Breaking News

ಸುಳ್ಯದಿಂದಲೂ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ಆರಂಭ

Advt_Headding_Middle
Advt_Headding_Middle

 

ಥರ್ಮಲ್ ಸ್ಕ್ರೀನಿಂಗ್ ಬಳಿಕವೇ ಪ್ರಯಾಣಿಕರಿಗೆ ಪ್ಲಾಟ್‌ಫಾರ್ಮ್ ಎಂಟ್ರಿ

ರಾಜ್ಯದಲ್ಲಿ ಮೇ 18ರಿಂದ 4ನೇ ಹಂತದ ಲಾಕ್‌ಡೌನ್ ಜಾರಿಯಲ್ಲಿದ್ದರೂ ಜನರ ಓಡಾಟಕ್ಕಾಗಿ ಕೆ.ಎಸ್.ಆರ್.ಟಿ.ಸಿ, ಬಿ.ಎಮ್.ಟಿ.ಸಿ ಬಸ್‌ಗಳ ಓಡಾಟಕ್ಕೆ ಅನುಮತಿ ನೀಡಲಾಗಿದ್ದ ಹಿನ್ನೆಲೆಯಲ್ಲಿ ಮೇ 19ರಂದು ಸುಳ್ಯ ಕೆ.ಎಸ್.ಆರ್.ಟಿ.ಸಿ ವಿಭಾಗೀಯ ಘಟಕದಿಂದಲೂ ಬಸ್‌ಗಳ ಬೇಡಿಕೆಗಳಿಗೆ ಅನುಗುಣವಾಗಿ ಪುತ್ತೂರು, ಬೆಳ್ಳಾರೆ,ಮಡಿಕೇರಿ ಕಡೆಗಳಿಗೆ ಆರಂಭದ ಬಸ್‌ಗಳು ಹೊರಟಿದ್ದು, ಮೊದಲ ಪ್ರಯಾಣ ಪುತ್ತೂರಿಗೆ ಬಸ್ ತೆರಳಿದೆ.

ಒಂದು ಬಸ್‌ನಲ್ಲಿ ಕೇವಲ 30 ಜನರಿಗೆ ಪ್ರಯಾಣ ಮಾಡುವ ಅವಕಾಶ ನೀಡಲಾಗಿದೆ. ಬಸ್‌ನಲ್ಲಿ ಪ್ರಯಾಣಿಸುವವರು ಮಾಸ್ಕ್ ಧರಿಸಬೇಕು ಎಂಬ ನಿಬಂಧನೆಗೊಳಪಟ್ಟು ಬಸ್‌ಗಳ ಓಡಾಟ ಆರಂಭಗೊಂಡಿದೆ.

 

ಸುಳ್ಯ ಕೆ.ಎಸ್.ಆರ್.ಟಿ.ಸಿ ಬಸ್‌ನಿಲ್ದಾಣದಲ್ಲಿ ಪ್ರಯಾಣಿಕರು ಪ್ಲಾಟ್ ಫಾರ್ಮ್ ಒಳಗಡೆ ಹೋಗುವ ಮುಂದೆ ಅವರನ್ನು ಹೊರಗೆ ಥರ್ಮಲ್‌ ಸ್ಕ್ರೀನಿಂಗ್ ಮಾಡಿ ಅವರ ಹೆಸರು, ವಿಳಾಸ, ಮೊಬೈಲ್ ನಂಬರ್ ಪಡೆದು ಅವರು ತಲುಪಬೇಕಾದ ಸ್ಥಳ ಮತ್ತು ಟಿಕೇಟ್ ಮಾಡಿಸಿಯೇ ಪ್ಲಾಟ್ ಫಾರ್ಮ್‌ಗೆ ಎಂಟ್ರಿ ಕೊಡಲಾಗುತ್ತಿದೆ. ಪ್ಲಾಟ್ ಫಾರ್ಮ್ ಒಳಗಡೆ ಕೂಡಾ ಸಾಮಾಜಿಕ ಅಂತರ ಕಾಯ್ದು ಕೊಂಡು ಪ್ರಯಾಣಿಕರು ಕುಳಿತು ಕೊಳ್ಳಬೇಕೆಂದು ಆಗಾಗ ಸಂದೇಶ ನೀಡಲಾಗುತ್ತಿದೆ.

ಪ್ಲಾಟ್‌ಫಾರ್ಮ್ ಸುತ್ತ ಬಂದೋಬಸ್ತ್ ಮಾಡಿದ್ದು, ಅನ್ಯ ಯಾರೂ ಒಳಗಡೆ ಪ್ರವೇಶವಿಲ್ಲ. ಸೂಚಿಸಿದ ಸ್ಥಳದಿಂದಲೇ ಪ್ರಯಾಣಿಕರು ಪ್ಲಾಟ್‌ಫಾರ್ಮ್ ಒಳಗಡೆ ಹೋಗಬೇಕು. ಈ ಎಲ್ಲಾ ವ್ಯವಸ್ಥೆಗಳ ನಡುವೆ ಬೆರಳೆಣಿಕೆಯ ಪ್ರಯಾಣಿಕರು ಮಾತ್ರ ಬಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಯಾಣಿಕರಿಗೆ ಎಲ್ಲೂ ಬೇಕಾದರೂ ಹತ್ತಬಹುದು, ಇಳಿಯಬಹುದು: ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ಸಂಚಾರ ಆರಂಭಿಸಿದ್ದರಿಂದ ಪ್ರಯಾಣಿಕರು ಎಲ್ಲಿ ಬೇಕಾದರೂ ಪಾಯಿಂಟ್‌ಗೆ ಸಂಬಂಧಿಸಿ ಹತ್ತಬಹುದು. ಇಳಿಯಬಹುದು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.