Breaking News

ನಮ್ಮ ದೇಹದೊಂದಿಗೆ ನಮ್ಮ ದೇಶವನ್ನೂ ಸ್ವಚ್ಛವಾಗಿರಿಸೋಣ

Advt_Headding_Middle
Advt_Headding_Middle

✍️ *ಗಣೇಶ್ ಜಾಲ್ಸೂರು*

ಇದೀಗ ಎಲ್ಲೆಂದರಲ್ಲಿ ಕೊರೋನಾ ಸೋಂಕಿನ ಕುರಿತ ಮಾತುಗಳೇ ಕೇಳಿ ಬರುತ್ತಿವೆ. ಕಳೆದ ನಾಲ್ಕೂವರೆ ತಿಂಗಳ ಹಿಂದೆ ಚೀನಾದೇಶದ ವುಹಾನ್ ನ ಮಾರ್ಕೆಟ್ ಗೆ ಎಂದಿನಂತೆ ಬಂದು ಹೋದ ಜನರು ಇದ್ದಕ್ಕಿದ್ದಂತೆ ಶೀತ ಕೆಮ್ಮು ಎನ್ನುವ ಸಾಮಾನ್ಯ ಅಸೌಖ್ಯ ಕ್ಕೆ ಒಳಗಾದರು. ಆದರೆ ಇದೇ ರೀತಿಯ ಅಸೌಖ್ಯಕ್ಕೆ ಒಳಗಾದವರ ಸಂಖ್ಯೆಯು ದಿನೇ ದಿನೇ ಹೆಚ್ಚುತ್ತಲೇ ಹೋಯಿತು. ಹತ್ತು ಹನ್ನೆರಡು ದಿನಗಳಲ್ಲಿ ಈ ರೀತಿಯ ರೋಗ ಲಕ್ಷಣ ಕಂಡು ಬಂದವರೆಲ್ಲ ಗಂಟಲು ದ್ರವ ಒಣಗಿ ಉಸಿರಾಟದ ತೊಂದರೆಗೆ ಒಳಗಾಗಿ ಆಸ್ಪತ್ರೆಯನ್ನು ಸೇರಿದರು.

ಕೊನೆಗೆ ಆರೋಗ್ಯ ತಪಾಸಣೆ ಮಾಡುತ್ತಾ ಸಂಶೋಧನೆ ಮಾಡಿದಾಗ ಈ ರೋಗ ಲಕ್ಷಣಕ್ಕೆ ಕೊರೋನಾ ಎನ್ನುವ ವೈರಸ್ ಕಾರಣ ಎಂದು ದೃಢ ಪಟ್ಟಿತು ಮತ್ತೆ ನಡೆದದ್ದೇ ಬೇರೆ. ವಿಶ್ವವೇ ವಿಸ್ಮಯ ಗೊಂಡಿತ್ತು. ಅದಾಗಲೇ ಜೀವ ಬಲಿಯನ್ನು ಪಡೆಯುವುದಕ್ಕೆ ಆರಂಭವಾಯಿತು ನಂತರ ಇದ್ದಕ್ಕಿದ್ದಂತೆ ಇಡೀ ವುಹಾನ್ ಪಟ್ಟಣದಲ್ಲಿ ಈ ವೈರಸ್ ಒಂದು ಸಾಂಕ್ರಾಮಿಕ ಸೋಂಕಾಗಿ ಎಲ್ಲರಿಗೂ ಹರಡಿ ಇದೀಗ ವೈದ್ಯ ಲೋಕಕ್ಕೆ ಈ ವೈರಸ್ ಸವಾಲಾಗಿ ಪರಿಣಮಿಸುತ್ತಿರುವುದು ನಾವೆಲ್ಲಾ ತಿಳಿಯುತ್ತಿದ್ದೇವೆ.

