Breaking News

ಪ್ರಕೃತಿ ದುರಂತ ಸಂತ್ರಸ್ತೆಯ ನೆರವಿಗೆ ಬಂತು ಭಗವಾನ್ ಸಂಘ

Advt_Headding_Middle
Advt_Headding_Middle

POSSITIVE STORY

ಅಶಕ್ತ ಕುಟುಂಬದ ನೆರವಿಗೆ ಬಂತು ಊರುಬೈಲಿನ ಸಂಘಟನೆ

ಕೊಚ್ಚಿ ಹೋದ ಬದುಕಿಗೆ ಆಸರೆಯಾದ ಮಾದರಿ ಕಾರ್ಯ

ಕಳೆದ ಎರಡು ವರ್ಷಗಳ ಹಿಂದೆ ಕೊಡಗಿನಲ್ಲಾದ ಭೀಕರ ಪ್ರಕೃತಿ ವಿಕೋಪದ ಸಂದರ್ಭ ಎಲ್ಲವೂ ನಷ್ಟವಾಗಿದ್ದ ಕೊಯನಾಡಿನ ಬಡ ಕುಟುಂಬವೊಂದಕ್ಕೆ ಊರುಬೈಲು ಭಗವಾನ್ ಸಂಘ ಸೂರು ನಿರ್ಮಿಸಿ ನೀಡಿ ಆದರ್ಶತೆ ಮೆರೆದಿದೆ.

ಕೊಯನಾಡು ಪಯಸ್ವಿನಿ ನದಿಯ ದಂಡೆಯಲ್ಲಿ ವಾಸವಿದ್ದ ಒಂದು ಬಡ ಅಶಕ್ತ ಕುಟುಂಬ ನಲುಗಿಹೋಗಿತ್ತು. ವಿಕಲ ಚೇತನ ವೃದ್ದೆ ಮಹಿಳೆ ಆಯೇಷಾ ತಮ್ಮ ಸಹೋದರಿ ವೃದ್ದೆ ಸೈನಾಬಿ ರವರೊಂದಿಗೆ ವಾಸವಾಗಿದ್ದು , ತಮ್ಮ ಚೂರು ಪಾರು ಭೂಮಿ , ಬಾವಿ , ಮನೆ ಸೇರಿದಂತೆ ಎಲ್ಲವೂ ಕೆಸರಿನಲ್ಲಿ ಮುಚ್ಚಿಹೋಗಿತ್ತು. ಆಗ ಅವರ ನೆರವಿಗೆ ಧಾವಿಸಿದ್ದ ಊರುಬೈಲು ಶ್ರೀ ಭಗವಾನ್ ಸಂಘದ ಸದಸ್ಯರು ಬಾವಿ , ಭೂಮಿ, ಮನೆಯನ್ನು ಸುಸ್ಥಿತಿಗೆ ತಂದು ಅವರಿಗೆ ಬದುಕಲು ದಾರಿ ಕಲ್ಪಿಸಿಕೊಟ್ಟಿದ್ದರು.

 

ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಬಳಿಕ 13.10.2018 ರಂದು ಪಬ್ಲಿಕ್ ಟಿವಿ ವಾಹಿನಿಯಲ್ಲಿ ಹೆಚ್.ಆರ್.ರಂಗನಾಥ್ ನಡೆಸಿಕೊಡುತ್ತಿದ್ದ ಬೆಳಕು ಕಾರ್ಯಕ್ರಮದಲ್ಲಿ ಪ್ರಸಾರವಾಗಿದ್ದು, ಆ ಸಂದರ್ಭದಲ್ಲಿ ತಮ್ಮ ವಾಹಿನಿ ಸಂಗ್ರಹಿಸಿದ ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದರು. ಆ ಬಳಿಕ ರಂಗನಾಥ್ ಅವರನ್ನು ಸಂಪರ್ಕಿಸಲು ಶ್ರೀ ಭಗವಾನ್ ಸಂಘ ಮಾಡಿದ ಪ್ರಯತ್ನಗಳು ಸಫಲವಾಗಿರಲಿಲ್ಲ. ಅಷ್ಟರಲ್ಲಿ ಸಂತ್ರಸ್ತೆಯ ಮನೆಯ ಛಾವಣಿ ಭಾಗಶಃ ಕುಸಿದುಹೋಗಿತ್ತು.

ಇದೀಗ ಮತ್ತೊಮ್ಮೆ ಈ ಅಶಕ್ತರ ನೆರವಿಗೆ ಬಂದ ಶ್ರೀ ಭಗವಾನ್ ಸಂಘ ದಾನಿಗಳ ನೆರವು ಪಡೆದು ಮತ್ತು ತಮ್ಮ ಸ್ವಂತ ಖರ್ಚಿನಲ್ಲಿ ಸಂತ್ರಸ್ತರ ಮನೆಯ ಛಾವಣಿಯನ್ನು ಪುನರ್ನಿರ್ಮಾಣ ಮಾಡಿ ಮನೆ, ಪರಿಸರವನ್ನು ಸ್ವಚ್ಛಗೊಳಿಸಿ ಸೂಕ್ತ ವಾಸ್ತವ್ಯ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಕಾರ್ಯಾಚರಣೆಯ ನೇತೃತ್ವವನ್ನು ಸಂಘದ ಸ್ಥಾಪಕರಾದ ಅನಂತ್ ಯನ್.ಸಿ ಮತ್ತು ಅಧ್ಯಕ್ಷ ರವಿರಾಜ್ ಹೊಸೂರು ವಹಿಸಿದ್ದರು.

ನೊಂದವರಿಗೆ ಸಹಾಯ ಮಾಡುವ ಮಾನವೀಯತೆಯ ಮುಂದೆ ಜಾತಿ, ಮತ, ಧರ್ಮ ವೆಲ್ಲವೂ ಗೌಣ ಎನ್ನುವ ಸಂದೇಶವನ್ನು ತಮ್ಮ ಸಮಾಜಮುಖಿ ಕಾರ್ಯಗಳಿಂದ ಮತ್ತೊಮ್ಮೆ ತೋರಿಸಿಕೊಟ್ಟ ಊರುಬೈಲು ಶ್ರೀ ಭಗವಾನ್ ಸಂಘದ ಸೇವೆ ಮೆಚ್ಚುಗೆಗೆ ಪಾತ್ರವಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.