ಅಂತರ ಪಾಲಿಸಿಕೊಂಡು ಎರಡು ಪಾಳಿಯಲ್ಲಿ ಶಾಲೆ ಆರಂಭಿಸಲು ಶಿಕ್ಷಣ ಇಲಾಖೆ ತಯಾರಿ

Advt_Headding_Middle
Advt_Headding_Middle

 

ಕೊರೋನಾ ಸೋಂಕು ಸುದೀರ್ಘ ಕಾಲ ಉಳಿಯುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡೇ ಶಾಲೆಗಳನ್ನು ನಡೆಸುವ ಅನಿವಾರ್ಯತೆಗೆ ಸಿಲುಕಿರುವ ಶಿಕ್ಷಣ ಇಲಾಖೆ ಎರಡು ಪಾಳಿಗಳಲ್ಲಿ ತರಗತಿಗಳನ್ನು ನಡೆಸಲು ಮುಂದಾಗಿದೆ.

ಈ ಕುರಿತು ರಾಜ್ಯದ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಹೊರಡಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಪ್ರತಿದಿನ ಬೆಳಗ್ಗೆ 7.50ರಿಂದ ಮಧ್ಯಾಹ್ನ 12.20ರವರೆಗೆ ಮೊದಲನೇ ಪಾಳಿ ಮತ್ತು ಮಧ್ಯಾಹ್ನ 12.10ರಿಂದ ಸಂಜೆ 5ರವರೆಗೆ ಎರಡನೇ ಪಾಳಿ ತರಗತಿಗಳನ್ನು ನಡೆಸಬೇಕು. ಇದಕ್ಕೆ ಅನುಗುವಾಗಿ ಶಾಲೆಗಳು ವೇಳಾ ಪಟ್ಟಿಗಳನ್ನು ಬದಲಾವಣೆ ಮಾಡಿಕೊಳ್ಳಬೇಕು.ಶಿಕ್ಷಕರು ಕೂಡ ವೇಳಾಪಟ್ಟಿಯಂತೆ ಒಂದು ಪಾಳಿಯಲ್ಲಿ ಮಾತ್ರ ಕೆಲಸ ಮಾಡಬಹುದು ಎಂದು ಸೂಚಿಸಿದೆ.

ಅದರಲ್ಲೂ ಪ್ರಮುಖವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಕೊಠಡಿಯ ಕೊರತೆ ಇರುವ ಶಾಲೆಗಳು ಪಾಳಿ ಪದ್ದತಿ ಅಳವಡಿಸಿಕೊಳ್ಳಬಹುದು. ಪಿಯು ತರಗತಿಯ ಕೊಠಡಿಗಳು, ತಾಲೂಕು, ಹೋಬಳಿಗಳಲ್ಲಿ ಮಕ್ಕಳ ಕೊರತೆಯಿಂದ ಮುಚ್ಚಲ್ಪಟ್ಟ ಶಾಲಾ ಕಟ್ಟಡಗಳಲ್ಲಿ ಕೂಡ ತರಗತಿಗಳನ್ನು ನಡೆಸಬಹುದು. ಒಂದು ಬೆಂಚ್ ನಲ್ಲಿ ಕೇವಲ ಮೂರು ವಿದ್ಯಾರ್ಥಿಗಳು ಕುಳಿತುಕೊಳ್ಳಬೇಕು ಎಂದು ಇಲಾಖೆ ಸೂಚಿಸಿದೆ.
ಗ್ರಾಮೀಣ ಪ್ರದೇಶಗಳಿಗೆ ವಿದ್ಯಾರ್ಥಿಗಳಿಗೆ ಪ್ರಯಾಣ ಮತ್ತು ಉಪಹಾರದ ಸಮಸ್ಯೆ ಎದುರಾಗದಂತೆ ತಡೆಯಲು ಸ್ಥಳೀಯ ಪರಿಸ್ಥಿತಿಗನುಗುಣವಾಗಿ ವೇಳಾಪಟ್ಟಿ ಸಿದ್ಧಪಡಿಸಲು ಆಯಾ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯ್ತಿಗಳಿಗೆ ಅಧಿಕಾರ ನೀಡಲಾಗಿದೆ. ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮತ್ತು ಮಕ್ಕಳಿಗೆ ಕೊಠಡಿ, ಸಾರಿಗೆ ಸೌಲಭ್ಯ ಒದಗಿಸುವ ಹೊಣೆಗಾರಿಕೆ ಹೊರಬೇಕು. ವಿದ್ಯಾರ್ಥಿಗಳನ್ನು ವಾಹನದಲ್ಲಿ ಕರೆತರುವಾಗ ಕೂಡ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ನಿಗಾವಹಿಸುವುದು ಶಾಲಾ ಆಡಳಿತ ಮಂಡಳಿಯ ಜವಾಬ್ದಾರಿ ಎಂದು ಇಲಾಖೆ ಸೂಚಿಸಿದೆ.

