ನದಿಗೆ ಹೋದ ಯುವಕ ನೀರು ಪಾಲು

Advt_Headding_Middle
Advt_Headding_Middle

 

ಕೋನಡ್ಕ ಬಳಿ ನಡೆದ ಘಟನೆ

ಇಂದು ಬೆಳಿಗ್ಗೆ ಶವ ಪತ್ತೆ

ಅಡ್ಕಾರು ಕೋನಡ್ಕ ಸಮೀಪ ನದಿಗೆ ತೆರಳಿದ್ದ ಇಬ್ಬರು ಯುವಕರ ಪೈಕಿ ಓರ್ವ ನೀರು ಪಾಲಾದ ಘಟನೆ ನಡೆದಿದೆ.

ಕನಕಮಜಲಿನ ಹರೀಶ್ ಮಳಿ ಅವರ ಪುತ್ರ ಅಶ್ವಿತ್ (29 ವರ್ಷ) ನೀರು ಪಾಲಾದ ಯುವಕ.

ಅಶ್ವಿತ್ ಹಾಗೂ ಅಡ್ಕಾರಿನ ಪ್ರಸನ್ನ ಎಂಬ ಯುವಕರು ಮೇ. 9 ರಂದು ಸಂಜೆ ಪಯಸ್ವಿನಿ ನದಿಗೆ ತೆರಳಿದ್ದರು. ಆರಂಭದಲ್ಲಿ ಇಬ್ಬರೂ ತೆಪ್ಪದ ಮೂಲಕ ಸ್ವಲ್ಪ ದೂರ ಹೋಗಿ ದಡಕ್ಕೆ ಬಂದಿದ್ದರೆನ್ನಲಾಗಿದೆ. ಬಳಿಕ ಅಶ್ವಿತ್ ಒಬ್ಬರೇ ತೆಪ್ಪದಲ್ಲಿ ಹೋಗುತ್ತಿದ್ದಾಗ ಬ್ಯಾಲೆನ್ಸ್ ತಪ್ಪಿ ಮಗುಚಿ ನೀರು ಪಾಲಾದರೆಂದು ತಿಳಿದುಬಂದಿದೆ.

ಪೊಲೀಸರು, ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿದ್ದು, ಸ್ವಲ್ಪ ಹೊತ್ತು ಹುಡುಕಾಟ ನಡೆಸಿದರು. ಆದರೂ ಫಲಕಾರಿಯಾಗಲಿಲ್ಲ. ಬೆಳಕಿನ ಕೊರತೆಯಿಂದ ಕಾರ್ಯಾಚರಣೆ ನಿಲ್ಲಿಸಲಾಯಿತು. ಇಂದು ಮುಂಜಾನೆ ಪುನಃ ಪತ್ತೆ ಕಾರ್ಯಾಚರಣೆ ಆರಂಭಿಸಲಾಯಿತು. ಬೆಳಿಗ್ಗೆ ೬ ಗಂಟೆಗೆ ಪೈಚಾರಿನ ಆರ್.ಬಿ.ಬಶೀರ್ ನೇತೃತ್ವದ ಶರೀಫ್ ಟಿ.ಎ. ಲತೀಫ್ ಬೊಳುಬೈಲು, ಹಸನ್ ಸುಣ್ಣಮೂಲೆ, ಅಬ್ಬಾಸ್ ಶಾಂತಿನಗರರವರಿದ್ದ ತಂಡ ಮುಳುಗು ಕಾರ್ಯಾಚರಣೆ ನಡೆಸಿತು. ಸುಮಾರು ೨೦ ಅಡಿ ಆಳದಲ್ಲಿ ಶವ ಪತ್ತೆಯಾಯಿತು. ಬಳಿಕ ಅದನ್ನು ಹೊರತೆಗೆಯಲಾಯಿತು.


ಹರೀಶ್ ಮಳಿಯವರ ಹಿರಿಯ ಪುತ್ರನಾದ ಅಶ್ವಿತ್ ಹಾಗೂ ಮುರಳೀಧರ ಅಡ್ಕಾರುರವರ ಪುತ್ರ ಪ್ರಸನ್ನರವರ ಕ್ಲಾಸ್‌ಮೇಟ್ ಆಗಿದ್ದು, ಉತ್ತಮ ಸ್ನೇಹಿತರಾಗಿದ್ದರು. ಅಶ್ವಿತ್ ವಿದ್ಯಾಭ್ಯಾಸ ಮುಗಿಸಿದ ಬಳಿಕ ಖಾಸಗಿ ಕಂಪೆನಿಯೊಂದರಲ್ಲಿ ಕೆಲ ಸಮಯ ಕಾರ್ಯ ನಿರ್ವಹಿಸುತ್ತಿದ್ದರು. ಈಗ ಮನೆಯಲ್ಲಿದ್ದು, ಕೃಷಿ ಕಾರ್ಯದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಕನಕಮಜಲು ಯುವಕ ಮಂಡಲದ ಸಕ್ರಿಯ ಸದಸ್ಯರಾಗಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.