ಬಂಧುಗಳು ಪ್ರವೇಶ ನಿರಾಕರಿಸಿದ್ದರಿಂದ ನಡೆದುನಡೆದು ಸುಸ್ತಾದ ಪುಣಚದ ವ್ಯಕ್ತಿಯನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿದ ಬೆಳ್ಳಾರೆ ಪಿ.ಡಿ.ಒ.

Advt_Headding_Middle
Advt_Headding_Middle

ಬೆಂಗಳೂರಿನಿಂದ ಬಂದ ವ್ಯಕ್ತಿಯೊಬ್ಬರು ಕ್ವಾರಂಟೈನ್ ನಲ್ಲಿರುವುದು ಬಿಟ್ಟು ಸಂಬಂಧಿಕರ ಮನೆಗಳಿಗೆ ಎಡತಾಕಿ ಅವರು ಮನೆಗೆ ಸೇರಿಸಿಕೊಳ್ಳದಿದ್ದುದರಿಂದ ನಡೆದೂ ನಡೆದೂ ಸುಸ್ತಾಗಿ ಬೆಳ್ಳಾರೆಯಲ್ಲಿ ಪೋಲೀಸರ ಕಣ್ಣಿಗೆ ಬಿದ್ದು ಬೆಳ್ಳಾರೆ ಗ್ರಾ.ಪಂ. ಪಿ.ಡಿ.ಒ. ರವರ ಮೂಲಕ ಸುಳ್ಯ ಆಸ್ಪತ್ರೆಗೆ ದಾಖಲಿಸಲ್ಪಟ್ಟ ಘಟನೆ ವರದಿಯಾಗಿದೆ. ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬಂದವರ ಮೇಲೆ ಆಡಳಿತ ಯಾವ ರೀತಿ ಕಣ್ಗಾವಲು ಇರಿಸಿದೆ ಎಂದು ಕೂಡ ಅನಾವರಣಗೊಂಡಿದೆ.
ಬೆಂಗಳೂರಿನಲ್ಲಿ ಕೊರೋನ ಕಂಟೈನ್ಮೆಂಟ್ ಪ್ರದೇಶದ ವಾಸಿಯಾಗಿದ್ದ ಮೂಲತ: ಬಂಟ್ವಾಳ ತಾಲೂಕು ಪುಣಚದ ಸುಮಾರು 40 ವರ್ಷ ಪ್ರಾಯದ ಈ ವ್ಯಕ್ತಿ ಪಾಸ್ ಪಡೆದು ಮೇ.4 ರಂದು ಸಂಜೆ ಬಸ್ಸಲ್ಲಿ ಗುಂಡ್ಯ ಮೂಲಕ ಜಿಲ್ಲೆ ಪ್ರವೇಶಿಸಿ ಮಂಗಳೂರು ತಲುಪಿದ್ದರು. ಅಂದು ರಾತ್ರಿ ಅವರು ಮಂಗಳೂರು ಬಸ್ ನಿಲ್ದಾಣದಲ್ಲಿಯೆ ಮಲಗಿದ್ದರೆನ್ನಲಾಗಿದೆ. ಮರುದಿನ ಪುತ್ತೂರಿಗೆ ಬಂದು ಪರಿಚಯಸ್ಥರೊಬ್ಬರಲ್ಲಿ ನಿಂತರೆಂದೂ, ಅಲ್ಲಿದ್ದ ತನ್ನ ನಿಕಟ ಸಂಬಂಧಿಕರ ಮನೆಗೆ ಹೋಗಲು ಸಾಧ್ಯವಾಗಲಿಲ್ಲವೆಂದೂ, ಮರುದಿನ ಕುಂಬ್ರ ಬಸ್ ನಿಲ್ದಾಣದಲ್ಲಿ ಮಲಗಿದರೆಂದೂ, ಅದರ ಮರುದಿನ ಪಂಜಿಗಾರಲ್ಲಿರುವ ತನ್ನ ಅಕ್ಕನ ಮನೆಗೆಂದು ಹೋದಾಗ ಅಲ್ಲಿಯೂ ಪ್ರವೇಶ ದೊರೆಯಲಿಲ್ಲವೆಂದೂ, ಅಲ್ಲಿಂದ ಪುನ: ನಡೆದು ಬೆಳ್ಳಾರೆಗೆ ಬಂದ ಆ ವ್ಯಕ್ತಿ ನೀರು ,ಅನ್ನ ಸಿಗದೆ ಕಂಗಾಲಾಗಿ ಅಲ್ಲಿ ಬಸ್ ನಿಲ್ದಾಣದಲ್ಲಿ ಬಿದ್ದುಕೊಡರೆನ್ನಲಾಗಿದೆ.
ಇದನ್ನು ಗಮನಿಸಿದ ಬೆಳ್ಳಾರೆ ಪೋಲೀಸರು ಬೆಳ್ಳಾರೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಧನಂಜಯರಿಗೆ ತಿಳಿಸಿದರು.
ಧನಂಜಯರು ಬಂದು ನೋಡಿ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ. ಈ ವ್ಯಕ್ತಿಗೆ ಬಳಲಿಕೆಯಿಂದಾಗಿ ಜ್ವರ ಮತ್ತು ಗಂಟಲು ಕೆರೆತ ಇರುವುದರಿಂದ ಕೊರೋನ ಪರೀಕ್ಷೆಗಾಗಿ ಗಂಟಲ ದ್ರವ ತೆಗೆಯಲಾಗಿದೆ. ಆಸ್ಪತ್ರೆಯ ಕ್ವಾರೆಂಟೈನ್ ವಾರ್ಡಲ್ಲಿ ಇರಿಸಲಾಗಿದೆ.
ಕ್ವಾರೆಂಟೈನ್ ಗಾಗಿ ಎರಡು ಬಾರಿ ಸೀಲ್ ಹಾಕಲ್ಪಟ್ಟ ವ್ಯಕ್ತಿ ಈ ರೀತಿ ಎಲ್ಲಾ ಕಡೆ ತಿರುಗಾಡುತ್ತಿದ್ದಾರೆಂದರೆ ನಮ್ಮ ಆಡಳಿತ ಯಾವ ರೀತಿ ಕಣ್ಗಾವಲು ಇರಿಸಿದೆ ಎಂಬುದು ಗೊತ್ತಾಗುತ್ತದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.