ವಿದ್ಯುತ್ ಸಮಸ್ಯೆಯನ್ನು ನೀಗಿಸಿ ಪ್ರತ್ಯೇಕ ಟ್ರಾನ್ಸ್‌ಫಾರ್ಮರ್ ಅಳವಡಿಸಿ ಕೊಡುವಂತೆ ನ. ಪಂ. ಸದಸ್ಯ ಕೆ. ಎಸ್. ಉಮ್ಮರ್ ಮನವಿ

Advt_Headding_Middle
Advt_Headding_Middle

 

ಸುಳ್ಯದ ,ಶ್ರೀರಾಮಪೇಟೆ ಬೋರುಗುಡ್ಡೆ, ಜಟ್ಟಿಪಳ್ಳ, ನಾವುರೂ ,ಮುಂತಾದ ಕಡೆಗಳಲ್ಲಿ ನಿರಂತರ ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆ ಉಂಟಾಗುತ್ತಿದ್ದು ಇದನ್ನು ಶೀಘ್ರದಲ್ಲಿ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿ ನಗರ ಪಂಚಾಯತ್ ಬೊರುಗುಡ್ಡೆ ವಾರ್ಡ್ ಸದಸ್ಯ ಕೆಎಸ್ ಉಮ್ಮರ್ ನೇತ್ರತ್ವದಲ್ಲಿ ಮೆಸ್ಕಾಂ ಅಧಿಕಾರಿಗಳಿಗೆ ಮೆಸ್ಕಾಂ ಕಛೆರಿಯಲ್ಲಿ ಮನವಿ ನೀಡಿರುತ್ತಾರೆ.


ಸುಳ್ಯ ನಗರದ ಹಲವು ಭಾಗಗಳಿಗೆ ದುಗಲಡ್ಕ ಫೀಲ್ಡರ್ ನಿಂದ ವಿದ್ಯುತ್ ಸರಬರಾಜು ಗೊಳ್ಳುತ್ತಿದ್ದು, ಜಟ್ಟಿಪಳ್ಳ ಬೋರುಗುಡ್ಡೆ ಶ್ರೀರಾಂ ಪೇಟೆ ಭಾಗಗಳಿಗೆ ಪ್ರತ್ಯೇಕ ಪ್ರತ್ಯೇಕ ಟ್ರಾನ್ಸ್‌ಫಾರ್ಮರ್ ಅಳವಡಿಸಿ ವಿದ್ಯುತ್ ಸಮಸ್ಯೆಯಿಂದ ಪರಿಹಾರ ಕಲ್ಪಿಸಿ ಕೊಡಬೇಕಾಗಿ ವಿನಂತಿಸಿಕೊಂಡಿದ್ದಾರೆ. ಹತ್ತು ದಿನಗಳಲ್ಲಿಈ ಸಮಸ್ಯೆಗೆ ಪರಿಹಾರ ನೀಡದಿದ್ದಲ್ಲಿ ವಾರ್ಡಿನ ಮತ್ತು ಸ್ಥಳೀಯ ಸಾರ್ವಜನಿಕರನ್ನು ಕಚೇರಿ ಬಳಿ ತಂದು ಅಹೋರಾತ್ರಿ ಧರಣಿ ನಡೆಸುವುದಾಗಿ ಈ ಸಂದರ್ಭದಲ್ಲಿ ತಿಳಿಸಿರುತ್ತಾರೆ ನೀಡಿರುತ್ತಾರೆ.
ಈ ಸಂದರ್ಭದಲ್ಲಿ ಹಾರಿಶ್, ಅಹಮದ್ ಶಿಲ್ಪ, ಆಶ್ರಫ್ ಝಂಝಂ, ಜಾಫರ್,ಬಾತಿಷಾ,ಜಾಫರ್ ಸಾಗರ್, ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.