ಹೀಗೊಂದು ಕೆಟ್ಟ ಕವನ

Advt_Headding_Middle
Advt_Headding_Middle

 

ಇರುವ ಕೋಪ,ರೋಷ, ದ್ವೇಷ ಎಲ್ಲವನೂ
ಕಾರಿಬಿಡು ನನ್ನ ಮೇಲೆ,
ನನಗೇನೂ ಬೇಸರವಿಲ್ಲ….
ಒಂದಿನ ನಾನು ಇಲ್ಲ ಎಂಬ
ಸತ್ಯ ಗೊತ್ತಾದಾಗ ಮಾತ್ರ
ಹೃದಯದಿಂದ ಅತ್ತು ಬಿಡು…!
ಎರಡು ಹನಿ ನನಗಾಗಿ ಸುರಿಸಿಬಿಡು!

ಹಠಮಾಡಿ,ದ್ವೇಷ ಸಾಧಿಸಿ ಮಾತನ್ನೇ ಮರೆತು ಬಿಡು…
ನನಗೇನೂ ದುಃಖವಿಲ್ಲ,
ನಾ ಮಲಗಿದ ಗೋರಿಯ ಮೇಲೆ ಮಾತ್ರ
ನಿತ್ಯ ನಿನ್ನ ಗಾನದ ತುಣುಕು ಹರಿಸಿಬಿಡು…
ನನಗಾಗಿ ಕೊಂಚ ಹಾಡಿಬಿಡು!!

ಕೊಟ್ಟಿರುವ ಪ್ರೀತಿಯನ್ನೆಲ್ಲಾ
ಕಿಂಚಿತ್ ಉಳಿಯದಂತೆ ಧ್ವಂಸ ಮಾಡಿಬಿಡು…
ಬೇಸರವೇ ಇಲ್ಲ….
ನಾನಿಲ್ಲದ ಮೇಲೆ ಮಾತ್ರ ನಗುವ ಕೆಂಪು ಗುಲಾಬಿಯೊಂದ
ನನ್ನ ಮೇಲಿಟ್ಟು ಬಿಡು…..
ನನಗಾಗಿ
ಹಿತವಾಗೊಮ್ಮೆ ಸ್ಪರ್ಶಿಸಿ ಬಿಡು!!

ಮನಸಿಗೊಂದಿಷ್ಟು ಗಾಯ ಮಾಡಿ
ಎಷ್ಟು ಹೀನಾಯವಾಗಿಯಾದರೂ ಜರಿದುಬಿಡು..
ನೋವನಿಸುವುದಿಲ್ಲ….
ನಾನಿಲ್ಲವೆಂಬ ಸತ್ಯ ಗೊತ್ತಾದ ಮೇಲಾದರೂ
ದ್ವೇಷಿಸುವುದನು ಮರೆತುಬಿಡು..
ನನಗಾಗಿ ಮನಸಾರೆ ಅತ್ತು ಬಿಡು!!


*ಪ್ರಮೀಳಾ ರಾಜ್*
ಐವರ್ನಾಡು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.