ಈ ಕೊರೋನಾ ವೈರಸ್ ಕ್ಷಣಾರ್ಧದಲ್ಲಿ ಇನ್ನೊಬ್ಬರ ದೇಹವನ್ನು ಸೇರಿ ಮತ್ತೆ ಆ ವ್ಯಕ್ತಿ ಸೀನಿದಾಗ ಕೆಮ್ಮಿದಾಗ ಇನ್ನೊಬ್ಬ ವ್ಯಕ್ತಿ ಗೆ ತಗುಲಿ ಅಥವಾ ಸೋಂಕಿತ ವ್ಯಕ್ತಿ ಮುಟ್ಟಿದರೆ ಇಲ್ಲವೇ ಯಾವುದೇ ವಸ್ತುಗಳನ್ನು ಸ್ಪರ್ಶಿಸಿದರೂ ಈ ರೋಗಾಣು ಹರಡುವುದು ಸ್ಪಷ್ಟವಾಗಿದೆ ಆರಂಭದಲ್ಲಿ ಚೀನಾದ ವುಹಾನ್ ನಲ್ಲಿ ಹುಟ್ಟಿ ಕೊಂಡು ಮತ್ತೆ ಮುತ್ತಲಿನ ಪ್ರದೇಶಕ್ಕೂ ಜನರ ಸಂಚಾರದಿಂದ ಹಬ್ಬಿ ಕಂಡು ಕೇಳರಿಯದ ರೀತಿಯಲ್ಲಿ ಸೋಂಕು ಉಲ್ಬಣಗೊಂಡು ಮರಣ ಮೃದಂಗ ಬಾರಿಸಿದ ವಿಷಯವನ್ನು ಟಿ ವಿ ಯಲ್ಲಿ ಪತ್ರಿಕೆ ಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಜಗತ್ತಿನಾದ್ಯಂತ ಸುದ್ದಿಯಾಗುತ್ತಲೇ ಹೋಯಿತು ವುಹಾನ್ ನಲ್ಲಿ ಹುಟ್ಟಿ ಹರಡಿದ ಸೋಂಕು ನಂತರದ ದಿನಗಳಲ್ಲಿ ದಿನದ ಇಪ್ಪತ್ತಾನಾಲ್ಕು ಗಂಟೆಗಳಲ್ಲಿ ಸೋಂಕಿತರ ಸನಿಹದಲ್ಲಿರುವ ಪ್ರತಿಯೊಬ್ಬರಿಗೂ ಹರಡುತ್ತಲೇ ಇದೆಯಲ್ಲದೇ ಅದರ ಮಾರಕ ಪ್ರಭಾವ ಮತ್ತು ಪರಿಣಾಮವನ್ನು ಶಂಕಿತರು ಸೋಂಕಿತರು ಪ್ರಾಣ ಕಳೆದುಕೊಂಡವರು ಎಂದು ಇವತ್ತು ವಿಶ್ವ ದ ಮೂಲೆ ಮೂಲೆಗಳಿಂದ ಸಂಖ್ಯೆ ಗಳಲ್ಲಿ ಲೆಕ್ಕಚಾರ ಹಾಕುತ್ತಲೇ ಇದ್ದಾರೆ . ಮತ್ತೆ ಮತ್ತೆ ಹರಡದಂತೆ ನಿಯಂತ್ರಿಸಲು ಇಡೀ ವಿಶ್ವ ವೇ ಹೆಣಗಾಡುತ್ತಿದೆ. ಇಡೀ ವಿಶ್ವದಲ್ಲಿ ಈ ಸಂಕಟಕ್ಕೆ ಒಳಗಾದವರು ಕೆಲವು ದೇಶಗಳಲ್ಲಿ ಐವತ್ತು ಸಾವಿರಕ್ಕಿಂತಲೂ ಹೆಚ್ಚು ಜನರು ಹಾಗೂ ಸುಮಾರು ಇನ್ನೂರ ಇಪ್ಪತ್ತೈದು ಕ್ಕಿಂತಲೂ ಹೆಚ್ಚು ರಾಷ್ಟ್ರ ಗಳಲ್ಲಿ ಇದು ಅಟ್ಟಹಾಸ ವನ್ನು ಮೆರೆಯುತ್ತಿದೆ ಎಂದು ಹೇಳಿದೆ. ಇದರಿಂದ ಪಾರಾಗಲೂ ಹಗಲು ರಾತ್ರಿಯೆನ್ನದೇ ವೈದ್ಯ ಲೋಕ ಕರೋನಾ ವಾರಿಯರ್ಸ್ ಪರಿಶ್ರಮಪಡುತ್ತಿದೆ. ಈ ಕೊರೋನಾ ವೈರಸ್ ಅವಾಂತರದಿಂದ ತತ್ತರಿಸುತ್ತಿರುವ ಜನರನ್ನು ಸಂರಕ್ಷಿಸುವ ಬಗೆ ಹಾಗೂ ಈ ಸಾಂಕ್ರಾಮಿಕ ರೋಗವನ್ನು ಪೂರ್ಣಶಮನ ಮಾಡುವ ಬಗ್ಗೆ ವೈದ್ಯಕೀಯ ಲೋಕದಲ್ಲಿ ಹೊಸ ಹೊಸ ಪರಿಪೂರ್ಣ ಪ್ರಯೋಗವನ್ನು ದಿನೇ ದಿನೇ ಪ್ರತೀ ದಿನ ನಾವುಗಳು ಗಮನಿಸುತ್ತಿದ್ದೇವೆ
