Breaking News

ತೊಡಿಕಾನ ದೇವಸ್ಥಾನದ ಬಳಿ ಸೇತುವೆ ಕಾಮಗಾರಿ ಪೂರ್ಣ

Advt_Headding_Middle
Advt_Headding_Middle


ಚೆಂಬು-ಮುಪ್ಪಸೇರು-ಕುದ್ರೆಪಾಯ ಜನರ ಅತಿ ಮುಖ್ಯ ಬೇಡಿಕೆಯಾದ ತೊಡಿಕಾನ ದೇವಸ್ಥಾನದ ಬಳಿ ನಿರ್ಮಾಣಗೊಂಡಿದೆ. ಸೇತುವೆಯು ಸಂತೋಷ್ ಕುತ್ತಮೊಟ್ಟೆಯವರ ನೇತೃತ್ವದಲ್ಲಿ ತೊಡಿಕಾನದ ಬಿಜೆಪಿ ಕಾರ್ಯಲಯದ ಕಾರ್ಯದರ್ಶಿ ಸಿ.ಟಿ.ಸುರೇಶ್‌ರವರ ಮುಂದಾಳತ್ವದಲ್ಲಿ ನಿರ್ಮಲಾ ಸೀತರಾಮರ ೨೦ ಲಕ್ಷ ಅನುದಾನದಲ್ಲಿ ಮತ್ತು ಹೆಚ್ಚುವರಿಯಾಗಿ ಶಾಸಕ ಎಸ್.ಅಂಗಾರರವರ ಅನುದಾನದಿಂದ ನಿರ್ಮಾಣಗೊಂಡ ಸೇತುವೆಯು ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ಈ ಸೇತುವೆ ಉದ್ಘಾಟನೆಗೊಳ್ಳಲಿದೆ.


ಸೇತುವೆಯ ನಿರ್ಮಾಣಕ್ಕಾಗಿ ಕೆ.ಕೆ. ನಾರಾಯಣ, ಬಾಳೆಕಜೆ ಜನಾರ್ದನ, ಪ್ರಶಾಂತ್ ಕುಂಟುಕಾಡು,ಕಾಪಿಲ ಪ್ರಶಾಂತ್, ಪಂಚಾಯತ್ ಸದಸ್ಯೆ ಧನಲಕ್ಷ್ಮಿ, ಶಿವಪ್ರಸಾದ್ ಕುಂದಲ್ಪಾಡಿ ಮೊದಲಾದವರು ಶ್ರಮಿಸಿದ್ದರು. ಕೆಲವೇ ಮೀಟರ್‌ಗಳ ಅಂತರದಲ್ಲಿ ಅತೀ ಪ್ರಾಮುಖ್ಯವಾದ ಇನ್ನೊಂದು ಸೇತುವೆಯು ಆಗಬೇಕೆಂದು ಊರವರು ಸಂಬಂಧಪಟ್ಟವರ ಗಮನಕ್ಕೆ ತಂದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.