Breaking News

ಸುಬ್ರಹ್ಮಣ್ಯದಲ್ಲಿ ನಿರಾಶ್ರಿತರಿಗೆಂದು ಬೇಯಿಸಿದ ಅನ್ನ ಚೆಲ್ಲಿದ ಫೋಟೊ ವೈರಲ್

Advt_Headding_Middle
Advt_Headding_Middle

 

ಕಾರ್ಮಿಕರು ಬೆಳ್ತಿಗೆ ಊಟ ಮಾಡದ್ದರಿಂದ ಹೀಗಾಗಿದೆ; ಮುಂದಕ್ಕೆ ಚಪಾತಿ ವ್ಯವಸ್ಥೆ – ಸ್ಪಷ್ಟನೆ

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಅಭಯ ವಸತಿಗೃಹದಲ್ಲಿ ನಡೆಸಲ್ಪಡುತ್ತಿರುವ ವಲಸೆ ಕಾರ್ಮಿಕರ ನಿರಾಶ್ರಿತರ ಕೇಂದ್ರದಲ್ಲಿರುವವರಿಗೆ ತಯಾರಿಸಿದ ಅನ್ನ ವನ್ನು ಚೆಲ್ಲುತ್ತಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ದೊಡ್ಡ ಕಟಾರವೊಂದರಲ್ಲಿ ತುಂಬಿರುವ ಅನ್ನವನ್ನು ಟ್ರಾಕ್ಟರ್ ಗೆ ಸುರಿದು ಚೆಲ್ಲುತ್ತಿರುವುದು ಫೋಟೋಗಳಲ್ಲಿ ಕಂಡು ಬರುತ್ತಿದೆ.

ಈ ಕುರಿತು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದವರನ್ನು ಸಂಪರ್ಕಿಸಿದಾಗ, ಕಾರ್ಮಿಕರೆಲ್ಲರೂ ಬಿಹಾರದವರಾಗಿದ್ದ ಕಾರಣ ಅವರುಗಳು ಬೆಳ್ತಿಗೆ ಊಟ ಮಾಡುತ್ತಿಲ್ಲ. ಆದ್ದರಿಂದ ಅನ್ನ ಉಳಿದಿದ್ದು ಅದನ್ನು ಬಿಸಾಡಿದ್ದಾರೆ. ಈ ಬಗ್ಗೆ ದೇವಸ್ಥಾನದವರ ಗಮನಕ್ಕೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಜಾಗ್ರತೆ ವಹಿಸುವುದಾಗಿಯೂ ಕಾರ್ಮಿಕರಿಗೆ ಇನ್ಮುಂದೆ, ಚಪಾತಿ ವ್ಯವಸ್ಥೆ ಮಾಡುವುದಾಗಿಯೂ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.