ಇದೀಗ ವಿಶ್ವ ಆರೋಗ್ಯ ಸಂಸ್ಥೆಯು ಎಲ್ಲಾ ರಾಷ್ಟ್ರ ಗಳಿಗೆ ಈ ಕೊರೋನಾ ಬಿಕ್ಕಟ್ಟಿನಿಂದ ಪಾರಾಗಲೂ ಪ್ರತಿಯೊಬ್ಬರೂ ಆರೋಗ್ಯ ಸೂತ್ರ ಗಳನ್ನು ಪಾಲನೆ ಮಾಡಬೇಕು ಮುಖ್ಯವಾಗಿ ಪ್ರತಿಯೊಬ್ಬ ನಾಗರಿಕನು ತನ್ನ ಸ್ವಚ್ಛತೆ ಯ ಕಡೆ ಗಮನಹರಿಸಬೇಕೆಂದು ಸೂಚಿಸುತ್ತಾ ತನ್ನ ದೇಹದ ಜೊತೆ ತನ್ನ ದೇಶದ ರಕ್ಷಣೆ ಮಾಡಬೇಕೆಂದು ಕರೆಕೊಟ್ಟಿದೆ.

ಈ ನಿಟ್ಟಿನಲ್ಲಿ ನಮ್ಮ ಭಾರತ ಸರಕಾರವೂ ಕೋಟಿ ಕೋಟಿ ಭಾರತೀಯರ ಪ್ರಾಣರಕ್ಷಣೆಗೆ ಅವಿರತವಾಗಿ ಕಾರ್ಯತಂತ್ರವನ್ನು ರೂಪಿಸಿದೆ. ಅದರ ಪರಿಣಾಮವಾಗಿ ದೇಶದಲ್ಲಿ ಸೋಂಕು ಬಾಧಿತರ ಪ್ರಮಾಣ ನಿಯಂತ್ರಣದಲ್ಲಿದೆ ಸೋಂಕಿತರಲ್ಲೂ ಪಾಸಿಟಿವ್ ಬಂದರೂ ನಿಧಾನವಾಗಿ ಚೇತರಿಸಿಕೊಳ್ಳುತ್ತಾ ಗುಣಮುಖರಾಗುತ್ತಿದ್ದಾರೆ. ಆದರೆ ಈಗಾಗಲೇ ತಿಳಿಸಿರುವಂತೆ ನಮ್ಮ ದೇಶದಲ್ಲಿ ಎರಡೂ ಸಾವಿರದ ಇನ್ನೂರರಷ್ಟು ಮಂದಿ ಕೊರೋನಾದಿಂದ ಗುಣಮುಖರಾಗದೇ ಸಾವನ್ನಪ್ಪಿದ್ದು ದುರದೃಷ್ಟಕರ
ಆದರೆ ನಾವೀಗ ನಮ್ಮ ನಮ್ಮ ದೇಹದ ಆರೋಗ್ಯ ಕಡೆ ವಿಶೇಷವಾಗಿ ಎಚ್ಚರ ವಹಿಸಿದರೆ ಸಮ್ಮ ದೇಶವೂ ನಿರಾಂತಕವಾಗಿ ಇರಲು ಸಾಧ್ಯ ಹಾಗಾಗಿ ಪ್ರತೀ ರಾಜ್ಯ ಸರಕಾರವೂ ಜೊತೆಯಲ್ಲಿ ಕೇಂದ್ರ ಸರಕಾರವೂ ರಾಜ್ಯಕ್ಕೆ ಮಾರ್ಗದರ್ಶನ ಮಾಡುತ್ತಾ ಪ್ರತೀ ದಿನ ವರದಿ ಸಂಗ್ರಹಿಸುತ್ತಾ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳುತ್ತಿದೆ. ಆರ್ಥಿಕ ಸಹಾಯ ಆಹಾರ ಪೂರೈಕೆ ವಿಶೇಷ ಪ್ಯಾಕೇಜ್ ಗಳ ಘೋಷಣೆ ಮಾಡುತ್ತಲೇ ಎಲ್ಲರಿಗೂ ಧೈರ್ಯ ತುಂಬುತ್ತಿದೆ.
