ಮಾಜಿ ಭೂಗತ ದೊರೆ, ಜಯ ಕರ್ನಾಟಕದ ಸಂಸ್ಥಾಪಕ ಎನ್. ಮುತ್ತಪ್ಪ ರೈ ಇನ್ನಿಲ್ಲ

Advt_Headding_Middle
Advt_Headding_Middle

ಮಾಜಿ ಭೂಗತ ದೊರೆ, ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ, ಪುತ್ತೂರು ಹಾಗೂ ಸುಬ್ರಹ್ಮಣ್ಯ ದೇಗುಲಗಳಿಗೆ ಬ್ರಹ್ಮ ರಥವನ್ನು ದಾನವಾಗಿ ನೀಡಿದ ಕೊಡುಗೈ ದಾನಿ ಎನ್. ಮುತ್ತಪ್ಪ ರೈ ಇಂದು ನಿಧನರಾದರು. ಹಲವು ಸಮಯಗಳಿಂದ ಮಾರಕ ರೋಗ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಇವರು ಇಂದು ಮುಂಜಾನೆ ವಿಧಿವಶರಾದರು. ಮೂಲತಃ ಪುತ್ತೂರು ತಾಲೂಕಿನ ಕೆಯ್ಯೂರಿನ ನೆಟ್ಟಾಳ ಮುತ್ತಪ್ಪ ರೈ ದೇರ್ಲರವರು ಬೆಂಗಳೂರಿನ ಬಿಡದಿಯಲ್ಲಿ ವಾಸವಾಗಿದ್ದು, ರಿಯಾಲಿಟಿ ವೆಂಚರ್ ಉದ್ಯಮದ ಪಾಲುದಾರರಾಗಿದ್ದರು.
ಕಳೆದ ಆರು ತಿಂಗಳಿನಿಂದ ಕ್ಯಾನ್ಸರ್ ತೀವ್ರ ಪರಿಣಾಮಗಳನ್ನು ಬೀರತೊಡಗಿ ಅಸ್ವಸ್ಥರಾಗಿದ್ದ ಮುತ್ತಪ್ಪ ರೈಯವರು ಎರಡು ತಿಂಗಳ ಹಿಂದೆ ನಿಧನರಾದರೆಂದು ವದಂತಿ ಹಬ್ಬಿತ್ತು. ಆಗ ಸ್ವತ: ಮುತ್ತಪ್ಪ ರೈಯವರೇ ಪತ್ರಿಕಾಗೋಷ್ಟಿ ನಡೆಸಿ ತಾನು ತೀರಿಕೊಂಡಿಲ್ಲವೆಂದು ಸ್ಪಷ್ಟನೆ ನೀಡಿದ್ದರು. ಎರಡು ದಿನದ ಹಿಂದೆ ಮುತ್ತಪ್ಪ ರೈ ತೀರಿಕೊಂಡರೆಂದು ಪ್ರಚಾರವಾಗಿ ಸಾವಿರಾರು ಜನ ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪದ ಡಿ.ಪಿ. ಹಾಕಿಕೊಡಿದ್ದರು.

ಕಳೆದ ರಾತ್ರಿ 2 ಗಂಟೆಗೆ ಅವರು ನಿಧನರಾಗಿದ್ದಾರೆಂದು ಅಧಿಕೃತವಾಗಿ ಘೋಷಿಸಲಾಯಿತು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.