Breaking News

ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಚಿತ ಆನ್‌ಲೈನ್ ಹಿಂದಿ ಸರ್ಟಿಫಿಕೇಟ್ ಕೋರ್ಸ್‌ಗೆ ಚಾಲನೆ

Advt_Headding_Middle
Advt_Headding_Middle

ಸುಳ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿಂದಿ ವಿಭಾಗದ ವತಿಯಿಂದ ಆರಂಭಿಸಿರುವ ಉಚಿತ ಆನ್ ಲೈನ್ ಹಿಂದಿ ಸರ್ಟಿಫಿಕೇಟ್ ಕೋರ್ಸ ಇಪ್ಪತ್ತೊಂದು ದಿನಗಳಲ್ಲಿ ಕನ್ನಡದ ಮೂಲಕ ಹಿಂದಿ ಕಲಿಯಿರಿ ಗೆ ಮೇ. 14 ರಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಅಚ್ಯುತ ಪೂಜಾರಿ ಕೆ ಇವರು ಚಾಲನೆ ನೀಡಿದರು.
ಕಾರ್ಯಕ್ರಮದ ಸಂಯೋಜಕರು ಹಾಗೂ ಹಿಂದಿ ವಿಭಾಗದ ಮುಖ್ಯಸ್ಥರಾದ ರಾಮಕೃಷ್ಣ ಕೆ ಎಸ್ ಇವರು ಕೋರ್ಸಿ ನ ವಿವರಗಳನ್ನು ನೋಂದಣಿ ಮಾಡಿಕೊಂಡಿರುವ ಎಲ್ಲಾ ಅಭ್ಯರ್ಥಿಗಳಿಗೂ ಇ ಮೇಲ್ ಸಂದೇಶ ಕಳುಹಿಸುವುದರ ಮೂಲಕ ನೀಡಿದರು. ಒಂದು ಸಾವಿರದ ಒಂದು ನೂರ ಹನ್ನೊಂದು ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿರುವುದು ದಾಖಲೆಯ ನೋಂದಣಿಯಾಗಿರುತ್ತದೆ. ಕೋರ್ಸ ಕರ್ನಾಟಕದ ಜನತೆಗೆ ಮುಕ್ತವಾಗಿದ್ದು, ಇದರಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿರುತ್ತಾರೆ ಎಂಬ ಮಾಹಿತಿ ನೀಡಿದರು.
ಪ್ರತಿ ದಿನ ಕೋರ್ಸಿ ಗೆ ಸಂಬಂಧಿಸಿದಂತೆ ಒಂದು ಪಾಠದ ವೀಡಿಯೋ ಹಾಗೂ ಅದಕ್ಕೆ ಸಂಬಂಧಿಸಿದಂತೆ ಒಂದು ಪರೀಕ್ಷೆಯ ಲಿಂಕ್ ಗಳನ್ನು ನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳ ಇ- ಮೇಲ್ ಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿದೆಯೆಂಬ ಮಾಹಿತಿಯನ್ನು ನೀಡಿದರು. ನೋಂದಣಿ ಮಾಡಿಕೊಂಡವರಲ್ಲಿ ಶೇ. ೬೫ ವಿದ್ಯಾರ್ಥಿಗಳು, ಶೇ. ೨೦ ರಷ್ಟು ಶಿಕ್ಷಕರು ಹಾಗೂ ಶೇ. ೧೫ ರಷ್ಟು ಸಾರ್ವಜನಿಕರಿರುವುದು ಕೋರ್ಸಿನ ಮಹತ್ವವನ್ನು ಹೆಚ್ಚಿಸಿದೆಯೆಂದು ತಿಳಿಸಿದರು.
೨೧ ದಿನಗಳ ಕಲಿಕೆ ಜೂನ್ ೦೩ ರಂದು ಅಂತ್ಯಗೊಳ್ಳಲಿದ್ದು, ಪ್ರತಿದಿನ ನಡೆಸಿದ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳಿಗೆ ಇ -ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದೆಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಅಚ್ಯುತ ಪೂಜಾರಿ ಕೆ ರವರು ತಿಳಿಸಿದರು. ಹಿಂದಿ ಕಲಿಕೆಯನ್ನು ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರಾರಂಭಿಸಿ ಸಮುದಾಯಕ್ಕೂ ವಿಸ್ತರಿಸುವ ಇಂತಹ ಕೋರ್ಸನ್ನು ಆರಂಭಿಸಿದ ಹಿಂದಿ ವಿಭಾಗ ಮುಖ್ಯಸ್ಥರನ್ನು ಕಾಲೇಜಿನ ಐ ಕ್ಯೂ ಎ ಸಿ ಸಂಚಾಲಕರಾಗಿರುವ ಡಾ. ಜಯಶ್ರೀ ಕೆ ಇವರು ಶ್ಲಾಘಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.