ಪ್ರತೀ ಜೀವವೂ ಬೆಲೆ ಕಟ್ಟ ಲಾಗದಂತಹುದು. ಹಾಗಾಗಿ ಆಕಸ್ಮಿಕವಾಗಿ ಈ ಸೋಂಕಿಗೆ ಒಳಗಾದವರ ಆರೋಗ್ಯ ತಪಾಸಣೆ ಮಾಡುವ ಎಲ್ಲಾ ವ್ಯವಸ್ಥೆ ಯನ್ನು ದೇಶದ ಪ್ರತೀ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ಮಾಡುತ್ತಿದೆ. ಆದರೆ ಕೆಲವು ವಿಪಯಗಳಲ್ಲಿ ಮುಖ್ಯ ಮೂರು ವಿಷಯಗಳಲ್ಲಿ ನಾವೇ ನಿರ್ಲಕ್ಷ್ಯ ತಾಳುತ್ತಿರುವುದು ನಿಯಂತ್ರಣ ಕ್ಕೆ ಬರುತ್ತಿರುವ ಹಂತದಲ್ಲಿ ಮತ್ತೆ ಸಮಸ್ಯೆ ಯನ್ನು ಬಿಗಾಡಾಯಿಸುತ್ತಿದ್ದೇವೋ ಎಂದೆನಿಸುತ್ತಿದೆ.

ಮೊದಲನೆಯದು ಮಾಸ್ಕ್ ಬಳಕೆ ಈ ಬಗ್ಗೆ ವೈದ್ಯರು ಸೂಚಿಸುತ್ತಲೇ ಬಂದಿದ್ದಾರೆ. ಆದರೆ ಮನೆಯಿಂದ ಯಾವುದೋ ಕಾರ್ಯನಿಮಿತ್ತ ಹೊರಡುವಾಗ ನಮ್ಮ ಪಕ್ಕದಲ್ಲಿ ನಮ್ಮ ಊರಿನಲ್ಲಿ ಯಾವುದೇ ಸಮಸ್ಯೆ ಇಲ್ಲವಲ್ಲ ಎಂದು ಕೆಲವರು ಕ್ಯಾರೇ ಇಲ್ಲವೆಂಬಂತೆ ಓಡಾಡುತ್ತಿದ್ದಾರೆ. ಆದರೆ ನಾವೆಲ್ಲರೂ ಕೇಳುತ್ತಿರುವಂತೆ ತಿಳಿದುಕೊಂಡಂತೆ ಯಾವನೇ ಒಬ್ಬ ವ್ಯಕ್ತಿ ಸೀನುವಾಗ ಕೆಮ್ಮು ವಾಗ ನಮಗೆ ಅರಿವಿಲ್ಲದಂತೆ ಇನ್ನೊಬ್ಬರ ದೇಹದ ಮೇಲೆ ವೈರಾಣು ಅಂಟಿಕೊಂಡು ಮತ್ತೆ ನಿಧಾನಕ್ಕೆ.ಅವರ ದೇಹವನ್ನು ಸೇರುತ್ತದೆ ಮತ್ತೆ ಹೀಗೆಯೇ ಸಾಂಕ್ರಾಮಿಕ ವಾಗಿ ಹರಡುತ್ತದೆ. ಹಾಗಾಗಿ ನಮ್ಮಿಂದ ಈ ರೀತಿ ಆಗದಂತೆ ಪ್ರತಿಯೊಬ್ಬರೂ ಮಾಸ್ಕ್ ಧರಿಸದೇ ಹೊರಡಲಾರೆ ಎನ್ನುವ ಸ್ವಯಂ ತತ್ತ್ವ ವನ್ನು ಪಾಲಿಸಿದರೆ ಒಳಿತಲ್ಲವೇ? ನಾಲ್ಕಾರು ಜನ ಸೇರುವಲ್ಲಿ ಒಬ್ಬಿಬ್ಬರು ಧರಿಸಿ ಉಳಿದವರು ಧರಿಸದೇ ಇದ್ದರೇ ನಾವೆಷ್ಟು ಸ್ವಯಂ ಜಾಗ್ರತೆ ಮಾಡುತ್ತೇವೆ ಎಂದು ನಮಗೆ ನಾವೇ ಪ್ರಶ್ನೆ ಮಾಡಬೇಕು .