Breaking News

ಮಸೀದಿ, ದರ್ಗಾ, ಮದರಸಗಳಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನೇ ಮುಂದುವರಿಸಬೇಕು : ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ  ಸೂಚನೆ

Advt_Headding_Middle
Advt_Headding_Middle

 

ಸರಕಾರದ ಹಾಗೂ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಆದೇಶದಂತೆ ಕೊರೋನಾ ವೈರಸ್ ತಡೆಗಟ್ಟುವ ಸಲುವಾಗಿ ಈಗಾಗಲೇ ಮಸೀದಿ, ದರ್ಗಾ ಹಾಗೂ ಮದರಸಗಳನ್ನು ಬಂದ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಸೇವೆ ಸಲ್ಲಿಸುತ್ತಿರುವ ಪೇಶ್‌ಇಮಾಮ್, ಮೌಝನ್ ಹಾಗೂ ಮದರಸದ ಸಿಬ್ಬಂದಿಗಳಿಗೆ ಮನೆಯಲ್ಲಿಯೇ ಇರಬೇಕಾದ ಪರಿಸ್ಥಿತಿ ಬಂದಿದೆ.

ಮಾರ್ಚ್ ತಿಂಗಳಿನಿಂದ ಆರಂಭವಾದ ಲಾಕ್‌ಡೌನ್ ಇನ್ನೂ ಮುಂದುವರೆಯುತ್ತಲೇ ಇದೆ. ಈ ಸಂದರ್ಭದಲ್ಲಿ ಸರಕಾರದ ಹಾಗೂ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಆದೇಶವನ್ನು ಪಾಲನೆ ಮಾಡುವ ಅನಿವಾರ್ಯತೆಯಿಂದ ತಮ್ಮ ಕರ್ತವ್ಯಕ್ಕೆ ಹಾಜರಾಗಲಿಲ್ಲ. ಆದರೂ ಅವರ ವೇತನವನ್ನು ಸಂಬಂಧಪಟ್ಟ ಮಸೀದಿ, ಮದರಸ ಹಾಗೂ ದರ್ಗಾ ಆಡಳಿತ ಸಮಿತಿಗಳು ಪಾವತಿಸಿರುತ್ತಾರೆ. ವಷಂಪ್ರತಿ ರಮಝಾನ್ ತಿಂಗಳಿನಲ್ಲಿ ಸಿಬ್ಬಂದಿಗಳನ್ನು ಕೈಬಿಡುವುದು, ಹಾಗೂ ಹೊಸ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವುದು ವಾಡಿಕೆಯಾಗಿದೆ.

ಆದರೆ ಕೊರೋನಾ ರೋಗ ಇರುವ ಕಾರಣ ಈ ವಾಡಿಕೆಯನ್ನು ಬದಿಗಿಟ್ಟು ಒಂದು ವರ್ಷದ ಮಟ್ಟಿಗೆ ಅಥವಾ ಲಾಕ್‌ಡೌನ್ ಮಗಿಯುವ ತನಕ ಹಾಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನೇ ಮುಂದುವರಿಸಲು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಯು. ಕೆ. ಮೋನು ಕನಚೂರುರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.