Breaking News

ಕದಿಕಡ್ಕ: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿ ಪೊಲೀಸ್ ಜೀಪು ಪಲ್ಟಿ-ಜಖಂ

Advt_Headding_Middle
Advt_Headding_Middle

ಕದಿಕಡ್ಕ: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿ ಪೊಲೀಸ್ ಜೀಪು ಪಲ್ಟಿ-ಜಖಂ
ಮೈಸೂರಿನಿಂದ ಮಂಗಳೂರಿಗೆ ಸುಳ್ಯ ಮಾರ್ಗವಾಗಿ ಹೋಗುತ್ತಿದ್ದ ಮಂಗಳೂರು ಎಫ್‌ಎಸ್‌ಎಲ್ ವಿಭಾಗದ ಪೊಲೀಸ್ ಜೀಪೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಟಕ್ಕೆ ಪಲ್ಟಿಯಾಗಿ ಜೀಪಿನಲ್ಲಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಗಳು ಸಣ್ಣಪುಟ್ಟ ಗಾಯಗಳಿಂದ ಪಾರಾದ ಘಟನೆ ಜಾಲ್ಸೂರು ಗ್ರಾಮದ ಕದಿಕಡ್ಕ ಎಂಬಲ್ಲಿ ಮೇ.೧೧ರಂದು ರಾತ್ರಿ ಸಂಭವಿಸಿದೆ.

ಮಂಗಳೂರು ಪೊಲೀಸ್ ಠಾಣೆಯೊಂದರ ಜೀಪು ಕರ್ತವ್ಯ ಸಲುವಾಗಿ ಮಡಿಕೇರಿಗೆ ತೆರಳಿ ಹಿಂತಿರುಗುತ್ತಿದ್ದ ವೇಳೆ ಜಾಲ್ಸೂರಿನಿಂದ ಮುಂದೆ ಕದಿಕಡ್ಕ ಎಂಬಲ್ಲಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು, ಪಕ್ಕದಲ್ಲಿದ್ದ ನಾರಾಯಣ ಗೌಡರ ತೋಟದ ಬದಿ ಪಲ್ಟಿಯಾಯಿತು.

ಪರಿಣಾಮ ಪೊಲೀಸ್ ಜೀಪಿನಲ್ಲಿದ್ದ ಚಾಲಕ ಸೇರಿದಂತೆ ಇಬ್ಬರು ಪೊಲೀಸ್ ಸಿಬ್ಬಂದಿಗಳು ಸಣ್ಣ ಪುಟ್ಟ ಗಾಯಗೊಂಡರು. ಬಳಿಕ ಅವರು ಸುಳ್ಯ ಸರಕಾರಿ ಆಸ್ಪತ್ರೆಗೆ ಸುಳ್ಯ ಪೊಲೀಸರ ಸಹಕಾರದಿಂದ ತೆರಳಿ ಚಿಕಿತ್ಸೆ ಪಡೆದುಕೊಂಡರು ಎಂದು ತಿಳಿದುಬಂದಿದೆ.
ಪಲ್ಟಿಯಾದ ಜೀಪನ್ನು ಕ್ರೈನ್ ಮೂಲಕ ಮೇಲೆತ್ತಲಾಗಿದ್ದು, ರಾತ್ರಿ ಮಳೆ ಬರುತ್ತಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಜೀಪು ಪಲ್ಟಿಯಾಯಿತೆಂದು ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.