ಮಾಸ್ಕ್ ಅಂದರೆ ಮೂಗು ಬಾಯಿ ಮುಚ್ಚಿಕೊಳ್ಳುವಷ್ಟು ಬಟ್ಟೆಯನ್ನು ನಾವು ಕಟ್ಟಿಕೊಳ್ಳುವುದು. ಅದರಲ್ಲೂ ಪುನರ್ಬಳಕೆ ಮಾಡಿಕೊಳ್ಳುವ ರೀತಿಯ ಬಟ್ಟೆಗಳನ್ನು ಮಿಶನ್ ನಿಂದಲೋ ಕೈ ಹೊಲಿಗೆಯಿಂದಲೋ ತಯಾರು ಮಾಡಿಕೊಂಡು ನಮ್ಮ ಮತ್ತು ಬಂಧುಗಳ ಪುಟ್ಟ ಮಕ್ಕಳ ಆರೋಗ್ಯ ಚೆನ್ನಾಗಿ ರುವಂತೆ ನೋಡಿಕೊಳ್ಳಬಹುದಲ್ಲವೇ ಇಲ್ಲೂ ಸ್ವಚ್ಛತೆ ಯನ್ನು ಮರೆಯಲೇ ಬಾರದು ಬಳಸಿದನ್ನು ಎಲ್ಲೆಂದರಲ್ಲಿ ಬಿಸಾಡುವುದು ಬಳಸಿದನ್ನೇ ಇನ್ನೊಬ್ಬರು ಬಳಸುವುದು ಅಲ್ಲದೇ ಮಾಸ್ಕ್ ನ ಒಳ ಹೊರಗು ಬಳಸುವುದು ತಪ್ಪು .ಮತ್ತೆ ಮಾಸ್ಕ್ ನ್ನು ಅಧಿಕಾರಿಗಳು ತನಿಖೆ ಮಾಡಿ ದಂಡ ಹಾಕುತ್ತಾರೆಂಬುದಕ್ಕೆ ಅವರನ್ನು ಕಂಡಾಗ ಧರಿಸುವುದು ಇದೆಲ್ಲಾ ನಾವು ಮಾಡುವ ಸ್ವಯಂಕೃತ ಅಪರಾಧಗಳು. ಹಾಗೆಯೇ ಪುನರ್ಬಳಕೆ ಮಾಡುವಂತಹ ಬಟ್ಟೆಯಾದರೆ ಬಳಸಿದ ಮೇಲೆ ಮನೆಗೆ ಬಂದು ತೊಳೆದು ಒಣಗಿಸುವುದು ಹಾಗೂ ನಾವುಗಳು ಸಾಬೂನು ಹಾಕಿ ಕೈತೊಳೆಯುವುದು ಅತ್ಯಗತ್ಯ .ಪುಟ್ಟ ಮಕ್ಕಳು ಪಾಲಿಸಬೇಕಾದರೇ ನಾವು ಈ ಶಿಸ್ತನ್ನು ಪಾಲಿಸುವುದು ಅತ್ಯಗತ್ಯ. ಹಾಗಾಗಿ ಇನ್ನು ಮುಂದೆ ಮಾಸ್ಕ್ ಧರಿಸಿ ಹೊರಗಡೆ ಹೋಗುವುದು ಹಾಗೂ ಜನ ಸೇರುವಲ್ಲಿ ಇರುವುದು ನಮ್ಮ ಆರೋಗ್ಯ ದೃಷ್ಟಿಯಿಂದ ಉತ್ತಮ .ಇದಕ್ಕೆಲ್ಲ ಆಗಾಗ ಅಧಿಕಾರಿಗಳ ಸರಕಾರ ಆದೇಶ ಉಪದೇಶವೇ ನೀಡಿದರೆ ಮಾತ್ರ ಪಾಲಿಸೋಣ ಎಂದು ನಮ್ಮಷ್ಟಕ್ಕೆ ಇರುವುದು ಸರಿಯಲ್ಲ.

