Breaking News

ಕೊಲ್ಲಮೊಗ್ರು : ಮಧ್ಯಾಹ್ನ ಎರಡು ಗಂಟೆ ತನಕ ಅಂಗಡಿ ತೆರೆಯಲು ನಿರ್ಧಾರ

Advt_Headding_Middle
Advt_Headding_Middle

ಕೊಲ್ಲಮೊಗ್ರು ಗ್ರಾ.ಪಂ ವತಿಯಿಂದ ಕೊರೋನಾ ಕಾರ್ಯಪಡೆ ಮತ್ತು ಕೊಲ್ಲಮೊಗ್ರು, ಕಲ್ಮಕಾರು ಗ್ರಾಮಗಳ ವರ್ತಕರ ಸಭೆಯನ್ನು ಮೇ.11 ರಂದು ಗ್ರಾ. ಪಂ ಅಧ್ಯಕ್ಷೆ ವೀಣಾನಂದ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ಗ್ರಾ.ಪಂ ವತಿಯಿಂದ ಮುಂದಿನ ದಿನಗಳಲ್ಲಿ ಅಂಗಡಿಗಳ ತೆರೆಯುವಿಕೆ ಬಗ್ಗೆ ಚರ್ಚಿಸಲಾಗಿದ್ದು ಇದರಂತೆ ಮೇ.12 ರಿಂದ ಕೊಲ್ಲಮೊಗ್ರು ಗ್ರಾ.ಪಂ ವ್ಯಾಪ್ತಿಯ ಕೊಲ್ಲಮೊಗ್ರು, ಕಲ್ಮಕಾರು ಗ್ರಾಮಗಳ ಅಂಗಡಿಗಳನ್ನು ಬೆಳಗ್ಗಿನಿಂದ ಮಧ್ಯಾಹ್ನ 2 ಗಂಟೆ ವರೆಗೆ ಮುಂದಿನ ಆದೇಶದ ಆಗುವ ವರೆಗೆ ತೆರೆದಿರುವಂತೆ ನಿರ್ದರಿಸಲಾಗಿದೆ. ಇದಕ್ಕೆ ವರ್ತಕರು ಸಹಮತ ಸೂಚಿಸಿದ್ದಾರೆ. ಸಭೆಯಲ್ಲಿ ಗ್ರಾ.ಪಂ ಸದಸ್ಯರು, ಪಿಡಿಒ, ವರ್ತಕರು, ಕೊರೋನಾ ಕಾರ್ಯಪಡೆಯ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.