Breaking News

ಪ್ರಾಥಮಿಕ ಮತ್ತು ಪ್ರೌಢಶಾಲೆ ತೆರೆಯುವುದು ಸರಿಯೇ ?

Advt_Headding_Middle
Advt_Headding_Middle

ಸುಳ್ಯದ ಉದ್ಯಮಿ ಶ್ರೀನಾಥ್ ಆಲೆಟ್ಟಿಯವರಿಂದ ಶಿಕ್ಷಣ ಸಚಿವರಿಗೊಂದು ಪತ್ರ

ಈ ಸಮಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ತೆರೆಯುವುದು ಸರಿಯೇ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಸುಳ್ಯದ ಸ್ಪೀಡ್ ಕಂಪ್ಯೂಟರ್ ಮಾಲಕ ಶ್ರೀನಾಥ್ ಆಲೆಟ್ಟಿಯವರು ಶಿಕ್ಷಣ ಸಚಿವರಿಗೆ ಪತ್ರವೊಂದನ್ನು ಬರೆದಿದ್ದಾರೆ.

ಪತ್ರದ ಪೂರ್ಣ ರೂಪ ಇಲ್ಲಿ ನೀಡಲಾಗಿದೆ.

ಮಾನ್ಯ ಶಿಕ್ಷಣ ಮಂತ್ರಿಗಳಿಗೊಂದು ನನ್ನದೊಂದು ಮನವಿ
ಪ್ರಾಥಮಿಕ ಹಾಗೂ ಪ್ರೌಡಶಾಲೆಗಳನ್ನು ತೆರೆಯುವುದು ಸರಿಯೇ?
ವಿಶ್ವದಲ್ಲೇ ಎಲ್ಲರನ್ನೂ ನಿಬ್ಬೆರಗಾಗಿಸಿದ ಕೊರೋನಾ ಎಂಬ ಮಹಾಮಾರಿ ಕಾಯಿಲೆಯಿಂದಾಗಿ ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಕಂಗಾಲಾಗಿದೆ. ಅಲ್ಲದೇ ಜನಸಾಮಾನ್ಯರಿಗೆ ತುಂಬಾ ತೊಂದರೆಗಳಾಗಿದ್ದು ನಮ್ಮನ್ನು ನಾವೇ ರಕ್ಷಿಸಿಕೊಳ್ಳಲಾಗದಂತಹ ಪರಿಸ್ಥಿತಿ ಎದುರಾಗಿದೆ. ಹೀಗಿರುವಲ್ಲಿ ನಮ್ಮ ಸರಕಾರ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಗೊಳಿಸಲು ಸಜ್ಜಾಗಿರುವುದು ತುಂಬಾ ಖೇದಕರದ ವಿಷಯವಾಗಿದೆ. ಅದರಲ್ಲೂ ಶಾಲೆ ಆರಂಭವಾಗುವ ಮುನ್ನ ಶಾಲೆಗಳ ಷರತ್ತುಗಳು ಕೆಲವು ಸುತ್ತೋಲೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವುದನ್ನು ನೋಡಿ ನಮಗೇ ದಂಗಾಗುತ್ತದೆ. ಜನ ಸಾಮಾನ್ಯರೇ ಸರಕಾರದ ಕೆಲವು ನಿಭಂದನೆಗಳನ್ನು ಪಾಲಿಸುತ್ತಿಲ್ಲ. ಇನ್ನು ಏನೂ ಅರಿಯದ ಮುಗ್ಧ ಮಕ್ಕಳು ಸರಕಾರದ ನಿಯಮವನ್ನು ಪಾಲಿಸುವರೇ? ಅಥವಾ ಮಾಸ್ಕ್ ಧರಿಸಿ ಈ ಪುಟ್ಟ ಮಕ್ಕಳು ತರಗತಿಯಲ್ಲಿ ಕುಳಿತುಕೊಳ್ಳುವರೇ? ಒಂದು ವೇಳೆ ಆ ಪುಟ್ಟ ಮಕ್ಕಳು ಮಾಸ್ಕ್ ಧರಿಸಿ ತರಗತಿಗೆ ಬಂದರೆ ಅವರ ಮಾಸ್ಕ್ ಅವರ ಮುಖದಲ್ಲಿ ಇರಬಹುದೇ? ಇದಲ್ಲದೇ ವಸತಿ ಶಾಲೆಗಳಲ್ಲಿ ಮಕ್ಕಳ ಪರಿಸ್ಥಿತಿ ಏನಾಗಬಹುದು? ಹಾಗೂ ಇದೀಗ ಕೆಲವು ಮಕ್ಕಳು ಸೀಲ್ಡೌನ್ ಒಳಗಾಗಿದ್ದ ಪ್ರದೇಶದಲ್ಲಿ ಕೂಡ ಬಂಧಿಯಾಗಿದ್ದು ಅಂತಹಾ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದಿಲ್ಲವೇ? ಇಂತಹ ಪರಿಸ್ಥಿತಿಯಲ್ಲಿ ನಿರ್ಭೀತಿಯಿಂದ ಪೋಷಕರು ತನ್ನ ಮಕ್ಕಳನ್ನು ಶಾಲೆಗಳಿಗೆ ಕಲುಹಿಸಲು ಸಾಧ್ಯವಾಗುವುದೇ?
ಇದನ್ನೆಲ್ಲ ಗಮನಹರಿಸಿ ಮಕ್ಕಳ ಭವಿಷ್ಯದ ಹಿತದೃಷ್ಠಿಯಿಂದ ಈ ಕಾಯಿಲೆಗೆ ಲಸಿಕೆಯ ವ್ಯವಸ್ಥೆಯಾಗದೇ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳನ್ನು ತೆರೆದಲ್ಲಿ ದೊಡ್ಡ ಅನಾಹುತಕ್ಕೆ ನಾಂದಿಯಾಗಬಹುದು. ಆದ್ದರಿಂದ ಸರಕಾರವು ಒಂದು ವರ್ಷ ಶೈಕ್ಷಣಿಕ ಅವದಿಯು ಮುಂದೆ ಹೋದರೂ ಚಿಂತೆ ಮಾಡದೇ ಶೈಕ್ಷಣಿಕ ವರ್ಷವನ್ನು ಮುಂದೂಡುವುದು ಒಳಿತು ಎಂಬುದು ನನ್ನ ಅನಿಸಿಕೆ ಎಂದು ಮನವಿ ಪತ್ರವನ್ನು ಬರೆದು ಟ್ವಿಟರ್ ಮೂಲಕ ರವಾನಿಸಿದ್ದಾರೆ ಶ್ರೀನಾಥ್ ಆಲೆಟ್ಟಿಯವರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.