ಎರಡನೆಯದು ಸಾಮಾಜಿಕ ಅಂತರ ಕಾಪಾಡುವುದು ಇದು ಕೂಡ ನಮ್ಮ ಶಿಸ್ತು ಬದ್ಧ ಜೀವನ ವ್ಯವಹಾರವೂ ಹೌದು ಮನೆಯೊಳಗೆ ನಮ್ಮ ಬಂಧುಗಳೇ ಇರುವುರಿಂದ ಅವರ ಪ್ರತೀ ಚಲನವಲನದ ಅರಿವು ಹಾಗೂ ಆರೋಗ್ಯ ದ ಸ್ಥಿತಿಗತಿ ನಮಗೆ ತಿಳಿದಿರುತ್ತದೆ. ಆದರೆ ಈ ಸಾಮಾಜಿಕ ಅಂತರ ಅವಶ್ಯಕತೆ ಮನೆಯಿಂದ ಹೊರಟು ದಿನ ನಿತ್ಯ ದ ವಸ್ತು ಖರೀದಿ ಬ್ಯಾಂಕ್ ವ್ಯವಹಾರಗಳ ಸಂದರ್ಭದಲ್ಲಿ ಜನ ಸಂದಣಿಯ ಮಧ್ಯೆ ಇರುವಲ್ಲಿ ಅವಶ್ಯಕತೆ ಇದೆ ಯಾಕೆಂದರೆ ಪ್ರತಿಯೊಬ್ಬರೂ ಒಬ್ಬರಿಗೊಬ್ಬರು ಅಪರಿಚಿತರು ಮತ್ತೆ ಅವರವರ ಆರೋಗ್ಯ ದ ಸ್ಥಿತಿಗತಿಯು ಇನ್ನೊಬ್ಬರ ರಿಗೆ ತಿಳಿದಿರುವುದಿಲ್ಲ ಆದರೆ ಜೀವನಾವಶ್ಯಕ ಸಂಗತಿಗಳಿಗಾಗಿ ಪ್ರತಿಯೊಬ್ಬರೂ ಓಡಾಟ ಖರೀದಿ ಸಭೆ ಎನ್ನುವಂತೆ ಪರಸ್ಪರ ಮುಖಾಮುಖಿ ಯಾಗುವುದು ಅನಿವಾರ್ಯ ಈ ಸಂದರ್ಭದಲ್ಲಿ ಪ್ರತಿಯೊಬ್ಬರು ಪ್ರತೀ ವ್ಯಕ್ತಿ ಕ್ಷೇಮವಾಗಿರಲೆಂದು ಈ ಸಾಮಾಜಿಕ ಅಂಂತರದ ಕಾಯ್ದುಕೊಳ್ಳುವಲ್ಲಿ ಶಿಸ್ತನ್ನು ರೂಢಿಸಿಕೊಳ್ಳುವುದು ನಮ್ಮ ಸ್ವಯಂಪ್ರಜ್ಞೆ ಸರಿ ಸಾಮಾಜಿಕ ಅಂತರ ಜಾತಿ ಮೈಬಣ್ಣ ಆರ್ಥಿಕ ಸ್ಥಿತಿ ಗತಿ ಮತ ಧರ್ಮ ಎಂಬ ಅನಗತ್ಯ ವಿಷಯಗಳಲ್ಲಿ ಇಲ್ಲಿ ನಾವೆಲ್ಲರೂ ಭಾರತೀಯರು ಎನ್ನುವ ಸಹೋಜರತೆ ಇರಬೇಕು ಹಾಗಾಗಿ ಶಿಸ್ತು ಬದ್ಧ ಅಚ್ಚುಕಟ್ಟಾದ ಜೀವನ ವ್ಯವಹಾರಗಳನ್ನು ರೂಢಿಸಿಕೊಳ್ಳೋಣ ಇಲ್ಲೂ ಇದುವರೆಗೆ ಇಲ್ಲದು ಈಗ ಯಾಕೆ ಎಂದು ಮರುಪ್ರಶ್ನಿಸದೇ ಇನ್ನಾದರೂ ನಮ್ಮ ಲ್ಲಿ ಈ ಜಾಗೃತಿ ಮೂಡಬೇಕು

