ನಾರ್ಣಕಜೆಯಲ್ಲಿ ರಸ್ತೆಗೆ ಮರ : ಸಂಚಾರದಲ್ಲಿ ವ್ಯತ್ಯಯ

Advt_Headding_Middle
Advt_Headding_Middle

ಇಂದು ಸುರಿದ ಗಾಳಿ ಮಳೆಗೆ ಬೆಳಿಗ್ಗೆ 6 ಗಂಟೆ ಸುಮಾರಿಗೆ ನಾರ್ಣಕಜೆ ಬಳಿ ರಸ್ತೆ ಬದಿ ಇದ್ದ ಮರವೊಂದು ರಸ್ತೆಗೆ ಅಡ್ಡವಾಗಿ ಮಗುಚಿ ಬಿದ್ದ ಘಟನೆ ನಡೆದಿದೆ.


ಮರ ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ಕಂಬ ಹಾಗೂ ತಂತಿಗೂ ಹಾನಿ ಉಂಟಾಗಿದ್ದು, ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.ಮರ ರಸ್ತೆಗೆ ಅಡ್ಡವಾಗಿ ಬಿದ್ದದ್ದರಿಂದ ಸುಮಾರು ೨ ಗಂಟೆ ಹೊತ್ತು ಈ ಮಾರ್ಗದಲ್ಲಿ ಸಂಚಾರಕ್ಕೆ ಅಡ್ಡಿ ಉಂಟಾಯಿತು. ವಾಹನಗಳು ಜಬಳೆ, ಪೈಲಾರು ಮಾರ್ಗವಾಗಿ ಸಂಚರಿಸಿತು. ಗ್ರಾಮ ಪಂಚಾಯತ್ ಸದಸ್ಯ ಜಯಪ್ರಕಾಶ್ ಸುಳ್ಳಿ ಮೊದಲಾದವರ ನೇತೃತ್ವದಲ್ಲಿ ಮರವನ್ನು ತುಂಡರಿಸಿ ತೆರವು ಕಾರ್ಯ ನಡೆದು ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.