ಮಕ್ಕಳ ಪಾಲಿಗೆ ಅಮೃತವನ್ನುಣಿಸುವ ಕರುಣಾಮಯಿ ಅಮ್ಮಂದಿರು….

Advt_Headding_Middle
Advt_Headding_Middle

 


ಅಮ್ಮಾ ಎಂಬ ಪದದಲ್ಲಿ ಸುಂದರವಾದ ಭಾವನೆ ಇದೆ. ಒಂಭತ್ತು ತಿಂಗಳು ಹೊತ್ತು ಹೆತ್ತು ಸಾಕಿ ಸಲಹಿದ ಮಮತಾಮಯಿ ತಾಯಿಗೆ ಈ ಪ್ರಪಂಚದಲ್ಲಿ ಯಾರೂ ಕೂಡ ಸರಿಸಾಟಿ ಇಲ್ಲ. ಮಗುವನ್ನು ತನ್ನ ರಕ್ಷಣೆಯ ಗೂಡಲ್ಲಿ ಒಂಭತ್ತು ತಿಂಗಳು ಹೊತ್ತು ಭೂಮಿಗೆ ಪರಿಚಯಿಸಿದ ಕರುಣಾಮಯಿ ತಾಯಿಗೆ ಅದೆಷ್ಟು ಧನ್ಯವಾದಗಳನ್ನು ಅರ್ಪಿಸಿದರೂ ಸಾಲದು.
ತಾಯಿಯ ಪ್ರೀತಿ ಇಡೀ ಜಗತ್ತಿನಲ್ಲೇ ಮಕ್ಕಳಿಗೆ ಅಮೃತವಾಗಿರುತ್ತದೆ. ಭೂಮಿಗೆ ಬಂದ ಮಗು ಮೊದಲು ಹೇಳುವ ತೊದಲು ಮಾತು ” ಅಮ್ಮಾ”. ಇಂತಹ ಅಮ್ಮಂದಿರಿಗೂ ಒಂದು ವಿಶೇಷವಾದ ದಿನ ಇದೆ. ಪ್ರತೀ ವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ವಿಶ್ವದಾದ್ಯಂತ ” ಅಮ್ಮಂದಿರ ದಿನ”ಎಂದು ಸಂಭ್ರಮದಿಂದ ಆಚರಿಸುತ್ತಾರೆ.

ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರಬಹುದು ಆದರೆ, ಕೆಟ್ಟ ತಾಯಿ ಇರಲಾರರು ಎಂಬುದು ಹಿರಿಯರ ಅನುಭವದ ಮಾತು. ಈ ಮಾತು. ಈ ಮಾತು ಇಂದಿಗೂ ಅತ್ಯಂತ ಅಥ೯ಪೂಣ೯ವಾಗಿದೆ. ಆಕೆಯ ಬಗ್ಗೆ ಯೋಚಿಸುತ್ತ ಹೋದರೆ, ವಣಿ೯ಸಲು ಪದಗಳೇ ಸಾಲದು. ಪಾಲುಬೀಳುತ್ತಿರುವ ಕಲ್ಲನ್ನು ಕೆತ್ತಿ ಗುಡಿಯೊಳಗಿನ ವಿಗ್ರಹವನ್ನಾಗಿಸುವ ಶಿಲ್ಪಿಯ ಹಾಗೆ ತಾಯಿ ಕೂಡ ಕಲ್ಲಿನಂತಿರುವ ಮಕ್ಕಳಿಗೆ ಸರಿಯಾದ ವಿದ್ಯೆ ಬುದ್ಧಿಯ ಜೊತೆಗೆ ಸಂಸ್ಕಾರವನ್ನು ಕಲಿಸಿ ಜೀವನಕ್ಕೊಂದು ಅಥ೯ಕೊಡುವಳು. ಮಗುವಿಗೆ ಮೊದಲ ಗುರುವೇ ತಾಯಿ. ಮಕ್ಕಳ ಮೇಲೆ ಅತೀವ ಪ್ರೀತಿ ಕಾಳಜಿ ತೋರಿಸುವ ಏಕೈಕ ವ್ಯಕ್ತಿ ತಾಯಿ. ಯಾವುದೇ ಫಲಾಪೇಕ್ಷೆಯನ್ನು ಬಯಸದೆ, ಮಕ್ಕಳಿಗೆ ತನ್ನ ನಿಸ್ವಾರ್ಥ ಪ್ರೀತಿ ಕಾಳಜಿಯನ್ನು ತೋರಿಸುವ ಅಮ್ಮಂದಿರು ತನ್ನ ಮಗುವಿನಲ್ಲಿ ತನ್ನ ಪ್ರಪಂಚವನ್ನು ಕಾಣುತ್ತಾರೆ.

ತನ್ನ ಇಡೀ ಜೀವನವನ್ನೆ ಮಕ್ಕಳಿಗಾಗಿ ಮುಡಿಪಾಗಿಡುವ ಅಮ್ಮಂದಿರನ್ನು ಮಕ್ಕಳಾದ ನಾವು ಅವರನ್ನು ಗೌರವಿಸಬೇಕು ಇದು ನಮ್ಮ ಕತ೯ವ್ಯ. ಇಂದು ಎಲ್ಲೆಡೆ ವೃದ್ಧಾಶ್ರಮ ಅಗತ್ಯತೆ ಕಂಡುಬರುತ್ತಿದೆ. ಯಾಕೆಂದರೆ, ತಾಯಿ ಮಕ್ಕಳನ್ನು ಪ್ರೀತಿಸಿದಷ್ಟು, ಮಕ್ಕಳು ತಾಯಿಯನ್ನು ಪ್ರೀತಿಸದೆ ಇರುವುದು.
ತಾಯಂದಿರ ದಿನದ ಆಚರಣೆ ಕೇವಲ ಇವತ್ತಿನ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೆ ಪ್ರತೀ ದಿನ ಆಚರಿಸುವಂತಿರಬೇಕು.

ಸಂದೀಪ್.ಎಸ್ ಮಂಚಿಕಟ್ಟೆ
ಪ್ರಥಮ ಪತ್ರಿಕೋದ್ಯಮ ವಿಭಾಗ ವಿವೇಕಾನಂದ ಪದವಿ ಕಾಲೇಜು ಪುತ್ತೂರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.