ಕರೆಂಟಿಲ್ಲದೆ ಕತ್ತಲಲ್ಲಿ ಮುಳುಗಿದ ಪಿಂಡಿಮನೆ – ಬೆಂಡಡ್ಕ ಪರಿಸರ

Advt_Headding_Middle
Advt_Headding_Middle


ಮೇ. 5 ರಂದು ಸಂಜೆ ಬೀಸಿದ ಗಾಳಿಗೆ ಅರಂತೋಡು ಗ್ರಾಮದ ಪಿಂಡಿಮನೆ – ಬೆಂಡಡ್ಕ ಪರಿಸರದಲ್ಲಿ 7-8 ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿದ್ದು, ಆ ಭಾಗ 5 ದಿನಗಳಿಂದ ಕತ್ತಲಲ್ಲಿ ಮುಳುಗಿದೆ. ಪಿಂಡಿಮನೆ ಸಮೀಪ ಒಂದು ಕಂಬ ತುಂಡಾಗಿದ್ದು, ಅದನ್ನು ಸರಿಪಡಿಸಿದರೆ 7 ಮನೆಗಳಿಗೆ ಸಂಪರ್ಕ ಕಲ್ಪಿಸಬಹುದಾದರೂ ಮುರಿದ ಕಂಬವನ್ನು ಈ ತನಕ ಬದಲಾಯಿಸದೆ ಅಲ್ಲಿದ್ದ ಕೆಲವು ಪರಿಕರಗಳನ್ನು ಬೇರೆ ಕಡೆಗೆ ಕೊಂಡೊಯ್ದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಬೆಂಡಡ್ಕ ಭಾಗದಲ್ಲಿ ಸುಮಾರು 25 ಮನೆಗಳು ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲಾವರಿಸಿದೆ. ಈ ಬಗ್ಗೆ ಊರವರು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಲಿಲ್ಲವೆಂದು ಸ್ಥಳೀಯರಾದ ರೇಣುಕಾಪ್ರಸಾದ್ ಪಿಂಡಿಮನೆ ಹೇಳಿದ್ದಾರೆ.

ಈ ಬಗ್ಗೆ ಸುಳ್ಯ ಮೆಸ್ಕಾಂ ಎ.ಇ.ಇ. ಹರೀಶ್ ರನ್ನು ಸಂಪರ್ಕಿಸಿ ವಿಚಾರಿಸಿದಾಗ “ಲಾಕ್ ಡೌನ್ ನಿಂದಾಗಿ ಸರಿಯಾಗಿ ಕೆಲಸಗಾರರು ಸಿಗದೆ ಗುತ್ತಿಗೆದಾರರಿಗೆ ಕೆಲಸ ನಿರ್ವಹಿಸಲು ವಿಳಂಬವಾಗಿದೆ. ಈಗಾಗಲೇ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಯಲಿದೆ” ಎಂದು ತಳಿಸಿದರು. ಅರಂತೋಡು ಮೆಸ್ಕಾಂ ಜೆ.ಇ. ಅಭಿಷೇಕ್ ರನ್ನು ಸಂಪರ್ಕಿಸಿ ವಿಚಾರಿಸಿದಾಗ “ಕೆಲಸಗಾರರ ಕೊರತೆಯಿಂದಾಗಿ ಕೆಲಸ ತಡವಾಗಿತ್ತು. ಇವತ್ತು ಕೆಲಸ ಮಾಡಲು ಆರಂಭ ಮಾಡಿದ್ದೇವೆ. ಇಂದೇ ವಿದ್ಯುತ್ ಸಂಪರ್ಕ ಕೊಡುತ್ತೇವೆ” ಎಂದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.