ಕೋವಿಡ್ ಆಸ್ಪತ್ರೆಗಳಲ್ಲಿದ್ದಾರೆ ಸುಳ್ಯದ ಇನ್ನಷ್ಟು ದಾದಿಯರು

Advt_Headding_Middle
Advt_Headding_Middle

SUDDI SPECIEL STORY

 

 ಬಾಳುಗೋಡಿನ ಈ ದಂಪತಿಯೂ ಕೊರೋನಾ ವಾರಿಯರ್ಸ್!

ಮಂಗಳೂರಿನ ಕೋವಿಡ್ ಆಸ್ಪತ್ರೆಯಲ್ಲಿ ಕೊರೋನಾ ವಾರಿಯರ್ಸ್ ಆಗಿ ರಿಸ್ಕ್ ನೊಂದಿಗೆ ಸೇವೆ ಸಲ್ಲಿಸುತ್ತಿರುವ ಸುಳ್ಯದ ಹಲವು ದಾದಿಯರ ಕುರಿತು ಈಗಾಗಲೇ ಓದಿದ್ದೀರಿ. ಈ ಸಾಲಿನಲ್ಲಿ ಸುಳ್ಯದ ಇನ್ನಷ್ಟು ಮಂದಿ ಇರುವ ಮಾಹಿತಿ ಲಭಿಸಿದೆ.

ಲಾವಣ್ಯ
ಸುಬ್ರಹ್ಮಣ್ಯ ಸಮೀಪದ ಸರಪಾಡಿಯವರಾದ ಲಾವಣ್ಯ ಅವರು ಮಂಗಳೂರು ಕೋವಿಡ್ ಆಸ್ಪತ್ರೆಯ ಲ್ಲಿ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸರಪಾಡಿ ನಾಗಪ್ಪ ಗೌಡ ಹಾಗೂ ದಿ. ಹೇಮಾವತಿ ಅವರ ಪುತ್ರಿಯಾದ ಲಾವಣ್ಯ ಸುಬ್ರಹ್ಮಣ್ಯ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಮಂಗಳೂರಿನ ಕೊಲಾಸೋ ಆಸ್ಪತ್ರೆಯಲ್ಲಿ ನರ್ಸಿಂಗ್ ಪೂರೈಸಿದರು. ಬಳಿಕ 2 ವರ್ಷಗಳಿಂದ ಕೆಎಂಸಿಯ ಗುತ್ತಿಗೆ ಆಧಾರದಲ್ಲಿ ವೆನ್ಲಾಕ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

“ಮೊದಮೊದಲು ಭಯವಾಗುತ್ತಿತ್ತು. ಆದರೆ ಪಿಪಿಇ ಕಿಟ್ ಬಂದ ಬಳಿಕ ಅಡ್ಜೆಸ್ಟ್ ಆಗಿದ್ದೇವೆ. ನಮ್ಮ ಡ್ಯೂಟಿ ನಾವು ಮಾಡಲೇಬೇಕಾಗಿದೆಯಲ್ಲವೇ” ಎನ್ನುತ್ತಾರೆ ಲಾವಣ್ಯ.
ಜನವರಿಯಲ್ಲಷ್ಟೆ ಇವರ ವಿವಾಹವಾಗಿದ್ದು, ಪತಿ ಉಪ್ಪಿನಂಗಡಿಯ ಕುಶಾಲ್, ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದಾರೆ.

