Breaking News

ಕಲ್ಲುಗುಂಡಿ ಬಾರ್‌ನಲ್ಲಿ ಸರ್ಕಲ್ ‌ರಿಂದ ದೌರ್ಜನ್ಯದ ಆರೋಪ

Advt_Headding_Middle
Advt_Headding_Middle

ಬಾರ್ ಮಾಲಕರಿಂದ ಪುತ್ತೂರು ಡಿವೈಎಸ್‌ಪಿಗೆ ದೂರು

ಸರ್ಕಲ್ ಇನ್ಸ್‌ಪೆಕ್ಟರ್‌ರಿಂದ ಆರೋಪ ನಿರಾಕರಣೆ

ಕಲ್ಲುಗುಂಡಿಯಲ್ಲಿರುವ ಅತಿಥಿ ಬಾರ್ & ರೆಸ್ಟೋರೆಂಟ್‌ಗೆ ಸುಳ್ಯ ಸರ್ಕಲ್ ಇನ್ಸ್‌ಪೆಕ್ಟರ್ ಪರಿಶೀಲನೆಗೆ ತೆರಳಿದ್ದು, ಈ ವೇಳೆ ಅಲ್ಲಿದ್ದವರ ಮೇಲೆ ಅವರು ದೌರ್ಜನ್ಯ ನಡೆಸಿದ್ದಾರೆಂದು ಬಾರ್ ಮಾಲಕರು ಪುತ್ತೂರು ಡಿವೈಎಸ್‌ಪಿಯವರಿಗೆ ದೂರು ನೀಡಿದ್ದಾರೆ. ಈ ಆರೋಪವನ್ನು ಸರ್ಕಲ್ ಇನ್ಸ್‌ಪೆಕ್ಟರ್ ನಿರಾಕರಿಸಿದ್ದಾರೆ.


ಇಂದು ಮಧ್ಯಾಹ್ನ ಕಲ್ಲುಗುಂಡಿಯಲ್ಲಿರುವ ಅತಿಥಿ ಬಾರ್ & ರೆಸ್ಟೋರೆಂಟ್‌ಗೆ ಸಿಬ್ಬಂದಿಗಳೊಂದಿಗೆ ತೆರಳಿದ್ದ ಸುಳ್ಯ ಸರ್ಕಲ್ ಇನ್ಸ್‌ಪೆಕ್ಟರ್ ನವೀನ್‌ಚಂದ್ರ ಜೋಗಿಯವರು, ಇಲ್ಲಿ ನೀವು ಪಾರ್ಸೆಲ್ ನೀಡುವುದಲ್ಲದೆ ಇಲ್ಲಿಯೇ ಕುಡಿಯಲು ನೀಡುತ್ತಿರುವುದು ಯಾಕೆ? ಎಂದು ಪ್ರಶ್ನಿಸಿದಾಗ ಬಾರ್ ಉಸ್ತುವಾರಿಯಾಗಿದ್ದ ಕೃಷ್ಣಕುಮಾರ್‌ರವರು, ನಾವು ಹೊರಗಿನಿಂದಲೇ ಪಾರ್ಸೆಲ್ ನೀಡುತ್ತಿದ್ದೇವೆ. ವಿನಃ ಕುಡಿಯಲು ನೀಡುತ್ತಿಲ್ಲ. ಬೇಕಿದ್ದರೆ ಸಿಸಿ ಟಿವಿ ಪರಿಶೀಲಿಸಬಹುದು ಎಂದು ಹೇಳಿದರೆನ್ನಲಾಗಿದೆ. ಈ ವೇಳೆಗೆ ಮಾತಿಗೆ ಮಾತು ಬೆಳೆದು ಕೃಷ್ಣಕುಮಾರ್‌ರವರ ಕಾಲರ್ ಹಿಡಿದು ಎಳೆದಾಡಿದರೆಂದು ಆರೋಪಿಸಲಾಗಿದೆ.


ಈ ಘಟನೆಯ ಕುರಿತಂತೆ ಬಾರ್ ಮಾಲಕರಾಗಿರುವ ಸುಧೀರ್ ಶೆಟ್ಟಿ ನೆಟ್ಟಣ ಅವರು ಪುತ್ತೂರು ಡಿವೈಎಸ್‌ಪಿಯವರಿಗೆ ಮೌಖಿಕ ದೂರು ಸಲ್ಲಿಸಿದ್ದಾರೆ.
“ನಾವು ಅಲ್ಲಿ ಕಾನೂನಿನ ನಿಬಂಧನೆ ಮೀರಿ ಏನನ್ನೂ ಮಾಡುತ್ತಿಲ್ಲ. ಆದರೂ ಏಕಾಏಕಿ ಸರ್ಕಲ್ ಇನ್ಸ್‌ಪೆಕ್ಟರ್ ಈ ರೀತಿ ವರ್ತನೆ ತೋರಿರುವುದು ಸರಿಯಲ್ಲ. ಕೃಷ್ಣಕುಮಾರ್‌ರವರು ನಿವೃತ್ತ ಸೈನಿಕ. ಅದನ್ನು ಹೇಳಿದರೂ ಅವಮಾನಿಸಿ ಮಾತನಾಡಿ ಕಾಲರ್ ಹಿಡಿದಿದ್ದಾರೆ. ಪಕ್ಕದಲ್ಲೇ ಇದ್ದ ವೃದ್ದರೋರ್ವರ ಮೇಲೂ ದುರ್ವರ್ತನೆ ತೋರಿದ್ದಾರೆ. ಈ ಕುರಿತಂತೆ ಸಿಸಿ ಟಿವಿ ದೃಶ್ಯಾವಳಿಗಳಿವೆ.
ಈ ಕುರಿತಂತೆ ಡಿವೈಎಸ್‌ಪಿಯವರಿಗೆ ಮೌಖಿಕ ದೂರು ನೀಡಿದ್ದು, ಅವರು ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ಸುಧೀರ್ ಶೆಟ್ಟಿಯವರು ತಿಳಿಸಿದ್ದಾರೆ.
ಆರೋಪದ ಕುರಿತಂತೆ ಸರ್ಕಲ್ ಇನ್ಸ್‌ಪೆಕ್ಟರ್ ನವೀನ್‌ಚಂದ್ರ ಜೋಗಿಯವರನ್ನು ಸಂಪರ್ಕಿಸಿ ವಿಚಾರಿಸಿದಾಗ, ನಮಗೆ ಬಂದ ಮಾಹಿತಿಯ ಆಧಾರದಲ್ಲಿ ಅಲ್ಲಿಗೆ ಪರಿಶೀಲನೆಗಾಗಿ ಹೋಗಿದ್ದೇವೆ. ವಾರ್ನಿಂಗ್ ಮಾಡಿ ಬಂದಿದ್ದೇವೆ. ಯಾರ ಮೇಲೂ ಕೈ ಮಾಡಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.