Breaking News

ಬೆಳ್ಳಾರೆಯಲ್ಲಿ ನಾಳೆಯಿಂದ ಎಂದಿನಂತೆ ವ್ಯಾಪಾರ,ವಹಿವಾಟು

Advt_Headding_Middle
Advt_Headding_Middle

 

ಬೆಳ್ಳಾರೆ ಪೇಟೆಯಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ಕಟ್ಟುನಿಟ್ಟಿನ ಕ್ರಮಗಳಿದ್ದು ಅಂಗಡಿಗಳನ್ನು ಬೆಳಿಗ್ಗೆ ಗಂಟೆ 6.00 ರಿಂದ ಮಧ್ಯಾಹ್ನ ,2.00 ಗಂಟೆಯವರೆಗೆ ಮಾತ್ರ ತೆರೆಯಲು ಅವಕಾಶ ನೀಡಲಾಗಿತ್ತು. ನಾಳೆ ಮೇ 18 ರಿಂದ ಜಿಲ್ಲಾಧಿಕಾರಿಯವರ ಆದೇಶದಂತೆ ಬೆಳಿಗ್ಗೆಯಿಂದ ಸಂಜೆ ಗಂಟೆ 7.00 ರವರೆಗೆ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.

ಎಲ್ಲಾ ವ್ಯಾಪಾರ ಗಳನ್ನು ಎಂದಿನಂತೆ ಕಾರ್ಯಚರಿಸಲು ಅವಕಾಶ ಮಾಡಿಕೊಡಲಾಗಿದ್ದು , ಅದರಂತೆ ಹೋಟೆಲ್ ಗಳಿಗೆ ಕೇವಲ ಪಾರ್ಸೆಲ್ ಕೊಡಲು ಮಾತ್ರ ಅವಕಾಶವಿರುತ್ತದೆ.

(ಮುಂದಿನ ಆದೇಶದವರೆಗೂ ಈ ನಿಯಮ ಚಾಲ್ತಿಯಲ್ಲಿರುವುದು)

ವಿ.ಸೂ : ವ್ಯಾಪಾರ ನಡೆಸುವವರು ಪಂಚಾಯತ್ ಲೈಸನ್ಸ್ ಹೊಂದಿರತಕ್ಕದ್ದು.
ಎಂದು ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಯವರು ತಿಳಿಸಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ಪಂಚಾಯತ್ ನೊಂದಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.