೆಲವು ತಿಂಗಳ ಹಿಂದೆ ತಾರಿಣಿಯವರ ಮನೆಗೆ ಸಂಬಂಧಿಕರೊಬ್ಬರು ಬಂದಿದ್ದಾಗ ಇವರು ಮಾಡಿಕೊಟ್ಟ ಚಹಾದಲ್ಲಿ ವಿಷ ಬೆರೆಸಿದ ಆರೋಪವನ್ನು ಉತ್ತರ ಮತ್ತು ಭವಾನಿಶಂಕರರ ಮೇಲೆ ತಾರಿಣಿಯವರು ಹೊರಿಸಿದ್ದರು. ಈ ಬಗ್ಗೆ ತಾರಿಣಿಯವರು ಪೊಲೀಸರಿಗೆ ದೂರನ್ನು ಕೂಡಾ ನೀಡಿದ್ದರು. ಆದರೆ ಅದು ತನಿಖೆಯಾಗಿಲ್ಲವೆನ್ನಲಾಗಿದೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.