ಹೊರ ರಾಜ್ಯಗಳಿಂದ ಬಂದ 14 ಮಂದಿಗೆ ಸುಳ್ಯದಲ್ಲಿ ಕ್ವಾರಂಟೇನ್

Advt_Headding_Middle
Advt_Headding_Middle

 

ಉದ್ಯೋಗಕ್ಕೆಂದು ಹೊರರಾಜ್ಯಗಳಿಗೆ ತೆರಳಿ ಇದೀಗ ಲಾಕ್ ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ತಮ್ಮ ತಮ್ಮ ಮನೆಗೆ ಹಿಂದಿರುಗಿದ ಸುಳ್ಯ ತಾಲೂಕಿನ ಸುಮಾರು 13 ಮಂದಿಯನ್ನು ಸುಳ್ಯ ಎಪಿಎಂಸಿ ಬಳಿ ಇರುವ ದೇವರಾಜು ಅರಸು ಮೆಟ್ರಿಕ್ ಪೂರ್ವ ಬಾಲಕರ ನಿಲಯ ದಲ್ಲಿ ತಾಲೂಕು ಆಡಳಿತದಿಂದ ಕ್ವಾರಂಟೇನ್ ಗೆ ಒಳಪಡಿಸಲಾಗಿದೆ.

ಇವರಲ್ಲಿ ಓರ್ವರು ಬಂಟ್ವಾಳ ಮೂಲದವರಾಗಿದ್ದು ಮುಂಬೈಯಿಂದ ಬರುತ್ತಿದ್ದವರ ಜೊತೆಯಲ್ಲಿ ಬಂದ ಹಿನ್ನೆಲೆಯಲ್ಲಿ ಅವರನ್ನು ಕೂಡ ಸುಳ್ಯದಲ್ಲಿ ಕ್ವಾರಂಟೇನ್ ಗೆ ಒಳಪಡಿಸಲಾಗಿದೆ.

ಮುಂಬೈಯಿಂದ ಬಂದವರಲ್ಲಿ 2 ವರ್ಷದ ಮಗು ಕೂಡ ಒಳಗೊಂಡಿದೆ. ಇವರ ಪೈಕಿ ಮೂವರು ನೆಲ್ಲೂರು ಕೆಮ್ರಾಜೆ ನಿವಾಸಿಗಳು‌ . ಮೂರೂರು ಭಾಗದ ಒಬ್ಬ ವ್ಯಕ್ತಿ ಮತ್ತು ಒಬ್ಬರು ಮುಳ್ಯ ನಿವಾಸಿ.

ಇವರುಗಳನ್ನು ಮೆಟ್ರಿಕ್ ಪೂರ್ವ ಬಾಲಕರ ನಿಲಯದಲ್ಲಿ ಇರಿಸಲಾಗಿದೆ. ತಮಿಳುನಾಡು ಕಡೆಯಿಂದ ಬಂದ 7 ಮಂದಿಯನ್ನು ಪಕ್ಕದಲ್ಲಿರುವ ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ನಿಲಯದಲ್ಲಿ ಇರಿಸಲಾಗಿದ್ದು ಈ ಏಳು ಮಂದಿ ತಮಿಳುನಾಡಿನ ಗಾರ್ಮೆಂಟ್ಸ್ ಕಂಪನಿಯೊಂದರಲ್ಲಿ ಒಟ್ಟಿಗೆ ಉದ್ಯೋಗವನ್ನು ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಸುಳ್ಯ ತಾಲೂಕಿನ ಅಜ್ಜಾವರ, ಮಂಡೆಕೋಲು, ತೊಡಿಕಾನ, ಬೆಳ್ಳಾರೆ ಭಾಗದ ತಲಾ ಒಬ್ಬ ವ್ಯಕ್ತಿಗಳು ಆಗಿದ್ದು ಸುಳ್ಯ ನಗರ ಹಳೆಗೇಟು ಪರಿಸರದ ಇಬ್ಬರು, ಈಶ್ವರಮಂಗಲ ಗ್ರಾಮದ ಒಬ್ಬ ವ್ಯಕ್ತಿ ಯಾಗಿದ್ದಾರೆ.

ತಾಲೂಕು ಆಡಳಿತದಿಂದ ಈ ವ್ಯವಸ್ಥೆ ಕಲ್ಪಿಸಲಾಗಿದ್ದು ಮುಂಜಾಗ್ರತಾ ಕ್ರಮವಾಗಿ ಇವರು 14 ದಿನಗಳ ಕಾಲ ಕ್ವಾರಂಟೇನ್ ಪೂರ್ತಿ ಗೊಳಿಸಬೇಕಾಗಿದೆ‌.

ಇವರು ಯಾರೂ ಕೂಡ ಕೊರೋನಾ ಶಂಕಿತರಲ್ಲ. ತಮಿಳುನಾಡು ಮಹಾರಾಷ್ಟ್ರ ಭಾಗಗಳಲ್ಲಿ ಕೊರೋನಾ ಹೆಚ್ಚಿಗೆ ಕಂಡುಬಂದ ಕಾರಣಕ್ಕೆ ಮುಂಜಾಗ್ರತಾ ವಾಗಿ ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿದುಬಂದಿದೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.