Breaking News

ದುಗಲಡ್ಕ; ಅಕ್ರಮ ಹೋರಿ ಸಾಗಾಟಕ್ಕೆ ಯುವಕರಿಂದ ತಡೆ

Advt_Headding_Middle
Advt_Headding_Middle


ಅಕ್ರಮವಾಗಿ ಪಿಕಪ್ ವಾಹನದಲ್ಲಿ ಹೋರಿಯನ್ನು ಸಾಗಿಸುತ್ತಿದ್ದವರನ್ನು ದುಗಲಡ್ಕದಲ್ಲಿ ಯುವಕರು ತಡೆದು ಹೋರಿಯನ್ನು ವಶಪಡಿಸಿಕೊಂಡ ಘಟನೆ ನಿನ್ನೆ ರಾತ್ರಿದುಗಲಡ್ಕದಲ್ಲಿ ನಡೆದಿದೆ.
ಉಬರಡ್ಕ  ಮಿತ್ತೂರು ಗ್ರಾಮದ ಹಿಂದೂ ಯುವಕರಿಬ್ಬರು ಉಬರಡ್ಕದ ಮನೆಯೊಂದರಿಂದ ಹೋರಿಯನ್ನು ಖರೀದಿಸಿ ದುಗಲಡ್ಕ ಮಾರ್ಗವಾಗಿ ಪಿಕಪ್ ವಾಹ‌ನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದರೆನ್ನಲಾಗಿದೆ. ಇದನ್ನು ತಿಳಿದ ಸ್ಥಳೀಯ ಯುವಕರು ಪಿಕಪ್ ವಾಹನವನ್ನು ತಡೆದು ವಿಚಾರಿಸಿದರು.ಬಳಿಕ ಹೋರಿಯನ್ನು ವಶಕ್ಕೆ ಪಡೆದುಕೊಂಡರು.ಹೋರಿಯನ್ನು ದುಗಲಡ್ಕದಲ್ಲಿ ಕಟ್ಟಿ ಹಾಕಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.