ದಿವ್ಯ

ಕೊಯನಾಡಿನ ದಿ. ನಾರಾಯಣ ಹಾಗೂ ದಮಯಂತಿ ದಂಪತಿಯ ಪುತ್ರಿ ದಿವ್ಯಾ ಅವರು ಮಂಗಳೂರು ಕೋವಿಡ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಪಾಜೆ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಬಳಿಕ ಮಂಗಳೂರಿನ ಮಂಗಳ ಕಿಡ್ನಿ ಫೌಂಡೇಶನ್‌ನಲ್ಲಿ ನರ್ಸಿಂಗ್ ಮಾಡಿದ ದಿವ್ಯಾ ಸ್ವಲ್ಪ ಕಾಲ ಲೇಡಿಗೋಷನ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಕೆಎಂಸಿಯಿಂದ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡು ವೆನ್ಲಾಕ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

“ಆರಂಭದಲ್ಲಿ ಭಯ ಎನಿಸಿದ್ದರೂ ಈಗ ಕೆಲಸಕ್ಕೆ ಹೊಂದಿಕೊಂಡಿದ್ದೇವೆ. ಪಿಪಿಇ ಕಿಟ್ ಧರಿಸಿ, ಕೆಲಸಕ್ಕೆ ಹೊಂದಿಕೊಂಡಿದ್ದೇವೆ” ಎನ್ನುತ್ತಾರೆ ದಿವ್ಯಾ ಕೊಯನಾಡು.

ಆಶಾ

ಮಡಿಕೇರಿಯ  ಮಣಿ ಕೆ.ಸಿ. ಹಾಗೂ ಲೀಲಾ ಕೆ.ಎಂ. ದಂಪತಿಯ ಪುತ್ರಿ ಆಶಾ ಮಂಗಳೂರಿನ ಮಂಗಳಾ ಕಿಡ್ನಿ ಫೌಂಡೇಶನ್‌ನಲ್ಲಿ ನರ್ಸಿಂಗ್ ಮಾಡಿದ್ದು, ಎರಡೂವರೆ ವರ್ಷಗಳಿಂದ ಕೆಎಂಸಿ ಮೂಲಕ ನೇಮಕಗೊಂಡು ವೆನ್ಲಾಕ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿದ್ದಾರೆ.

“ಕೆಲಸ ನಿರ್ವಹಿಸಲು ಖುಷಿ ಆಗುತ್ತದೆ. ನಾನು ಆರಂಭದಲ್ಲಿಯೇ ಪಿಪಿಇ ಕಿಟ್ ಧರಿಸಿ ಕೆಲಸ ನಿರ್ವಹಿಸಲು ಪ್ರಿಪೇರ್ ಆಗಿದ್ದೆ ” ಎಂದು ಆಶಾ ಹೇಳುತ್ತಾರೆ.

ಶ್ರುತಿ

ಸುಳ್ಯದ ಕೊಡಿಯಾಲಬೈಲಿನ ದಿ. ಬಾಲಕೃಷ್ಣ ಮತ್ತು ಪದ್ಮಾವತಿ ದಂಪತಿಯ ಪುತ್ರಿಯಾಗಿರುವ ಶ್ರೀಮತಿ ಶ್ರುತಿ ಸವಣೂರಿನ ಬಂಬಿಲದ ಅಶೋಕ್ ಅವರ ಪತ್ನಿ. ಸುಳ್ಯ ಜೂನಿಯರ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣದ ಬಳಿಕ ಸವಣೂರು ವಿದ್ಯಾರಶ್ಮಿ ನರ್ಸಿಂಗ್ ಕಾಲೇಜಿನಲ್ಲಿ ನರ್ಸಿಂಗ್ ಶಿಕ್ಷಣದ ಬಳಿಕ ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ಒಂದೂವರೆ ವರ್ಷ ಸೇವೆ ಸಲ್ಲಿಸಿದರು. ಎ.ಜೆ. ಆಸ್ಪತ್ರೆಯಲ್ಲಿ ಎರಡೂವರೆ ವರ್ಷ ಕೆಲಸ ಮಾಡಿದರು. ನಂತರ ಕೆಎಂಸಿ ಮೂಲಕ ವೆನ್ಲಾಕ್‌ಗೆ ನೇಮಕಗೊಂಡು ಎರಡು ವರ್ಷದಿಂದ ಡ್ಯೂಟಿ ಮಾಡುತ್ತಿದ್ದಾರೆ.