ಮೂರನೆಯದು ಸ್ಯಾನಿಟೈಸರ್ ವಿಚಾರವಾಗಿ ಜಾಗೃತರಾಗಿರುವುದು ಇಲ್ಲಿ ಸರಳವಾಗಿ ಹೇಳುವುದಾದರೆ ಕೈ ಮೈ ಮುಖ ಅಂತಾ ಬ್ಯಾಕ್ಟೀರಿಯಾ ನಾಶಕ ದ್ರಾವಣ ಅಥವಾ ಶುದ್ಧ ನೀರಿನಲ್ಲಿ ಇಪ್ಪತ್ತು ಸೆಕೆಂಡು ಕಾಲ ತೊಳೆಯುತ್ತಾ ನಮ್ಮನ್ನು ನಾವು ಶುಚಿಯಾಗಿರಿಸುವುದು ನಮ್ಮ ವಿವೇಚನೆಯಾಗಿದೆ ಮನೆಯಿಂದ ಹೊರಟೆವು ಎಂದ ಮೇಲೆ ಇತರರ ಜೊತೆ ಮಾತುಕತೆ ಒಡನಾಟ ಅಪರಿಚಿತರ ಭೇಟಿ ವಸ್ತುಗಳ ಕೊಡುಕೊಳ್ಳುವಿಕೆ ಅಂತಾ ಇದ್ದದೇ ಆದರೆ ಇಲ್ಲೆಲ್ಲಾ ನಾವು ಬಹಳ ಮನುಷ್ಯ ಪ್ರೀತಿಯ ಸಲುಗೆಯಿಂದ ಬೆರೆತುಕೊಳ್ಳುವುದು ಸಹಜ ಇರಲಿ ಇದು ಮನುಷ್ಯ ಸಹಜಗುಣವೇ ಆದರೆ ಇದೀಗ ಪ್ರತೀ ದಿನದ ಸುದ್ದಿ ಯಂತೆ ಹರಡುವ ಹೊಸ ಹೊಸ ಸಾಂಕ್ರಾಮಿಕ ರೋಗಗಳಿಗೆ ನಾವು ಒಳಗಾಗಿ ಸಂಕಟಪಡದೇ ನೆಮ್ಮದಿ ಯಾಗಿರುವುದು ಒಳಿತಲ್ಲವೇ ಹಾಗಾಗಿ ಸ್ಯಾನಿಟೈಸರ್ ರಂತಹ ವಿಷಯಗಳ ಬಳಕೆ ಬಹಳಷ್ಟು ಮಹತ್ವದ ದಾಗಿ ಇದು ಪ್ರತೀ ನಿತ್ಯ ಸಾಧ್ಯವೇ ಎಂದೂ ಪ್ರಶ್ನಿಸುವುದು ತಪ್ಪು ಯಾಕೆಂದರೆ ಸುಲಭವಾಗಿ ನೀರಿನ ಲಭ್ಯತೆ ಇರುವಾಗ ಕಷ್ಟವೆಂದೆನಿಸದು

ಹೀಗೆಯೇ ಇನ್ನೂ ಕೆಲವು ಆರೋಗ್ಯ ಸೂಚನೆಗಳನ್ನು ಕೇಳಿ ತಿಳಿದುಕೊಳ್ಳುವುದು ಅದರಂತೆ ದೈನಂದಿನ ಜೀವನದಲ್ಲಿ ಪಾಲಿಸಿಕೊಂಡು ಬಂದರೆ ಭಗವಂತನು ಕೊಟ್ಟ ಸುಂದರ ಆಯುಷ್ಯ ದವರೆಗೆ ನಾವೆಲ್ಲರೂ ಇದ್ದುದರಲ್ಲಿ ತೃಪ್ತಿ ಪಟ್ಟು ಕೊಂಡು ಬದುಕಬಹುದು ಇಷ್ಟೆಲ್ಲಾ ವಿಚಾರಗಳಲ್ಲಿ ನಾವು ಜಾಗೃತರಾದೆವೆವು ಎಂದಾದರೆ ನಮ್ಮ ದೇಹ ನಮ್ಮ ದೇಶ ಸ್ವಚ್ಛ ಹಾಗೂ ಆರೋಗ್ಯ ಪೂರ್ಣ ಶಿಸ್ತಿನ ಬದುಕು ನಮ್ಮ ದಾಗುವುದು ನಮ್ಮ ದೇಶದ ಪ್ರಧಾನಿ ನರೇಂದ್ರಮೋದಿಯವರು ತನ್ನ ಪ್ರೀತಿಯ ದೇಶವಾಸಿಗಳಿಗೆ ಹೇಳಿರುವಂತೆ ನಮ್ಮ ದು ಜಗತ್ತಿಗೆ ಸಂಸ್ಕೃತಿಯನ್ನು ಪರಿಚಯಿಸಿದ ದೇಶ ನಮ್ಮ ದೇಶ ವಿಶ್ವವನ್ನೇ ತನ್ನ ಕುಟುಂಬವೆಂದು ಭಾವಿಸಿದ ದೇಶ ನಮ್ಮ ದೇಶ ಚಿನ್ನದಂತಹ ನೆಲವನ್ನು ಸಮೃದ್ಧಿ ಯನ್ನು ಹೊಂದಿದೆ ನನ್ನ ದೇಶದ ಗೌರವ ನೆಮ್ಮದಿಗೆ ನಾನು ಶ್ರಮಿಸುತ್ತೇನೆ ಎನ್ನುವ ಪ್ರೀತಿ ಇರಲಿ ಎನ್ನುವ ಜನನಾಯಕನ ಸಂದೇಶಕ್ಕೆ ನಾವೆಲ್ಲರೂ ಕಟಿಬದ್ಧರಾಗೋಣ ಹಾಗಾಗಿ ಈಗ ಬಂದಿರುವ ಕೊರೋನಾ ನಮ್ಮ ಬದುಕಿನ ಸುಖ ನಿದ್ದೆಯನ್ನು ಕೆಡಿಸಿದೆಯಾದರೂ ಈ ಮೂಲಕ ನಾವೆಲ್ಲರೂ ಎಚ್ಚೆತ್ತುಕೊಂಡರೆ ಆರೋಗ್ಯ ಸಾಮಾಜಿಕ ಅಂತರ ಎಲ್ಲವೂ ಇನ್ನಷ್ಟು ನಮ್ಮ ದೇಹವನ್ನು ನಮ್ಮ ದೇಶವನ್ನು ಸದೃಢವಾಗಿಸಬಲ್ಲದು ಎಂಬುದನ್ನು ಅರಿತುಕೊಳ್ಳೋಣ ಕೊನೆಯದಾಗಿ ಎಸ್ ವಿ ಪರಮೇಶ್ವರ ಭಟ್ಟರ ಕವಿವಾಣಿಯಂತೆ ನಾನೊಬ್ಬನು ನಿದ್ದೆ ಯ ಮಾಡಿದರೆ ಅದು ನನ್ನೊಬ್ಬನ ಸುಖಕೆ ನಾನೊಬ್ಬನು ಎಚ್ಚೆತು ದುಡಿದರೆ ಅದು ಊರಿನ ಹಿತಕ್ಕೆ ಎಂಬಂತೆ ತಾನೂ ಮತ್ತು ತನ್ನ ವರನ್ನು ಜಾಗೃತಿಗೊಳಿಸೋಣ. ಕಟ್ಟಿ ಕೊಟ್ಟ ಬುತ್ತಿ,ಹೇಳಿ ಕೊಟ್ಟ ಮಾತು ಎಷ್ಟು ದಿನ ಬರಹುದು.?…ಹಾಗಾಗಿ ಸ್ವಚ್ಛತೆ ಕಡೆ ಸದಾ ಒಂದು ಹೆಜ್ಜೆ… ಮುಂದೆ..ಇಡೋಣ

✍️ *ಗಣೇಶ್ ಜಾಲ್ಸೂರು*

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.