ಬಳ್ಪ ತ್ರಿಶೂಲಿನೀ ದೇವಸ್ಥಾನದ ವತಿಯಿಂದ ಕೊರೋನಾ ವಾರಿಯರ್ಸ್ ಗೆ ಅಭಿನಂದನಾ ಪತ್ರ

Advt_Headding_Middle
Advt_Headding_Middle

 

ಜಗತ್ತಿನಾದ್ಯಂತ ಆವರಿಸುತ್ತಿರುವ ಕೊರೋನಾ ಮಹಾಮಾರಿಯನ್ನು ತಡೆಗಟ್ಟುವಲ್ಲಿ ಶ್ರಮಿಸುತ್ತಿರುವ ಬಳ್ಪ ಗ್ರಾಮಕ್ಕೊಳಪಟ್ಟ ಕೊರೋನಾ ವಾರಿಯರ್ಸ್ ಗೆ ತ್ರಿಶೂಲಿನಿ ದೇವಸ್ಥಾನದ ವತಿಯಿಂದ ಶ್ರೀ ತ್ರಿಶೂಲಿನೀ ದೇವಿಯ ಪ್ರಸಾದ ಮತ್ತು ಅಭಿನಂದನಾ ಪತ್ರ ವಿತರಿಸಲಾಯಿತು.

ಕೊರೋನಾ ತಡೆಗಟ್ಟುವಲ್ಲಿ ಶ್ರಮಿಸುತ್ತಿರುವ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ಮಾಧ್ಯಮ ವರದಿಗಾರರನ್ನು ಅವರ ಮನೆಗೆ ತೆರಳಿ ಪ್ರಸಾದ ನೀಡಿ ಗೌರವಿಸಲಾಯಿತು. ಒಟ್ಟು 80 ಮಂದಿಯನ್ನು ಗುರುತಿಸಿ ಗೌರವಿಸಲಾಯಿತು.

ಇದರ ಅಂಗವಾಗಿ ಇಂದು ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರ, ಸುದ್ದಿ ಕೊರೊನಾ ಸಹಾಯವಾಣಿ ತಂಡದ ಬಳ್ಪ, ಯೇನೆಕಲ್ಲು, ಕಳಂಜ, ಬಾಳಿಲ, ಮುಪ್ಪೇರ್ಯ ಭಾಗದ ಪ್ರತಿನಿಧಿ ಈಶ್ವರ ವಾರಣಾಶಿಯವರ ಮನೆಗೆ ತೆರಳಿ ಶ್ರೀ ದೇವಿಯ ಪ್ರಸಾದ ಮತ್ತು ಅಭಿನಂದನಾ ಪತ್ರ ನೀಡಿದರು. ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಎಂ.ವಿ. ಶ್ರೀವತ್ಸ, ಉತ್ಸವ ಸಮಿತಿ ಗೌರವಾಧ್ಯಕ್ಷ ಭಾಸ್ಕರ ಪಂಡಿ ಮತ್ತು ಅಧ್ಯಕ್ಷರಾದ ಸದಾನಂದ ರೈ ಅರ್ಗುಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.