ಮಾಸ್ಕ್ ಕಡ್ಡಾಯ:
ಪ್ರತಿನಿತ್ಯ ಮುಂಜಾನೆ ಶಾಲೆಗಳಲ್ಲಿ ಪ್ರಾರ್ಥನೆ ನಡೆಯುವ ವೇಳೆ ವಿದ್ಯಾರ್ಥಿಗಳು ಕಡ್ಡಯವಾಗಿ ಮಾಸ್ಕ್ ಧರಿಸಬೇಕು ಎಂಬುದನ್ನು ಮುಖ್ಯೋಪಾಧ್ಯಾಯರು ಖಾತರಿಪಡಿಸಿಕೊಳ್ಳಬೇಕು. ಊಟದ ಮುನ್ನ ಹಾಗೂ ನಂತರ ಮತ್ತು ಶೌಚಾಲಯ ಬಳಸಿದ ನಂತರ ಸಾಬೂನಿನಿಂದ ಕೈಗಳನ್ನು ತೊಳೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು. ಊಟದ ಸಮಯ ಮತ್ತು ಆಟದ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಸೂಚನೆ ನೀಡಬೇಕು ಎಂದು ಸುತ್ತೋಲೆ ಸ್ಪಷ್ಟಪಡಿಸಿದೆ. ವಾರದಲ್ಲಿ ಈ ಹಿಂದೆ ನಡೆಸುತ್ತಿದ್ದ ದೈಹಿಕಶಿಕ್ಷಣ, ಚಿತ್ರಕಲೆ/ಸಂಗೀತ/ವೃತ್ತಿ ಶಿಕ್ಷಣ, ಸಹ ಪಠ್ಯಕ್ರಮ ಚಟುವಟಿಕೆ, ಗ್ರಂಥಾಲಯ/ಗಣಕ ವಿಷಯದ ತರಗತಿಗಳನ್ನು ಕಡಿತಗೊಳಿಸಲಾಗುವುದು. ಇದರಿಂದ ವಾರದಲ್ಲಿ ನಡೆಯುತ್ತಿದ್ದ ಒಟ್ಟು 45 ತರಗತಿಗಳನ್ನು 36ಕ್ಕೆ ಕಡಿತಗೊಳಿಸಲಾಗುವುದು.

ಶಿಕ್ಷಕರ ಕೊರತೆಯಿದ್ದಲ್ಲಿ ಸ್ಥಳೀಯವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬಹುದು ಎಂದು ಇಲಾಖೆ ತಿಳಿಸಿದೆ.

ತರಗತಿಗಳ ವೇಳಾಪಟ್ಟಿ:
ಮೊದಲನೇ ಪಾಳಿ-
ಬೆಳಗ್ಗೆ 7.50 ರಿಂದ 8 (ಪ್ರಾರ್ಥನೆ ) , 8 ರಿಂದ 9.20 ರವರೆಗೆ ಎರಡು ತರಗತಿ, 9.20 ರಿಂದ 9.40 ರವರೆಗೆ ವಿರಾಮ, 9.40 ರಿಂದ 12.20 ರವರೆಗೆ ನಾಲ್ಕು ತರಗತಿಗಳು.
ಎರಡನೇ ಪಾಳಿ-
ಮಧ್ಯಾಹ್ನ 12.10ರಿಂದ 12.40ರವರೆಗೆ ಪ್ರಾರ್ಥನೆ. 12.30ರಿಂದ 1.50ರವರೆಗೆ ಎರಡು ತರಗತಿಗಳು, ಮಧ್ಯಾಹ್ನ 1.50ರಿಂದ 2.20ರವರೆಗೆ ಊಟದ ವಿರಾಮ, 2.20ರಿಂದ ಸಂಜೆ 5ರವರೆಗೆ ನಾಲ್ಕು ತರಗತಿಗಳು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.