“ಆರಂಭದಲ್ಲಿ ಕೆಲಸ ಮಾಡಲು ಭಯ ಇತ್ತು. ಯಾಕೆಂದರೆ ಇದು ನಾರ್ಮಲ್ ರೀತಿಯ ಕಾಯಿಲೆಯಲ್ಲ. ಈಗ ಭಯವೇನೂ ಇಲ್ಲ” ಎಂದು ಅಭಿಪ್ರಾಯ ಪಡುತ್ತಾರೆ ಶ್ರುತಿ.

ದಂಪತಿಯೇ ಕೊರೊನಾ ವಾರಿಯರ್ಸ್ !

ಬಾಳುಗೋಡಿನ ಲೋಕೇಶ್ ಕಿರಿಭಾಗ ಹಾಗೂ ಅವರ ಪತ್ನಿ ರೀನಾ ಎ.ಎಸ್. ಕೂಡಾ ಮಂಗಳೂರು ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾ ವಾರಿಯರ್ಸ್ ಆಗಿದ್ದಾರೆ.


ಬಾಳುಗೋಡು ಗ್ರಾಮದ ಕಿರಿಭಾಗ ದೇವಪ್ಪ ಗೌಡ ಪುತ್ರರಾಗಿರುವ ಲೋಕೇಶರು ಅರಂತೋಡು ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಮಾಡಿ ಬಳಿಕ ಕೆವಿಜಿ ನರ್ಸಿಂಗ್ ಕಾಲೇಜಿನಲ್ಲಿ ನರ್ಸಿಂಗ್ ಶಿಕ್ಷಣ ಪಡೆದರು. ಬಳಿಕ ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ಸೇವೆ ಆರಂಭಿಸಿದರು. ನಂತರ ಮಹಾರಾಷ್ಟ್ರದ ಕಾನಿಷ್ಕ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ದೋಹಾ ಕತ್ತರ್‌ನಲ್ಲಿ ಸೇವೆ ಸಲ್ಲಿಸಿದ್ದು, ಪ್ರಸ್ತುತ 9 ತಿಂಗಳಿಂದ ಮಂಗಳೂರಿನ ಕೋವಿಡ್ ಆಸ್ಪತ್ರೆಯಲ್ಲಿದ್ದಾರೆ.

“ನಾನು 9 ತಿಂಗಳಿನಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಭಯವೇನೂ ಇಲ್ಲ ಎನ್ನುತ್ತಾರೆ ಲೋಕೇಶ್.

ಇವರ ಪತ್ನಿ ರೀನಾ ಎ.ಎಸ್.ಭಾಗಮಂಡಲದ ಅಂಬ್ರಾಟಿಯ ದಿ.ಶಿವಣ್ಣ ಗೌಡ ಮೀನಾಕ್ಷಿ ದಂಪತಿಯ ಪುತ್ರಿ.


ಭಾಗಮಂಡಲ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣದ ಬಳಿಕ ಸುಳ್ಯದ ಕೆವಿಜಿ ನರ್ಸಿಂಗ್ ಕಾಲೇಜಿನಲ್ಲಿ ನರ್ಸಿಂಗ್ ಶಿಕ್ಷಣ ಪಡೆದರು. ಬಳಿಕ ಮಂಗಳೂರಿನ ದೇರಳಕಟ್ಟೆ, ಕೆಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸಿ ಬಳಿಕ ವೆನ್ಲಾಕ್ ಸೇರಿದರು.

“ಕೋವಿಡ್ ಆಸ್ಪತ್ರೆಯಲ್ಲಿ ಕೆಲಸ ಮಾಡಲು ಯಾವುದೇ ಭಯವಿಲ್ಲ. ಆರಂಭದಲ್ಲಿ ಜನ ಕೇಳ್ತಾ ಇದ್ರು. ಈಗ ಅಡ್ಜೆಸ್ಟ್ ಆಗಿದ್ದೇವೆ” ಎನ್ನುತ್ತಾರೆ ರೀನಾ.

✍️ ದುರ್ಗಾಕುಮಾರ್ ನಾಯರ್ ಕೆರೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.